Untitled Document
Sign Up | Login    
Dynamic website and Portals
  
May 3, 2016

ಮೂರು ವಾಸಯೋಗ್ಯ ಗ್ರಹಗಳನ್ನು ಪತ್ತೆ ಮಾಡಿದ ವಿಜ್ಞಾನಿಗಳು

ಪ್ಯಾರಿಸ್ : ಸೌರ ಮಂಡಲದಾಚೆಗೆ ಮೂರು ಸಂಭಾವ್ಯ ವಾಸಯೋಗ್ಯ ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಭೂಮಿಯಿಂದ 39 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ಈ ತಂಪಾದ ಕುಬ್ಜಗ್ರಹವನ್ನು ಪತ್ತೆ ಹಚ್ಚಲಾಗಿದೆ. ಇವುಗಳ ಗಾತ್ರ ಸುಮಾರು ನಮ್ಮ ಭೂಮಿ ಅಥವಾ ಶುಕ್ರನ ಗಾತ್ರದಲ್ಲಿರಬಹುದು ಎಂದು ಹೇಳಲಾಗಿದೆ.

ಬೆಲ್ಜಿಯಂನ ಲೀಗ್‌ ವಿಶ್ವವಿದ್ಯಾಲಯಖಗೋಳ ವಿಜ್ಞಾನಿ ಮೈಕೆಲ್‌ ಗಿಲ್ಲೊನ್‌ ಅವರ ನೇತೃತ್ವದ ತಂಡ ಗ್ರಹಗಳ ಕುರಿತ ಅಧ್ಯಯನದಲ್ಲಿ ತೊಡಗಿದೆ. ಇವರು ಚಿಲಿಯಲ್ಲಿರುವ ಅತಿ ದೊಡ್ಡದಾದ ದೂರದರ್ಶಕ ವನ್ನು ಈ ಸಂಶೋಧನೆಗೆ ಬಳಸಿದ್ದಾರೆ.

ಸಂಶೋಧನಾ ಮಾಹಿತಿ ಪ್ರಕಾರ ಅಲ್ಲಿನ ವಾತಾವರಣ ವಾಸಯೋಗ್ಯವಾಗಿದೆ ಎಂಬುದೇ ವಿಶೇಷವಾಗಿದೆ ಎನ್ನಲಾಗಿದೆ. ಸುಮಾರು ಒಂದು ತಿಂಗಳಿಂದ ಈ ಗ್ರಹಗಳ ಬಗ್ಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ವಾಸಯೋಗ್ಯ ಗ್ರಹಗಳ ಕುರಿತ ವಿಜ್ಞಾನಿಗಳ ಅಧ್ಯಯನವನ್ನು 'ನೇಚರ್‌' ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ.

 

 

Share this page : 
 

Table 'bangalorewaves.bv_news_comments' doesn't exist