Untitled Document
Sign Up | Login    
Dynamic website and Portals
  
July 13, 2015

ಗಗನ್ ವಿಮಾನ ದಿಕ್ಸೂಚಿ ವ್ಯವಸ್ಥೆ ಉದ್ಘಾಟನೆ

ನವದೆಹಲಿ : ವಿಮಾನಯಾನ ಕಾರ್ಯಚಟುವಟಿಕೆಗಳಿಗಾಗಿ ದಕ್ಷ ಮತ್ತು ವೆಚ್ಚವನ್ನು ಕಡಿಮೆ ಮಾಡುವ ಗಗನ್ (ಜಿಪಿಎಸ್ - ಏಡೆಡ್ ಜಿಯೊ ಆಗ್​ವೆುಂಟೆಡ್ ನ್ಯಾವಿಗೇಷನ್) ದಿಕ್ಸೂಚಿ ವ್ಯವಸ್ಥೆಯನ್ನು ನಾಗರೀಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಸೋಮವಾರ ಉದ್ಘಾಟಿಸಿದರು.

ಯುಎಸ್. ಜಪಾನ್ ಮತ್ತು ಯುರೋಪ್ ನಲ್ಲಿ ಮಾತ್ರ ಇದ್ದ ಈ ವ್ಯವಸ್ಥೆ ಈಗ ಭಾರತದಲ್ಲೂ ಲಭ್ಯವಿದೆ. ಇಸ್ರೋ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಜಂಟಿಯಾಗಿ ಇದನ್ನು 774ಕೋಟಿ ವೆಚ್ಚದಲ್ಲಿ ಅಭಿವೃದ್ದಿಪಡಿಸಿದ್ದಾರೆ.

ಗಗನ್ ಅಕ್ಷಾಂಶ, ರೇಖಾಂಶ ಮತ್ತು ಅಧಿಕ ನಿಖರತೆಯ ಭೌಗೋಳಿಕ ಮಾಹಿತಿ ಒದಗಿಸುವ ಉಪಗ್ರಹ ಆಧಾರಿತ ದಿಕ್ಸೂಚಿ ವ್ಯವಸ್ಥೆಯಾಗಿದೆ. ಗಗನ್ ದಿಕ್ಸೂಚಿ ಎಲ್ಲಾ ವಿಮಾನಗಳ ಹಾರಟವನ್ನು ಭಾರತದಲ್ಲಿ ಮಾತ್ರವಲ್ಲದೇ ಸಾರ್ಕ್ ದೇಶಗಳಲ್ಲೂ ಅವಲೋಕಿಸುತ್ತದೆ.

 

 

Share this page : 
 

Table 'bangalorewaves.bv_news_comments' doesn't exist