Untitled Document
Sign Up | Login    
Dynamic website and Portals
  
July 24, 2015

ನಾಸಾದಿಂದ ಭೂಮಿಯನ್ನು ಹೋಲುವ ಗ್ರಹ ಪತ್ತೆ

ನಾಸಾದಿಂದ ಭೂಮಿಯನ್ನು ಹೋಲುವ ಗ್ರಹ ಪತ್ತೆ

ನ್ಯೂಯಾರ್ಕ್ : ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ನಾಸಾ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಭೂಮಿಯನ್ನೇ ಹೋಲುವ ಗ್ರಹವೊಂದನ್ನು ನಾಸಾದೂರದರ್ಶಕ ಕೆಪ್ಲರ್ ಪತ್ತೆ ಹಚ್ಚಿದ್ದು, ಭೂಮಿಗಿಂತಲೂ ಹಿರಿಯ ಹಾಗೂ ದೊಡ್ಡದಾದ ಗ್ರಹ ಇದೆಂದು ನಾಸಾ ಗುರುವಾರ ತಿಳಿಸಿದೆ.

ಈ ನೋತನ ಗ್ರಹಕ್ಕೆ ನಾಸಾ ಕೆಪ್ಲರ್ 452ಬಿ ಎಂದು ಹೆಸರಿಸಿದೆ. ಇದು ಗಾತ್ರದಲ್ಲಿ ಭೂಮಿಗಿಂತ ೬೦% ದೊಡ್ಡದಾಗಿದೆ. ಈ ಗ್ರಹದಲ್ಲಿ ನೀರಿರುವ ಸಾಧ್ಯತೆ ಇದೆ ಮತ್ತು ಇದರ ಗುರುತ್ವಾಕರ್ಷಣೆ ಭೂಮಿಗಿಂತ ಎರಡು ಪಟ್ಟು ಹೆಚ್ಚಾಗಿರಬಹುದು ಎಂದು ನಾಸಾ ತಿಳಿಸಿದೆ.

ಭೂಮಿಯ ಹಲವು ಗುಣಲಕ್ಷಣಗಳನ್ನು ಹೊಂದಿರುವ ಕೆಪ್ಲರ್ 452ಬಿ, ತನ್ನ ನಕ್ಷತ್ರದ ಕಕ್ಷೆಯನ್ನು ಸುತ್ತಲು 385 ದಿನಗಳನ್ನು ತೆಗೆದುಕೊಳ್ಳುತ್ತದೆ. ಇದು ಭೂಮಿಗಿಂತಲೂ ಹಿರಿಯ ಗ್ರಹವಾಗಿದ್ದು, 6 ಶತಕೋಟಿ ವರ್ಷಗಳ ಹಿಂದೆಯೇ ಹುಟ್ಟಿದೆ.

ಜೀವಿಗಳ ವಾಸಕ್ಕೆ ಅಗತ್ಯವಿರುವ ಎಲ್ಲಾ ವಾತಾವರಣ ಇಲ್ಲಿ ಇದೆ ಎಂದು ನಾಸಾ ಕೆಪ್ಲರ್ ನೌಕೆಯ ವಿಶ್ಲೇಷಕ ಜಾನ್ ಜೆಂಕಿನ್ಸ್ ತಿಳಿಸಿದ್ದಾರೆ.

ವಾಸಯೋಗ್ಯ ಗ್ರಹಗಳ ಪತ್ತೆಗಾಗಿ 2009 ರಲ್ಲಿ ಕೆಪ್ಲರ್ ಮಿಷನ್ ಪ್ರಾರಂಭಿಸಲಾಗಿತ್ತು. ಇದುವರೆಗೆ ಕೆಪ್ಲರ್ ಸುಮಾರು 1000 ಕ್ಷುದ್ರ ಗ್ರಹಗಳನ್ನು ಪತ್ತೆ ಹಚ್ಚಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Science & Technology

ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ವಾನ್‌ ಹಿಪ್ಪಲ್‌ ಪ್ರಶಸ್ತಿ
  • ಹಿರಿಯ ವಿಜ್ಞಾನಿ ಪ್ರೊ.ಸಿ.ಎನ್‌.ಆರ್‌.ರಾವ್‌ ಅವರಿಗೆ ಅಮೆರಿಕದ ಅತ್ಯುನ್ನತ ‘ವಾನ್‌ ಹಿಪ್ಪಲ್‌’ ಪ್ರಶಸ್ತಿ ಲಭಿಸಿದೆ.
  • ಇಸ್ರೋದಿಂದ 8 ಉಪಗ್ರಹಗಳ ಯಶಸ್ವಿ ಉಡ್ಡಯನ
  • ಇಸ್ರೋ: ಪಿಎಸ್ ಎಲ್ ವಿ-ಸಿ35 ಸ್ಕಾಟ್​ಸ್ಯಾಟ್-1ಉಪಗ್ರಹ ಉಡಾವಣೆಗೆ ಸಿದ್ಧತೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited