BW News Bureau : ಪೀಣ್ಯ 220/ 66/ 11 ಕಿ.ವ್ಯಾ. ಸಾಮರ್ಥ್ಯದ ಎಸ್ಆರ್ಎಸ್ ಪೀಣ್ಯ ರಿಸೀವಿಂಗ್ ಸ್ಟೇಷನ್ನಲ್ಲಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅ. 11, ಭಾನುವಾರದಂದು ಬೆಂಗಳೂರು ಉತ್ತರ ಭಾಗದ ನೂರಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಆ ಭಾಗದ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಹಳೆಯ ಕೆ.ಜಿ. ಹಳ್ಳಿ, ಕೈವಾರ ದೇವಸ್ಥಾನ ಶೆಟ್ಟಿಹಳ್ಳಿ ರಸ್ತೆ, ರಾಘವೇಂದ್ರ ಲೇಔಟ್, ಲಕ್ಷ್ಮೀಪುರ, ಸಿಎಸ್ಆರ್ ಲೇಔಟ್, ಆರ್ಕೆಆರ್ ಲೇಔಟ್, ಅಬ್ಬಿಗೆರೆ ಇಂಡಸ್ಟ್ರಿಯಲ್ ಏರಿಯಾ, ಸಿಂಗಾಪುರ ಗಾರ್ಡನ್, ಅಬ್ಬಿಗೆರೆ ದಿಣ್ಣೆ, ವೆಂಕಟೇಶ್ವರ ಲೇಔಟ್, ಸೂರಜ್ ಲೇಔಟ್, ಎಚ್ವಿವಿ ವ್ಯಾಲಿ, ವರದರಾಜುನಗರ, ಎಂ.ಎಸ್. ಪಾಳ್ಯ, ಚಿಕ್ಕಬೆಟ್ಟಹಳ್ಳಿ, ಬಾಲಾಜಿ ಲೇಔಟ್, ಎನ್ಟಿಐ ಲೇಔಟ್, ಕ್ಲಬ್ ಹೌಸ್, ಜೆಮಿನಿ ಆಂಡ್ ಲಿಯೊ, ವೆಗಾ, ಲಿಂಕ್ಸ್, ಒರಾಯನ್ ಮಾಲ್, ಶೆರಟಾನ್ ಹೋಟೆಲ್, ಹೆಕ್ಯುìಲಸ್, ಡಾಲರಿಸ್, ಕರೋನಾ, ವರ್ಲ್ಡ್ ಟ್ರೇಡ್ ಸೆಂಟರ್ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಅದೇ ರೀತಿ, ಪೀಣ್ಯ 3ನೇ ಹಂತ, 4ನೇ ಹಂತ, ಬೃಂದಾವನ, 3ನೇ ಹಂತ, ರಾಮ ಡಿಲಕ್ಸ್, ಎನ್.ಜಿ. ಹಳ್ಳಿ, ಶಿವಪುರ ಸುತ್ತಲಿನ ಪ್ರದೇಶ, ಡಿ.ಬಿ. ಸಂದ್ರ, ಬಿಇಎಲ್ ಕಾಲೋನಿ, ಆರ್.ಸಿ. ಪುರ, ಗಂಗಮ್ಮ ವೃತ್ತ, ಎಂ.ಕೆ. ನಗರ, ಚಾಮುಂಡೇಶ್ವರಿ ಲೇಔಟ್, ಎಚ್ಎಂಟಿ ಇಂಡಸ್ಟ್ರಿಯಲ್ ಏರಿಯಾ, ಇಸ್ರೋ ಲೇಔಟ್, ಪ್ರಸ್ಟೀಜ್ ಅಪಾರ್ಟ್ಮೆಂಟ್, ಶಿವನಹಳ್ಳಿ, ಶ್ರೀನಿಧಿ ಲೇಔಟ್, ಜಲಮಂಡಳಿ, ಕೆಂಚನಹಳ್ಳಿ, ಗಂಟಿಗಾನಹಳ್ಳಿ, ಹೇರೋಹಳ್ಳಿ, ಸಾದೇನಹಳ್ಳಿ, ಅನಂತಪುರ, ಬೆಸ್ಕಾಂ, ಎಲ್ಬಿಎಸ್ ನಗರ, ಯಲಹಂಕ ಎ, ಬಿ ಸೆಕ್ಟರ್, ಆವಲಹಳ್ಳಿ, ಎಸ್.ಎನ್. ಹಳ್ಳಿ, ರಾಜಾನುಕುಂಟೆ, ಹೊನ್ನೇನಹಳ್ಳಿ, ಮುದ್ದನಹಳ್ಳಿ, ಶಿರ್ಕೆ ಅಪಾರ್ಟ್ಮೆಂಟ್, ಯಲಹಂಕ ನ್ಯೂಟೌನ್, ಬಿಎಂಎಸ್ ಹಾಸ್ಟೆಲ್, 5ನೇ ಹಂತ ಯಲಹಂಕ ನ್ಯೂಟೌನ್ ಮತ್ತಿತರ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಪ್ರಕಟಣೆ ತಿಳಿಸಿದೆ.
ವೀಡಿಯಾ, ಸೋಲದೇವನಹಳ್ಳಿ, ಮತ್ತಿಕೆರೆ, ನಾಗಪುರ, ನಂದಿನಿ ಲೇಔಟ್, ಎಸ್ಆರ್ಎಸ್ ಪೀಣ್ಯ, ಸಹಕಾರನಗರ, ಯಲಹಂಕ, ನೆಲಗೆದರನಹಳ್ಳಿಯ 66/ 11 ಕಿ.ವಾ. ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲೂ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.