Untitled Document
Sign Up | Login    
Dynamic website and Portals
  
June 22, 2016

ಇಸ್ರೋದ ಮತ್ತೊಂದು ಸಾಧನೆ: 20 ಉಪಗ್ರಹಗಳನ್ನು ಒಳಗೊಂಡ ಪಿಎಸ್​ಎಲ್​ವಿ-ಸಿ 34 ರಾಕೆಟ್ ಉಡಾವಣೆ

ಶ್ರೀಹರಿಕೋಟಾ : 20 ಉಪಗ್ರಹಗಳನ್ನು ಒಳಗೊಂಡ ಪಿಎಸ್​ಎಲ್​ವಿ-ಸಿ 34 ರಾಕೆಟ್ ನ್ನು ಉಡಾವಣೆ ಮಾಡುವ ಮೂಲಕ ಇಸ್ರೋ ಭಾರತದ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದೆ.

ಆಂಧ್ರಪ್ರದೇಶದ ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಬೆಳಿಗ್ಗೆ 9.26ಕ್ಕೆ ಪಿಎಸ್​ಎಲ್​ವಿ-ಸಿ 34 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದೆ. ಈ ಮೂಲಕ ಒಂದೇ ರಾಕೆಟ್​ ನಲ್ಲಿ ವಿಶ್ವದಲ್ಲಿಯೇ ಅತೀ ಹೆಚ್ಚು ಉಪಗ್ರಹ ಹೊತ್ತೊಯ್ದ ಎರಡನೇ ರಾಷ್ಟ್ರ ಎಂಬ ಕೀರ್ತಿಗೆ ಭಾರತ ಪಾತ್ರವಾಗಿದೆ.

725.5 ಕೆ.ಜಿ ತೂಗುವ ಕಾಟೋಸ್ಯಾಟ್-2 ಸರಣಿಯ ಭೂ ವೀಕ್ಷಣೆಯ ಉಪಗ್ರಹ ಹಾಗೂ ಒಟ್ಟು 560 ಕೆ.ಜಿ ತೂಕ ಹೊಂದಿರುವ ಅಮೆರಿಕ, ಕೆನಡ, ಜರ್ಮನಿ,ಇಂಡೋನೇಷ್ಯಾ ಹಾಗೂ ಚೆನ್ನೈನ ಸತ್ಯಾಂಬ ವಿವಿ ಮತ್ತು ಪುಣೆಯ ಎಂಜಿನಿಯರಿಂಗ್ ಕಾಲೇಜಿನ ತಲಾ ಒಂದೊಂದು ಉಪಗ್ರಹವನ್ನು ಪಿಎಸ್​ಎಲ್​ವಿ ಹೊತ್ತೂಯ್ದಿದೆ.

ಒಟ್ಟು 1,288 ಕೆ.ಜಿ ತೂಕದ 20 ಉಪಗ್ರಹಗಳು ಗ್ರಾಮೀಣ ಹಾಗೂ ಕರಾವಳಿ ಭಾಗದ ಭೂಮಿಯ ಬಳಕೆ, ನೀರಿನ ಸರಬರಾಜು ವ್ಯವಸ್ಥೆ ಸೇರಿದಂತೆ ಹಲವು ಮಾಹಿತಿ ಪಡೆಯಲು ಸಹಾಯಕವಾಗಲಿದೆ.

ಈ ಹಿಂದೆ ಒಂದೇ ರಾಕೆಟ್‌ನಲ್ಲಿ ಅತಿ ಹೆಚ್ಚು ಸಂಖ್ಯೆಯ ಉಪಗ್ರಹಗಳ ಉಡಾವಣೆ ಮಾಡಿದ ಕೀರ್ತಿ ರಷ್ಯಾಗೆ ಸಲ್ಲುತ್ತಿದ್ದು, ರಷ್ಯಾದ ಡ್ನೆಪರ್ ಸಿಲೋ ರಾಕೆಟ್ ಮೂಲಕ 2014ರ ಜೂನ್ 19 ರಂದು 33 ಉಪಗ್ರಹಗಳನ್ನು ಒಂದೇ ಬಾರಿ ಉಡಾವಣೆ ಮಾಡಿತ್ತು.

2008ರಲ್ಲಿ ಇಸ್ರೋ ಒಂದೇ ರಾಕೆಟ್ ಮೂಲಕ 10 ಉಪಗ್ರಹಗಳ ಉಡಾವಣೆ ಮಾಡಿತ್ತು.

 

 

Share this page : 
 

Table 'bangalorewaves.bv_news_comments' doesn't exist