Untitled Document
Sign Up | Login    
Dynamic website and Portals
  
January 25, 2016

ಭಾರತದಿಂದ ವಿಯೆಟ್ನಾಂನಲ್ಲಿ ಉಪಗ್ರಹ ಟ್ರ್ಯಾಕಿಂಗ್ ಸ್ಟೇಷನ್ ನಿರ್ಮಾಣ

ನವದೆಹಲಿ : ಭಾರತ ದಕ್ಷಿಣ ವಿಯೆಟ್ನಾಂನಲ್ಲಿ ಉಪಗ್ರಹ ಟ್ರ್ಯಾಕಿಂಗ್ ಸ್ಟೇಷನ್ ಮತ್ತು ಚಿತ್ರಣ ಕೇಂದ್ರವನ್ನು (imaging centre) ನಿರ್ಮಾಣ ಮಾಡಲಿದೆ. ಇದರಿಂದ ಚೀನಾ ಮತ್ತು ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಈ ಪ್ರದೇಶವನ್ನು ಆವರಿಸುವ ಭಾರತೀಯ ಭೂ ವೀಕ್ಷಣೆಉಪಗ್ರಹಗಳ ಚಿತ್ರ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದರಿಂದ ಭಾರತ ಮತ್ತು ವಿಯೆಟ್ನಾಂ ದೇಶಗಳ ಬಾಂಧವ್ಯ ಗಟ್ಟಿಯಾಗಲಿದೆ. ಭೂ ವೀಕ್ಷಣೆಉಪಗ್ರಹಗಳಲ್ಲಿ ಕೃಷಿ, ವೈಜ್ಞಾನಿಕ ಮತ್ತು ಪರಿಸರ ಅಪ್ಲಿಕೇಶನ್ ಗಳಿವೆ. ಭದ್ರತಾ ತಜ್ಞರ ಪ್ರಕಾರ, ಇಮೇಜಿಂಗ್ ತಂತ್ರಜ್ಞಾನ ಸುಧಾರಣೆಯಾದ್ದರಿಂದ ಚಿತ್ರಗಳನ್ನು ಸಹ ಸೇನಾ ಉದ್ದೇಶಗಳಿಗಾಗಿ ಬಳಸಬಹುದು.

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮತ್ತು ವಿಯೆಟ್ನಾಂ ನಡುವೆ ವಿವಾದವಿರುವುದರಿಂದ ಹನೋಯಿ ಮುಖ್ಯವಾಗಿ ಉನ್ನತ ಗುಪ್ತಚರ, ಕಣ್ಗಾವಲು ವಿಚಕ್ಷಣ ತಂತ್ರಜ್ಞಾನಗಳನ್ನು ಹುಡುಕುತ್ತಿತ್ತು.

 

 

Share this page : 
 

Table 'bangalorewaves.bv_news_comments' doesn't exist