ನಾಗ್ಪುರ : ಐಸಿಸ್ ಉಗ್ರ ಸಂಘಟನೆಯನ್ನು ಸೇರಿಕೊಳ್ಳಲು ಯತ್ನಿಸುತ್ತಿದ್ದಾರೆಂಬ ಸಂದೇಹದಿಂದ ಶನಿವಾರ ಉಗ್ರ ನಿಗ್ರಹ ದಳ (ಎಟಿಎಸ್) ನಾಗ್ಪುರ ವಿಮಾನ ನಿಲ್ದಾಣದಲ್ಲಿ ಮೂವರನ್ನು ಬಂಧಿಸಿದೆ.
ಎಟಿಎಸ್ ಮೂಲಗಳ ಪ್ರಕಾರ, ಬಂಧಿತರು ತೆಲಂಗಾಣ ಮೂಲದವರಾಗಿದ್ದು ಜಮ್ಮು-ಕಾಶ್ಮೀರಕ್ಕೆ ತೆರಳುತ್ತಿದ್ದರು.
ಬಂಧಿಸಲ್ಪಟ್ಟಿರುವ ಮೂವರು ವ್ಯಕ್ತಿಗಳು ಒಂದು ದಿನದ ಹಿಂದಷ್ಟೇ ರಸ್ತೆ ಮಾರ್ಗವಾಗಿ ಹೈದರಾಬಾದ್ ನಿಂದ ನಾಗ್ಪುರಕ್ಕೆ ಬಂದಿದ್ದರು. ನಾಗ್ಪುರ ವಿಮಾನ ನಿಲ್ದಾಣದಲ್ಲಿ ಅವರು ಶ್ರೀನಗರಕ್ಕೆ ಹೋಗುವ ಇಂಡಿಗೋ ವಿಮಾನವನ್ನು ಹತ್ತುವವರಿದ್ದರು. ಆಗ ತೆಲಂಗಾಣ ಪೊಲೀಸರು ಮತ್ತು ಮಹಾರಾಷ್ಟ್ರದ ಉಗ್ರ ನಿಗ್ರಹ ದಳದವರು ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತರನ್ನು ಬಂಧಿಸಿದೆ ಎಂದು ತಿಳಿದು ಬಂದಿದೆ.
English Summary : ATS has arrested 3 youths who were allegedly planning to join terror group ISIS at Nagpur Airport.