Untitled Document
Sign Up | Login    
Dynamic website and Portals
  

Related News

ಮೊದಲ ಬಜೆಟ್ ಗೂ ಮುನ್ನ ಸಂಸತ್ ನಲ್ಲಿ ಶ್ವೇತಪತ್ರ ಮಂಡಿಸಲು ಯೋಚಿಸಿದ್ದೆವು: ಪ್ರಧಾನಿ ಮೋದಿ

ನಮ್ಮ ಸರ್ಕಾರ ಮೊದಲ ಬಜೆಟ್‌ ಮಂಡಿಸುವ ಮುನ್ನ, ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಸಂಸತ್ತಿನಲ್ಲಿ ಶ್ವೇತಪತ್ರ ಮಂಡಿಸುವ ಯೋಚನೆ ಮಾಡಿದ್ದೆವು. ಆದರೆ, ರಾಷ್ಟ್ರದ ಹಿತ ಅಥವಾ ರಾಜಕೀಯದಲ್ಲಿ ಯಾವುದಾದರೂ ಒಂದನ್ನು ನಾನು ಆಯ್ಕೆ ಮಾಡಿಕೊಳ್ಳಬೇಕಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಖಾಸಗಿ...

ಭಾರತ-ವಿಯೆಟ್ನಾಂ ನಡುವೆ ಮಹತ್ವದ ಒಪ್ಪಂದಗಳಿಗೆ ಸಹಿ

ರಕ್ಷಣಾ ಕ್ಷೇತ್ರ, ಮಾಹಿತಿ ತಂತ್ರಜ್ನಾನ, ಸೈಬರ್ ಸೆಕ್ಯೂರಿಟಿ, ಆರೋಗ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತ ಮತ್ತು ವಿಯೆಟ್ನಾಂ ನಡುವೆ 12 ಮಹತ್ವದ ಒಪ್ಪಂದಗಳಿಗೆ ಸಹಿಹಾಕಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಯೆಟ್ನಾಂ ರಾಜಧಾನಿ ಹನೋಯ್ ನಲ್ಲಿ ವಿಯೆಟ್ನಾಂ ಪ್ರಧಾನಿ ಗುಯೆನ್ ಕ್ಸುವಾನ್...

ಜಿಎಸ್ ಟಿ ಮಸೂದೆ ಯುಪಿಎ ಸರ್ಕಾರದ ಕೂಸು: ಸಿದ್ದರಾಮಯ್ಯ

ರಾಷ್ಟ್ರಾಧ್ಯಂತ ಏಕ ರೂಪದ ತೆರಿಗೆ ವ್ಯವಸ್ಥೆ ಇರಬೇಕೆಂಬ ಸದುದ್ದೇಶ ಹೊಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)ವಿಧೇಯಕವು ಯುಪಿಎ ಸರ್ಕಾರದ ಕೂಸು ಎಂದು ಬಣ್ಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದನ್ನು ವಿರೋಧಿಸುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ...

ಆರ್​ಬಿಐ ಗವರ್ನರ್ ಆಗಿ ಎರಡನೇ ಅವಧಿಯಲ್ಲಿ ಮುಂದುವರೆಯುತ್ತಿಲ್ಲ: ರಘುರಾಮ್ ರಾಜನ್

ಭಾರತೀಯ ರಿಸರ್ವ್‌ ಬ್ಯಾಂಕ್‌ ಗವರ್ನರ್‌ ಆಗಿ ಎರಡನೇ ಅವಧಿಗೆ ಮುಂದುವರಿಯಲು ನಿರಾಕರಿಸಿರುವ ರಾಘುರಾಮ್ ರಾಜನ್, ಸೆಪ್ಟೆಂಬರ್ 4ರಂದು ನಿವೃತ್ತಿ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ. ನಿವೃತ್ತಿ ಬಳಿಕ ಅಮೆರಿಕದಲ್ಲಿನ ತಮ್ಮ ನೆಚ್ಚಿನ ಬೋಧನಾ ವೃತ್ತಿಗೆ ಮರಳುವುದಾಗಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ರಾಜನ್‌ ಅವರು ತಾವು 2ನೇ ಅವಧಿಗೆ...

ವಿದೇಶಿ ಬಂಡವಾಳ ಹೂಡಿಕೆ ಮೂಲಕ ರಾಷ್ಟ್ರೀಯ ವಹಿವಾಟು ಉನ್ನತೀಕರಣ: ಪ್ರಧಾನಿ ಮೋದಿ

ವಿದೇಶೀ ಹೂಡಿಕೆಗಳನ್ನು ಆಕರ್ಷಿಸುವ ಸಲುವಾಗಿ ನಾವು ನಮ್ಮ ಆರ್ಥಿಕತೆಯನ್ನು ತೆರೆದಿದ್ದೇವೆ. ಭ್ರಷ್ಟಾಚಾರವನ್ನು ನಿಗ್ರಹಿಸುವ ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೆಂದ್ರ ಎನ್.ಡಿ.ಎ ಸರ್ಕಾರ ಎರಡು ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಗೆ ನೀಡಿರುವ ಸಂದರ್ಶನದಲ್ಲಿ...

ಭಾರತದ ಆರ್ಥಿಕತೆ ಅಂಧರ ರಾಜ್ಯದಲ್ಲಿ ಒಕ್ಕಣ್ಣ ಅರಸನಂತೆ: ರಘುರಾಮ ರಾಜನ್

ಜಾಗತಿಕ ರಂಗದಲ್ಲಿ ಭಾರತದ ಆರ್ಥಿಕತೆ, ಅಂಧರ ರಾಜ್ಯದಲ್ಲಿ ಒಕ್ಕಣ್ಣ ಅರಸನಂತೆ ಎಂದು ಆರ್‌.ಬಿ.ಐ ಗವರ್ನರ್‌ ರಘುರಾಮ ರಾಜನ್‌ ಹೇಳಿದ್ದಾರೆ. ವಿಶ್ವ ಬ್ಯಾಂಕ್‌ ಮತ್ತು ಐಎಂಎಫ್ ಹಾಗೂ ಜಿ20 ವಿತ್ತ ಸಚಿವರು ಮತ್ತು ಸೆಂಟ್ರಲ್‌ ಬ್ಯಾಂಕ್‌ ಗವರ್ನರ್‌ ಗಳ ಸಭೆಯಲ್ಲಿ ಪಾಲ್ಗೊಳ್ಳಲು ವಾಷಿಂಗ್ಟನ್...

ದೇಶದಲ್ಲಿ ಉತ್ತಮ ಮಳೆಯಾದರೆ ಆರ್ಥಿಕ ಪ್ರಗತಿ: ಅರುಣ್ ಜೇಟ್ಲಿ

ಹವಾಮಾನ ಇಲಾಖೆ ಇತ್ತೀಚೆಗೆ ನೀಡಿರುವ ವರದಿಯಂತೆ ಈ ವರ್ಷ ಭಾರತದಲ್ಲಿ ಉತ್ತಮ ಮಳೆಯಾದರೆ ವೇಗವಾಗಿ ಪ್ರಗತಿ ಹೊಂದಲು ಸಾಧ್ಯವಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಉತ್ತಮ ಮಳೆ ಬಂದರೆ ದೇಶದ ರೈತರು ಚೆನ್ನಾಗಿ ಬೆಳೆ ಬೆಳೆಯಬಹುದು. ಇದರಿಂದ ನಮ್ಮ...

ವಿದ್ಯುತ್ ದರ ಹೆಚ್ಚಳ ಸಾಧ್ಯತೆ: ಇಂದು ಕೆ.ಇ.ಆರ್.ಸಿ ನಿರ್ಧಾರ

ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ (ಕೆ.ಇ.ಆರ್‌.ಸಿ)ವು ಬುಧವಾರ ವಿದ್ಯುತ್‌ ದರ ಪರಿಷ್ಕರಣೆ ಮಾಡಲಿದ್ದು, ರಾಜ್ಯದ ಜನರಿಗೆ ಕರೆಂಟ್ 'ಶಾಕ್‌' ನೀಡಲಿದೆ. ಪ್ರತಿ ಯೂನಿಟ್‌ಗೆ 34ರಿಂದ 38 ಪೈಸೆ ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆ.ಇ.ಆರ್‌.ಸಿ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ಬೆಳಗ್ಗೆ 11.30ಕ್ಕೆ...

ಬ್ರಸೆಲ್ಸ್‌ ಗೆ ಪ್ರಧಾನಿ ಮೋದಿ ಭೇಟಿ: ಉಗ್ರರ ದಾಳಿಯಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಕೆ

ಪ್ರಧಾನಿ ನರೇಂದ್ರ ಮೋದಿಯವರ ಮೂರು ರಾಷ್ಟ್ರಗಳ ಪ್ರವಾಸ ಆರಂಭವಾಗಿದ್ದು, ಕಳೆದ ವಾರ ಭೀಕರ ಉಗ್ರರ ದಾಳಿಗೆ ತುತ್ತಾದ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್‌ ನ ಮೆಲ್ಬೀಕ್ ಮೆಟ್ರೊ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸ್ಮಾರಕಕ್ಕೆ ಪುಷ್ಪ ಗುಚ್ಛ...

ಜಾಗತಿಕ ಆರ್ಥಿಕ ಚೇತರಿಕೆಗೆ ಏಷ್ಯಾ ಭರವಸೆಯ ಆಶಾಕಿರಣಃ ಪ್ರಧಾನಿ ನರೇಂದ್ರ ಮೋದಿ

ಜಾಗತಿಕ ಆರ್ಥಿಕತೆಯ ಚೇತರಿಕೆಗೆ ಏಷ್ಯಾ ಭರವಸೆಯ ಆಶಾಕಿರಣವಾಗಿದೆ, 21 ನೇ ಶತಮಾನ ಏಷ್ಯಾದ ಶತಮಾನವೆಂದು ತಜ್ಞರು ಹೇಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಭಾರತ ಹೋಡಿಕೆಗೆ ನೆಚ್ಚಿನ ತಾಣವಾಗಿ ಉನ್ನತ ಶ್ರೇಯಾಂಕಗಳಲ್ಲಿದೆ. ಈ ನಿಟ್ಟಿನಲ್ಲಿ ಸುಧಾರಣೆಗಳು ಮುಂದುವರೆಯಿತ್ತವೆ ಎಂದು...

ಆರ್ಥಿಕ ಸಮೀಕ್ಷೆ 2015 - 16: ಕೆಲವು ವರ್ಷಗಳಲ್ಲಿ ಭಾರತವು ಶೇಕಡಾ 8ರ ಬೆಳವಣಿಗೆಯನ್ನು ಸಾಧಿಸಲಿದೆ

ಏಪ್ರಿಲ್ 1ರಿಂದ ಆರಂಭವಾಗಲಿರುವ 2016-17ನೇ ಸಾಲಿನ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಒಟ್ಟು ರಾಷ್ಟ್ರೀಯ ಜಿಡಿಪಿ ಶೇಕಡಾ 7ರಿಂದ 7.5ರಷ್ಟು ಬೆಳವಣಿಗೆಯಾಗಲಿದೆ ಎಂದು ಸಂಸತ್ತಿನಲ್ಲಿ ಶುಕ್ರವಾರ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆಯು ಹೇಳಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ 2016-17ರ...

ದಲಿತ ಉದ್ಯಮಿಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿಃ ನಮ್ಮ ಸರ್ಕಾರ ನಿಮ್ಮ ಸರ್ಕಾರ

ಮಂಗಳವಾರ ದೆಹಲಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉದ್ಯಮಿಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ ಎಂದು ಹೇಳಿದರು. ನಮ್ಮ ಸರ್ಕಾರ ನಿಮ್ಮ ಸರ್ಕಾರ (ಆಪ್ ಕಿ ಸರ್ಕಾರ್),...

ಆರ್ಥಿಕ ಬೆಳವಣಿಗೆಗಾಗಿ ಅನೇಕ ಸುಧಾರಣೆಗಳಿಗೆ ಅಸ್ತು ಹೇಳಿದ ಮೋದಿ ಸರ್ಕಾರ

ಕೇಂದ್ರ ಸರ್ಕಾರ ಬುಧವಾರ ಅನೇಕ ನೀತಿ ಬದಲಾವಣೆಗಳನ್ನು ಘೋಷಿಸಿದೆ. ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ಕೋಲ್ ಇಂಡಿಯಾ ಲಿಮಿಟೆಡ್ ನ ಶೇ 10 ರಷ್ಟು ಪಾಲು ಮಾರಾಟ, ಕೊಚ್ಚಿನ್ ಶಿಪ್ ಯಾರ್ಡ್ ಗೆ ಸಾರ್ವಜನಿಕ ಶೇರು, ಕುಸಿಯುತ್ತಿರುವ ರಫ್ತಿಗೆ ಉತ್ತೇಜನ ನೀಡಲು...

ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆಃ ಪ್ರಧಾನಿ ನರೇಂದ್ರ ಮೋದಿ

ಕಳೆದ ವರ್ಷ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದರು. ಆರ್ಥಿಕ ಪರಿವರ್ತನೆಯ ಕೆಲಸ ಮ್ಯಾರಥಾನ್ ನ ಹಾಗೆ ಎಂದು ವಿವರಿಸಿದರು. ಎಲ್ಲಾ ಆರ್ಥಿಕ ಸೂಚಕಗಳ...

ವೇಗವಾಗಿ ಅಭಿವೃದ್ಧಿ ಹೊಂದಲು ಆಫ್ರಿಕಾದ ಮೇಲೆ ಭಾರತದ ಕಣ್ಣುಃ ಅರುಣ್ ಜೇಟ್ಲಿ

ಭಾರತ ಆರ್ಥಿಕವಾಗಿ ಅತೀ ವೇಗವಾಗಿ ಬೆಳೆಯಲು ಬಯಸುತ್ತದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಗಳವಾರ ಹೇಳಿದ್ದಾರೆ. ಆಫ್ರಿಕಾದಲ್ಲಿ ವ್ಯಾಪಾರ ಮತ್ತು ಆರ್ಥಿಕ ಸಹಕಾರದ ಹೊಸ ಅವಕಾಶಗಳ ಮೇಲೆ ಭಾರತ ಕಣ್ಣಿಟ್ಟಿದೆ. ಭಾರತ ಇಂದು ಅತೀ ವೇಗವಾಗಿ ಅಭಿವೃದ್ಧಿ ಹೊಂದಲು ಬಯಸುತ್ತದೆ. ನಾವು...

ಜಿ ಎಸ್ ಟಿ ಯನ್ನು ಏಪ್ರಿಲ್ 1, 2016 ರಿಂದ ಜಾರಿಗೊಳಿಸಬಯಸುತ್ತೇನೆಃ ಅರುಣ್ ಜೇಟ್ಲಿ

ಹೊಸ ಸರಕು ಮತ್ತು ಸೇವಾ ತೆರಿಗೆ ನೀತಿಗೆ ಶಾಸಕಾಂಗದಲ್ಲಿ ಅನುಮೋದನೆ ಕಾಂಗ್ರೆಸ್ ಅಡ್ಡಿಪಡಿಸಿದರೂ ಸಹ ಎಪ್ರಿಲ್ 1, 2016 ರಿಂದ ಜಾರಿಗೊಳಿಸಬಯಸುತ್ತೇನೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಬುಧವಾರ ಹೇಳಿದ್ದಾರೆ. ಬಿಸಿನೆಸ್ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ,...

ಇಂಡಿಯಾ ಐ ಎನ್ ಸಿ ಜೊತೆ ಪ್ರಧಾನಿ ಮೋದಿ ಮಾತುಕತೆ

ಜಾಗತಿಕ ಆರ್ಥಿಕ ಪ್ರಕ್ಷುಬ್ಧ ಪರಿಸ್ಥಿತಿಯನ್ನು ಭಾರತ ಹೇಗೆ ನಿರ್ವಹಿಸಬಹುದು ಎನ್ನುವುದರ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಇಂಡಿಯಾ ಐ ಎನ್ ಸಿ ಯ ಸಭೆ ಕರೆದಿದ್ದರು. ಜೊತೆಗೆ ಚೀನಾದ ಮಾರುಕಟ್ಟೆ ಮತ್ತು ಅಭಿವೃದ್ಧಿ ಸಮಸ್ಯೆಗಳಿಂದ ಭಾರತದ ಮುಂದಿರುವ...

ಕಪ್ಪು ಹಣ ಭಾರತಕ್ಕೆ ವಾಪಸ್ ತರುವುದು ಕಷ್ಟಕರವಲ್ಲ: ಸುಬ್ರಹ್ಮಣ್ಯನ್ ಸ್ವಾಮಿ

ವಿದೇಶಗಳಲ್ಲಿ ಕೂಡಿಟ್ಟ ಅಂದಾಜು 125 ಲಕ್ಷ ಕೋಟಿ ರೂ. ಕಪ್ಪುಹಣವನ್ನು ಮೋದಿ ಸರಕಾರ ಭಾರತಕ್ಕೆ ವಾಪಸ್ ತರುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕ ಡಾ.ಸುಬ್ರಹ್ಮಣ್ಯನ್ ಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮೆರಿಕದ ವಾಶಿಂಗ್ಟನ್ ಡಿ.ಸಿ. ಹತ್ತಿರದ ವರ್ಜೀನಿಯಾ ಪಟ್ಟಣದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ...

ಕಾಂಗ್ರೆಸ್ ವಿರೋಧದ ನಡುವೆ ಸರಕು ಮತ್ತು ಸೇವಾ ತೆರಿಗೆ ಮಸೂದೆ ರಾಜ್ಯಸಭೆಯಲ್ಲಿ ಮಂಡನೆ

ನರೇಂದ್ರ ಮೋದಿ ಸರಕಾರ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.) ಮಸೂದೆಯನ್ನು ಮಂಗಳವಾರ ರಾಜ್ಯಸಭೆಯಲ್ಲಿ ಮಂಡಿಸಿದೆ. ಲೋಕಸಭೆಯಲ್ಲಿ ಈ ಮಸೂದೆ ಈಗಾಗಲೇ ಒಪ್ಪಿಗೆ ಪಡೆದಿದ್ದು, ರಾಜ್ಯಸಭೆಯಲ್ಲಿ ವಿಪಕ್ಷ ಕಾಂಗ್ರೆಸ್ ಸಂಸದರ ನಿರಂತರ ಪ್ರತಿಭಟನೆಯಿಂದ ಈವರೆಗೆ ಮಸೂದೆ...

ಗಾಂಧಿ ಕುಟುಂಬದ ಹೊರಗಿನವರು ದೇಶ ನಡೆಸುವುದು ಸೋನಿಯಾ-ರಾಹುಲ್ ಗೆ ಸಹ್ಯವಾಗುತ್ತಿಲ್ಲ-ಜೇಟ್ಲಿ

2014ರ ಚುನಾವಣಾ ಸೋಲನ್ನು ಅರಗಿಸಿಕೊಳ್ಳಲು ಗಾಂಧಿ ಪರಿವಾರಕ್ಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ದೇಶದ ಪ್ರಗತಿಗೆ ಅವರು ತಡೆಯೊಡ್ಡುತ್ತಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಸೋನಿಯಾ-ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಂಗಳವಾರ ಕಾಂಗ್ರೆಸ್ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆ ರಾಜ್ಯಸಭೆಯಲ್ಲಿ ಮಹತ್ವದ ಜಿ.ಎಸ್.ಟಿ...

ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷ ಬಲವರ್ಧನೆ ಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಗ್ಗೆ ಪಟ್ನಾ ತಲುಪಿದ್ದಾರೆ. ಪ್ರಧಾನಿ ಮೋದಿ ಅವರು ಶನಿವಾರದಿಂದ ಬಿಹಾರದಲ್ಲಿ ಪ್ರಚಾರ ಪ್ರಾರಂಭಿಸಲಿದ್ದಾರೆ. ಅಕ್ಟೋಬರ್ ಯಾ ನವೆಂಬರ್ ತಿಂಗಳಲ್ಲಿ ನಡೆಯುವ ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪ್ರಧಾನಿ...

ಗ್ರೀಸ್ ಕರಿಛಾಯೆ: ಚೀನಾ ಶೇರು ಮಾರುಕಟ್ಟೆ ಕುಸಿತ, ನಡುಗಿದ ಮುಂಬೈ ಸೆನ್ಸೆಕ್ಸ್

ಹದಗೆಟ್ಟಿರುವ ಗ್ರೀಸ್ ಆರ್ಥಿಕ ಸ್ಥಿತಿ ಇತರ ದೇಶಗಳ ಮೇಲೂ ಪರಿಣಾಮ ಬೀರಲಾರಂಭಿಸಿದೆ. ಚೀನಾದ ಪ್ರತಿಷ್ಠಿತ ಶಾಂಘೈ ಶೇರು ಮಾರುಕಟ್ಟೆ 7% ಕುಸಿದಿದ್ದು, ಭಾರತದಲ್ಲೂ ಇದರ ವ್ಯತಿರಿಕ್ತ ಪರಿಣಾಮ ಕಂದುಬರುತ್ತಿದೆ. ಗ್ರೀಸ್‌ನ ಭವಿಷ್ಯ ಭಯದ ಪರಿಣಾಮವಾಗಿ ಬುಧವಾರ ಮಧ್ಯಾಹ್ನದ ವೇಳೆಗೆ ಮುಂಬೈ...

ರಷ್ಯಾ ಮತ್ತು 5 ಮಧ್ಯ ಏಷಿಯಾ ದೇಶಗಳಿಗೆ ಪ್ರಧಾನಿ ಮೋದಿ ಪ್ರವಾಸ ಆರಂಭ

ಪ್ರಧಾನಿ ನರೇಂದ್ರ ಮೋದಿಯವರು 8 ದಿನಗಳ 5 ಮಧ್ಯ ಏಷಿಯಾ ರಾಷ್ಟ್ರಗಳು ಮತ್ತು ರಷ್ಯಾ ಪ್ರವಾಸಕ್ಕಾಗಿ ಇಂದು ದೆಹಲಿಯಿಂದ ತೆರಳಿದರು. ಬ್ರಿಕ್ಸ್ ಹಾಗೂ ಶಾಂಘೈ ಸಹಕಾರ ಸಂಘಟನೆ (Shanghai Cooperation Organisation) ಶೃಂಗಸಭೆಗಳಲ್ಲಿ ಭಾಗವಹಿಸುವ ಕಾರ್ಯಕ್ರಮಗಳೂ ಅಲ್ಲದೆ ಪ್ರಧಾನಿ ಮೋದಿ ತಾವು ಭೇಟಿ ನೀಡುವ...

ಆರ್ಥಿಕ ಸಂಕಷ್ಟ: ಗ್ರೀಸ್ ದಿವಾಳಿಯತ್ತ

ಆರ್ಥಿಕ ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕಿರುವ ಯುರೋಪಿಯನ್‌ ಒಕ್ಕೂಟದ ಸದಸ್ಯ ದೇಶವಾದ ಗ್ರೀಸ್‌, ಈಗ ವಿಶ್ವದ ಆರ್ಥಿಕತೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಐಎಂಎಫ್ ಸೇರಿ ವಿವಿಧ ಐರೋಪ್ಯ ದೇಶಗಳು, ಸಂಸ್ಥೆಗಳಿಂದ ಗ್ರೀಸ್‌ 2008ರಲ್ಲಿ 16 ಲಕ್ಷ ಕೋಟಿ ರೂ.ನಷ್ಟು ಸಾಲ ಪಡೆದಿತ್ತು....

ಆರ್ಥಿಕಾಭಿವೃದ್ಧಿ ಪ್ರಗತಿಯಲ್ಲಿ ಚೀನಾವನ್ನು ಹಿಂದಿಕ್ಕಿದ ಭಾರತ: ವಿಶ್ವ ಬ್ಯಾಂಕ್

ಭಾರತ ತನ್ನ ಆರ್ಥಿಕಾಭಿವೃದ್ಧಿ ಪ್ರಗತಿಯನ್ನು ಶೇ.7.5ಕ್ಕೆ ಹೆಚ್ಚಿಸಿಕೊಳ್ಳುವ ಮೂಲಕ ಚೀನಾ ದೇಶವನ್ನು ಹಿಂದಿಕ್ಕಿದೆ ಎಂದು ವಿಶ್ವ ಬ್ಯಾಂಕ್ ನ ಉಪಾಧ್ಯಕ್ಷ ಹಾಗೂ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ಬಸು ತಿಳಿಸಿದ್ದಾರೆ. ಪ್ರಸ್ತುತ ಚೀನಾ ದೇಶದ ಆರ್ಥಿಕ ಪ್ರಗತಿ ಶೇ.7.1ರಷ್ಟಿದೆ. ಭಾರತದಲ್ಲಿನ ಪ್ರಸಕ್ತ ಆರ್ಥಿಕ...

ಆರ್.ಬಿ.ಐನಿಂದ ರೆಪೋ ದರ ಕಡಿತ: ಇಎಂಐ ಕೂಡ ಇಳಿಕೆ ಸಾಧ್ಯತೆ

ಭಾರತೀಯ ರಿಸರ್ವ ಬ್ಯಾಂಕ್‌ ರೆಪೋ ದರವನ್ನು ಶೇ 0.25ರಷ್ಟು ಕಡಿಮೆ ಮಾಡಿದೆ. ಇದರಿಂದಾಗಿ ಗೃಹ ಸಾಲ,ವಾಹನ ಸಾಲ ಮತ್ತು ಇನ್ನಿತರಸಾಲದ ಬಡ್ಡಿದರ ಇಳಿಕೆಯಾಗಿ, ಮರು ಪಾವತಿ ಕಂತು (ಇಎಂಐ) ಹೊರೆ ಕಡಿಮೆಯಾಗುವ ಸಾಧ್ಯತೆಗಳಿದ್ದು, ಜತೆಗೆ ಆರ್ಥಿಕತೆಗೂ ಉತ್ತೇಜನ ಸಿಗಲಿದೆ. ಆರ್.ಬಿ.ಐ ಗವರ್ನರ್ ರಘುರಾಮ್‌...

ಮೋದಿ ಎಫೆಕ್ಟ್ : 2014-15ಲ್ಲಿ ಆರ್ಥಿಕ ಬೆಳವಣಿಗೆ 7.3ಕ್ಕೆ ಏರಿಕೆ

ಉತ್ತಮ, ಪಾರದರ್ಶಕ ಆಡಳಿತ ಮತ್ತು ದೇಶದ ಅಭಿವೃದ್ಧಿ ಮಂತ್ರವನ್ನು ಜಪಿಸುತ್ತ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರ ಮೊದಲ ವರ್ಷ ಉತ್ತಮ ಫಲಿತಾಂಶವನ್ನೇ ದೇಶಕ್ಕೆ ಕೊಟ್ಟಿದೆ. ದೇಶದ ಆರ್ಥಿಕ ಬೆಳವಣಿಗೆ 2014-15 ವಿತ್ತ ವರ್ಷದಲ್ಲಿ ಶೇ.7.3ಕ್ಕೆ ಹೆಚ್ಚಿದ್ದು, ದೇಶ ಅಭಿವೃದ್ಧಿ ಪಥದತ್ತ...

ಜನರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ: ಪ್ರಧಾನಿ ಮೋದಿ

ನನ್ನ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ಒಂದು ವರ್ಷದಲ್ಲಿ ದೇಶ ಆರ್ಥಿಕ ಪುನಶ್ಚೇತನ ಕಂಡಿದೆ ಮತ್ತು ಸರ್ಕಾರ ಜನರ ನಂಬಿಕೆ ಉಳಿಸಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎನ್‌.ಡಿ.ಎ ಸರ್ಕಾರಕ್ಕೆ ಇಂದಿಗೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ದೇಶದ ಜನತೆಗೆ...

ತೆರಿಗೆ ಹೊರೆ ಇಳಿಕೆ: ಉದ್ಯಮಸ್ನೇಹಿ ಭಾರತ ನಿರ್ಮಾಣ- ಅರುಣ್ ಜೇಟ್ಲಿ

ಎನ್.ಡಿ.ಎ ನೇತೃತ್ವದ ಕೇಂದ್ರ ಸರ್ಕಾರ ಒಂದು ವರ್ಷದ ಅಧಿಕಾರಾವಧಿ ಪೂರೈಸಿದೆ. ಈ ನಿಟ್ಟಿನಲ್ಲಿ ತೆರಿಗೆ ಹೊರೆಯನ್ನು ಮತ್ತಷ್ಟು ಇಳಿಸಿ, ಭಾರತದಲ್ಲಿ ಇನ್ನಷ್ಟು ಉದ್ಯಮಗಳಿಗೆ ಅವಕಾಶ ನೀಡುವ ಮೂಲಕ ಉದ್ಯಮಸ್ನೇಹಿ ಭಾರತವನ್ನಾಗಿ ಮಾಡುವ ಪ್ರಮುಖ ಗುರಿ ಹೊಂದಲಾಗಿದೆ ಎಂದು ಕೇಂದ್ರ ವಿತ್ತ ಸಚಿವ...

ಬಿಜೆಪಿ ವಿರುದ್ಧ ಹಿರಿಯ ನಾಯಕ ಅರುಣ್ ಶೌರಿ ವಾಗ್ದಾಳಿ

ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಬಿಜೆಪಿ ಸಿದ್ಧಾಂತವಾದಿ ಯಾಗಿದ್ದ ಮಾಜಿ ಸಚಿವ ಅರುಣ್‌ ಶೌರಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕಾರ್ಯವೈಖರಿಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. 10 ಲಕ್ಷ ರೂ. ಸೂಟು ಬೂಟುಗಳನ್ನು ಧರಿಸಿ ಗಾಂಧೀಜಿ ಅವರ ಸರಳತೆಯ ಬಗ್ಗೆ ಮೋದಿ ಮಾತನಾಡುತ್ತಿದ್ದಾರೆ....

ಪ್ರಧಾನಿಯನ್ನು ಭೇಟಿ ಮಾಡಿದ ಮುಸ್ಲಿಮ್ ನಾಯಕರ ನಿಯೋಗ: ಭಯೋತ್ಪಾದನೆ ಬಗ್ಗೆ ಚರ್ಚೆ

'ಮುಸ್ಲಿಮ್ ಸಮುದಾಯ'ದ ನಾಯಕರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು, ಭಯೋತ್ಪಾದನೆ ಹಾಗೂ ಯುವಕರಲ್ಲಿ ಹೆಚ್ಚುತ್ತಿರುವ ತೀವ್ರಗಾಮಿತನದ ಬಗ್ಗೆ ಮಾತುಕತೆ ನಡೆಸಿದ್ದಾರೆ. ಭಯೋತ್ಪಾದನೆ ಹಾಗೂ ಯುವಕರಲ್ಲಿ ಕಂಡುಬರುತ್ತಿರುವ ಭಯೋತ್ಪಾದಕ ಪ್ರವೃತ್ತಿಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮುಸ್ಲಿಮ್ ಸಮುದಾಯದ ನಾಯಕರ...

ಏಪ್ರಿಲ್‌ ನಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಪ್ರಾರಂಭ: ವೆಂಕಯ್ಯ ನಾಯ್ಡು

ಎನ್‌.ಡಿ.ಎ ಸರ್ಕಾರದ ಪ್ರಮುಖ ಚುನಾವಣಾ ಭರವಸೆಗಳ ಪೈಕಿ ಒಂದಾದ ಸ್ಮಾರ್ಟ್‌ ಸಿಟಿ ಯೋಜನೆಗೆ ಏಪ್ರಿಲ್‌ ತಿಂಗಳಲ್ಲಿ ಚಾಲನೆ ಸಿಗಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ವೆಂಕಯ್ಯನಾಯ್ಡು ಸುಳಿವು ನೀಡಿದ್ದಾರೆ. ಯೋಜನೆ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚಿಸುವ ಕೆಲಸ ಬಹುತೇಕ ಪೂರ್ಣಗೊಂಡಿದೆ. ಯೋಜನೆ ಜಾರಿಗೆ...

ಜಾಗತಿಕ ಆರ್ಥಿಕ ಬೆಳವಣಿಗೆಗೆ ಭಾರತ ಉಜ್ವಲ ತಾಣ : ಐಎಂಎಫ್ ಮುಖಸ್ಥೆ ಕ್ರಿಸ್ಟೀನ್

ಭಾರತ ಪ್ರವಾಸ ಕೈಗೊಂಡಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಮುಖ್ಯಸ್ಥೆ ಕ್ರಿಸ್ಟೀನ್ ಲಾಗರ್ಡ್, ಭಾರತವನ್ನು ಜಾಗತಿಕ ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗಲಿರುವ ಉಜ್ವಲ ತಾಣವೆಂದು ಬಣ್ಣಿಸಿದ್ದಾರೆ. ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ಮಾತನಾಡಿದ ಕ್ರಿಸ್ಟೀನ್ ಲಾಗರ್ಡ್, ಭಾರತದ ಆರ್ಥಿಕತೆ ಶೇ.7ಕ್ಕಿಂತಲೂ ಹೆಚ್ಚಿದ್ದು, ಮುಂದಿನ...

ಅರುಣ್ ಜೇಟ್ಲಿ ಬಜೆಟ್‌ ಮಂಡನೆಗೆ ಕ್ಷಣಗಣನೆ

ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌.ಡಿ.ಎ ಸರ್ಕಾರ, ತನ್ನ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮೊದಲ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆಗೆ ಸಜ್ಜಾಗಿದೆ. ಇಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಎನ್‌.ಡಿ.ಎ ಸರ್ಕಾರದ ಚೊಚ್ಚಲ ಬಜೆಟ್‌ ಮಂಡಿಸಲಿದ್ದು, ಇದರಲ್ಲಿ ಜನಸಾಮಾನ್ಯರ...

ಲೋಕಸಭೆಯಲ್ಲಿ ಅರುಣ್ ಜೇಟ್ಲಿಯಿಂದ ಆರ್ಥಿಕ ಸಮೀಕ್ಷೆ ಮಂಡನೆ

'ಹಣಕಾಸು ಬಜೆಟ್' ಗೂ ಮುನ್ನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಲೋಕಸಭೆಯಲ್ಲಿ ಪೂರ್ವಭಾವಿ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದಾರೆ. ಸಮೀಕ್ಷೆ ಪ್ರಕಾರ 2015-16ನೇ ಸಾಲಿನಲ್ಲಿ ಶೇ.8ಕ್ಕಿಂತ ಹೆಚ್ಚು ಜಿಡಿಪಿ ಬೆಳವಣಿಗೆಯಾಗಲಿದೆ ಎಂದು ತಿಳಿಸಿದ್ದಾರೆ. ಹಣದುಬ್ಬರ ದರ...

ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಸರ್ಕಾರದ ಮೂಲಭೂತ ಆದ್ಯತೆ: ರಾಷ್ಟ್ರಪತಿ

ಇಂದಿನಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಿದ್ದು, ಬಜೆಟ್ ಅಧಿವೇಶನ ಸುಗಮವಾಗಿ ಸಾಗುವ ವಿಶ್ವಾಸವಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸರ್ಕಾರದ ಗುರಿಯಾಗಿದ್ದು, ಆರ್ಥಿಕ ಬೆಳವಣಿಗೆ ಸಾಧಿಸಲು ಸರ್ಕಾರದಿಂದ ಹೊಸ ಹೆಜ್ಜೆ ಇಡಲಾಗಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ....

ಭಾರತ ವಿಶ್ವದಲ್ಲಿ ವೇಗವಾಗಿ ಆರ್ಥಿಕ ಬೆಳವಣಿಗೆ ಕಾಣುತ್ತಿದೆ: ಪ್ರಧಾನಿ ಮೋದಿ

ಭಾರತದ ಆರ್ಥಿಕತೆ ವಿಶ್ವದಲ್ಲೇ ಅತಿವೇಗವಾಗಿ ಬೆಳೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ದೇಶದ ಜಿಡಿಪಿ ಬೆಳವಣಿಗೆ ದರ ಶೇ.7.4ರಷ್ಟಾಗಿದ್ದು, ವಿಶ್ವದಲ್ಲಿ ವೇಗವಾದ ಆರ್ಥಿಕ ಬೆಳವಣಿಗೆ ಕಾಣುತ್ತಿರುವ ರಾಷ್ಟ್ರ ಭಾರತವಾಗಿದೆ ಎಂದಿದ್ದಾರೆ. ಪುಣೆಯಲ್ಲಿ ನಿರ್ಮಿಸಲಾಗಿರುವ ಜನರಲ್ ಎಲೆಕ್ಟ್ರಿಕ್ ನ ಮೊದಲ...

ಆರ್.ಬಿ.ಐ ರೆಪೋ ದರದಲ್ಲಿ ಬದಲಾವಣೆ ಇಲ್ಲ

'ಆರ್.ಬಿ.ಐ' ತನ್ನ ನೂತನ ಆರ್ಥಿಕ ನೀತಿಗಳನ್ನು ಪ್ರಕಟಿಸಿದ್ದು ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಫೆ.3ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್.ಬಿ.ಐ ಗೌರ್ನರ್, ರಘುರಾಮ್ ರಾಜನ್ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಹಣದುಬ್ಬರ ಮತ್ತು...

ಶೇ.50ರಷ್ಟು ವೇಗವಾಗಿ ಬೆಳೆಯುತ್ತಿದೆ ಭಾರತದ ಜಿಡಿಪಿ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಕೆಲ ಪ್ರಮುಖ ನಿರ್ಧಾರಗಳಿಂದಾಗಿ 2013-14ನೇ ಸಾಲಿನಲ್ಲಿ ದೇಶದ ಆರ್ಥಿಕತೆ(ಜಿಡಿಪಿ) ಶೇ.50ರಷ್ಟು ವೇಗವಾಗಿ ಬೆಳವಣಿಗೆ ಕಂಡಿದೆ. ಪ್ರಧಾನಿ ಮೋದಿ ಸರ್ಕಾರ ಕೈಗೊಂಡ ಪ್ರಮುಖ ನಿರ್ಧಾರಗಳಿಂದಾಗಿಯೇ ದೇಶದ ಆರ್ಥಿಕತೆ ಕಳೆದ ವರ್ಷಕ್ಕಿಂತಲೂ ಅತಿ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಯುಪಿಎ...

ಬಜೆಟ್ ಮಹತ್ವದ್ದು, ಆದರೆ ಮುಂದಿನ 364 ದಿನಗಳೂ ಸರ್ಕಾರಕ್ಕೆ ಮುಖ್ಯ: ಜೇಟ್ಲಿ

ಬಜೇಟ್ ಘೋಷಣೆಗಿಂತಲೂ ವಿದೇಶಿ ಬಂಡವಾಳ ಹೂಡಿಕೆ, ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ನೀತಿ ನಿರೂಪಣೆಗಳನ್ನು ಅನುಷ್ಠಾನಕ್ಕೆ ತರುವುದು ಮುಖ್ಯ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆ, ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ...

2016ರ ವೇಳೆಗೆ ಚೀನಾವನ್ನು ಹಿಂದಿಕ್ಕಲಿರುವ ಭಾರತದ ಆರ್ಥಿಕ ಬೆಳವಣಿಗೆ

ಭಾರತದ ಆರ್ಥಿಕ ಬೆಳವಣಿಗೆ ದರ 2016ರ ವೇಳೆಗೆ ಚೀನಾದ ಯೋಜಿತ ಬೆಳವಣಿಗೆ ದರವನ್ನೂ ದಾಟಿ ಬೆಳೆಯಲಿದೆ ಎಂದು ಐಎಂಎಫ್ ಹೇಳಿದೆ. ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ಶೇ.6.3ರಷ್ಟಿದ್ದು, 2016ರ ವೇಳೆಗೆ ಶೇ.6.5ರಷ್ಟು ಏರಿಕೆಯಾಗಲಿದೆ. ಇದು ಚೀನಾದ ಯೋಜಿತ ಬೆಳವಣಿಗೆ ದರಕ್ಕಿಂತಲೂ ಹೆಚ್ಚು...

ಕಾಂಗ್ರೆಸ್ ನಲ್ಲಿ ಖರ್ಚು-ವೆಚ್ಚಕ್ಕೆ ಕಡಿವಾಣ

ಕಾಂಗ್ರೆಸ್‌ ಪಕ್ಷವು ಕಳೆದ ವರ್ಷದ ಲೋಕಸಭೆ ಚುನಾವಣೆ ಮತ್ತು ಇತ್ತೀಚಿನ ವಿಧಾನಸಭೆ ಚುನಾವಣೆಗಳಲ್ಲಿ ಸತತವಾಗಿ ಸೋತಿರುವ ಹಿನ್ನೆಲೆಯಲ್ಲಿ, ಪಕ್ಷಕ್ಕೆ ಆರ್ಥಿಕ ಸಂಕಷ್ಟ ಉಂಟಾಗಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಪಕ್ಷದ ನಿಧಿಯನ್ನು ಬೇಕಾಬಿಟ್ಟಿ...

2015-16ನೇ ಸಾಲಿನಲ್ಲಿ ಜಿಡಿಪಿ ಏರಿಕೆಯಾಗುವ ನಿರೀಕ್ಷೆ ಇದೆ: ಅರುಣ್ ಜೇಟ್ಲಿ

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ದೇಶದ ಆರ್ಥಿಕ ಬೆಳವಣಿಗೆ ಚೇತರಿಕೆಯಾಗಲಿರುವ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ಕಳೆದ 2 ವರ್ಷಗಳಲ್ಲಿ ಆರ್ಥಿಕ ಕುಸಿತ ಉಂಟಾಗಿದ್ದರ ಪರಿಣಾಮ ಆರ್ಥಿಕ ಬೆಳವಣಿಗೆ...

ರೈಲ್ವೇ ಇಲಾಖೆ ಖಾಸಗೀಕರಣ ಮಾಡುವುದಿಲ್ಲ: ನರೇಂದ್ರ ಮೋದಿ

ಎನ್.ಡಿ.ಎ ಸರ್ಕಾರ ರೈಲ್ವೇ ಇಲಾಖೆಯನ್ನು ಖಾಸಗೀಕರಣ ಮಾಡುತ್ತದೆ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ರೈಲ್ವೇ ಇಲಾಖೆಯಲ್ಲಿ ಖಾಸಗೀಕರಣಕ್ಕೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. ಹಿಂದೂ ಬನಾರಸ್ ವಿವಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ವಾರಣಾಸಿಯಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ...

ವಿದೇಶದಲ್ಲಿ ಕಪ್ಪು ಹಣ ಇಡುವ ದೇಶಗಳಲ್ಲಿ ಭಾರತಕ್ಕೆ 3ನೇ ಸ್ಥಾನ

'ಕಪ್ಪು ಹಣ'ದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೆ ಅಂತಾರಾಷ್ಟ್ರೀಯ ಚಿಂತಕರ ತಂಡವೊಂದು ಭಾರತದ ಕಪ್ಪು ಹಣದ ಬಗ್ಗೆ ಕುತೂಹಲಕಾರಿ ಮಾಹಿತಿ ಬಹಿರಂಗಗೊಳಿಸಿದ್ದಾರೆ. ವಿದೇಶಗಳಲ್ಲಿ ಕಪ್ಪು ಹಣ ಇಡುವ ದೇಶಗಳ ಪೈಕಿ ಭಾರತ ಜಾಗತಿಕ ಮಟ್ಟದಲ್ಲಿ 3ನೇ ಸ್ಥಾನ ಪಡೆದಿದೆ ಎಂದು ಅಂತಾರಾಷ್ಟ್ರೀಯ...

ರಷ್ಯಾದೊಂದಿಗೆ ಒಪ್ಪಂದ: ಭಾರತಕ್ಕೆ ಅಮೆರಿಕ ಎಚ್ಚರಿಕೆ

ರಷ್ಯಾದೊಂದಿಗೆ ಭಾರತ ಸೌಹಾರ್ದ ಸಂಬಂಧ ಹೊಂದುವ ವಿಚಾರದಲ್ಲಿ ತನಗೇನೂ ಸಮಸ್ಯೆ ಇಲ್ಲ ಎಂದು ಅಮೆರಿಕ ಸ್ಪಷ್ಟ ಪಡಿಸಿದೆಯಾದರೂ ಹಲವಾರು ನಿರ್ಬಂಧಗಳು ಹೇರಲ್ಪಟ್ಟಿರುವ ರಷ್ಯಾದೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲು ಇದು ಸೂಕ್ತ ಸಮಯವಲ್ಲ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದೆ. ಮಧ್ಯ ಪೂರ್ವದಲ್ಲಿನ ಸದ್ಯದ...

ಏಷ್ಯಾದ ವರ್ಷದ ವ್ಯಕ್ತಿಯಾಗಿ ಪ್ರಧಾನಿ ಮೋದಿ ಆಯ್ಕೆ

ಪ್ರಧಾನಿ ನರೇಂದ್ರ ಮೋದಿ ಏಷ್ಯಾದ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಿಂಗಾಪುರ್ ಪತ್ರಿಕೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪ್ರಧಾನಿ ಮೋದಿ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಭಿವೃದ್ಧಿ ಕೇಂದ್ರಿತ ನಾಯಕ ಎಂಬ ಹೆಸರಿನಡಿ ನಡೆಸಿದ ಸಮೀಕ್ಷೆಯಲ್ಲಿ ಭಾರತದ ಪ್ರಧಾನಿ ನರೇಂದ್ರ...

ರಾಜ್ಯದ 14 ರೈಲ್ವೆ ಯೋಜನೆಗೂ ಕುತ್ತು

ಕೆಲವೇ ದಿನಗಳ ಹಿಂದೆ ರೈಲ್ವೆ ಖಾತೆಯನ್ನು ಕಳೆದುಕೊಂಡ ಕರ್ನಾಟಕಕ್ಕೆ ಈಗ ಮತ್ತೂಂದು ಹಿನ್ನಡೆ ಎದುರಾಗಿದೆ. ಇದುವರೆಗೂ ಕಾಮಗಾರಿ ಚಾಲ್ತಿಗೊಳ್ಳದ ಬರೋಬ್ಬರಿ 10 ಸಾವಿರ ಕೋಟಿ ರೂ. ಮೌಲ್ಯದ 14 ಯೋಜನೆ ಗಳನ್ನು ಕೈಬಿಡಲು ರೈಲ್ವೆ ಸಚಿವಾಲಯ ಚಿಂತನೆ ನಡೆಸಿದೆ. ರೈಲ್ವೆ ಇಲಾಖೆ...

ಶೇ.9ರಷ್ಟು ಜಿಡಿಪಿ ಸಾಧಿಸಲು ಭಾರತಕ್ಕೆ ಸಾಮರ್ಥ್ಯವಿದೆ: ಪಿಡಬ್ಲ್ಯೂಸಿ ವರದಿ

2034ರ ವೇಳೆಗೆ ಭಾರತ ಶೇ.9ರಷ್ಟು ಜಿಡಿಪಿ ಸಾಧಿಸುವ ಸಾಮರ್ಥ್ಯ ಹೊಂದಿದ್ದು 10 ಯು.ಎಸ್.ಡಿ ಟ್ರಿಲಿಯನ್ ಆರ್ಥಿಕತೆಯನ್ನು ಹೊಂದಲಿದೆ ಎಂದು ಪ್ರೈಸ್ ವಾಟರ್ ಹೌಸ್ ಕೂಪರ್ಸ್(ಪಿಡಬ್ಲ್ಯೂಸಿ) ವರದಿ ಹೇಳಿದೆ. ಭಾರತ ಪ್ರಮುಖ ಬದಲಾವಣೆಯತ್ತ ಸಾಗುತ್ತಿದೆ. 10 ಯು.ಎಸ್.ಡಿ ಟ್ರಿಲಿಯನ್ ಆರ್ಥಿಕ ದೇಶವಾಗಿ...

ತೆರಿಗೆ ಪಾವತಿಸದ ಖಾಸಗಿ ಕಂಪನಿಗಳಿಗೆ ಮೇಯರ್ ಡೆಡ್ ಲೈನ್

'ತೆರಿಗೆ ಪಾವತಿ' ಮಾಡದೇ ಇರುವ ವಿವಿಧ ಖಾಸಗಿ ಕಂಪನಿಗಳಿಗೆ ಮೇಯರ್ ಶಾಂತಕುಮಾರಿ ಡೆಡ್ ಲೈನ್ ನೀಡಿದ್ದು 15 ದಿನಗಳಲ್ಲಿ ತೆರಿಗೆ ಪಾವತಿ ಮಾಡುವಂತೆ ಸೂಚಿಸಿದ್ದಾರೆ. ತೆರಿಗೆ ಪಾವತಿ ಮಾಡದೇ ಇರುವ ಬಾಗ್ಮನೆ ಡೆವಲಪರ್ಸ್ ಗೆ ದಿಢೀರ್ ಭೇಟಿ ನೀಡಿದ ಮೇಯರ್ ಶಾಂತಕುಮಾರಿ,...

ಜವಾಬ್ದಾರಿಯಿಂದ ವರ್ತಿಸುವಂತೆ ಸಂಸದರಿಗೆ ಪ್ರಧಾನಿ ಮೋದಿ ಕಿವಿಮಾತು

ದೇಶ ಮುನ್ನಡೆಸುವುದು ಎಲ್ಲ ಸಂಸದರ ಜವಾಬ್ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡುವ ಮೂಲಕ ಜವಾಬ್ದಾರಿಯಿಂದ ವರ್ತಿಸುವಂತೆ ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ಸೂಚನೆ ನೀಡಿದ್ದಾರೆ. ನ.24ರಿಂದ ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಅಧಿವೇಶನಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಸರ್ಕಾರ ನಡೆಸುವ...

ಆರ್ಥಿಕ ಸುಧಾರಣೆ ಇಂದಿನ ಅಗತ್ಯ: ಪ್ರಧಾನಿ ಮೋದಿ

ಆರ್ಥಿಕ ಸುಧಾರಣೆಗಳು ಇಂದಿನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಭಾರತ, ಅಮೆರಿಕ, ರಷ್ಯಾ ಸೇರಿದಂತೆ 19 ರಾಷ್ಟ್ರಗಳನ್ನೊಳಗೊಂಡ ಜಿ-20 ಶೃಂಗ ಸಭೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಆರಂಭವಾಗಿದೆ. ಸಮಾರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್‌ ಅವರು ಕ್ವೀನ್ಸ್‌ ಲ್ಯಾಂಡ್‌...

ಸುಧಾರಣೆ ಜನಸಾಮಾನ್ಯ ಕೇಂದ್ರಿತ, ಜನಸಾಮಾನ್ಯ ಚಾಲಿತವಾಗಿರಬೇಕು: ಪ್ರಧಾನಿ ಮೋದಿ

'ಆಸ್ಟ್ರೇಲಿಯಾ'ದಲ್ಲಿ ನಡೆಯುತ್ತಿರುವ ಜಿ.20 ಶೃಂಗಸಭೆಯಲ್ಲಿ ಭಾಗವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಜಿ.20 ರಾಷ್ಟ್ರಗಳ ಮುಖ್ಯಸ್ಥರನ್ನುದ್ದೇಶಿಸಿ ಮಾತನಾಡಿದ್ದು ಸುಧಾರಣೆ ಎಂಬುದು ಜನತೆಯಿಂದ ನಡೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಭಾಷಣದಲ್ಲಿ ಆರ್ಥಿಕ ಸುಧಾರಣೆಗೆ ಒತ್ತು ನೀಡಿರುವ ಪ್ರಧಾನಿ ಮೋದಿ, ಸುಧಾರಣೆ ಜನತೆಯಿಂದಲೇ ನಡೆಯಬೇಕಿರುವ ಕ್ರಿಯೆ...

ಪೆಟ್ರೋಲ್ ದರ ಮತ್ತೊಮ್ಮೆ ಇಳಿಕೆ ಸಾಧ್ಯತೆ

ಸಾಮಾನ್ಯ ಜನರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ರಿಲೀಫ್ ನೀಡಲಿದ್ದು, ಪ್ರತಿ ಲೀಟರ್ ಪೆಟ್ರೋಲ್ ದರ 1.50ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ. ಪೆಟ್ರೋಲ್ ದರ ಮತ್ತೊಮ್ಮೆ ಇಳಿಕೆಯಾದರೆ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಸತತವಾಗಿ 7ನೇ ಬಾರಿಗೆ...

ತಂಬಾಕು ಸೇವನೆಯಿಂದ ಆರ್ಥಿಕ ಹೊರೆ: ಮುಖ್ಯಮಂತ್ರಿಗೆ ವರದಿ ಸಲ್ಲಿಕೆ

ಕರ್ನಾಟಕದಲ್ಲಿ ತಂಬಾಕು ಸಂಬಂಧಿ ರೋಗಗಳಿಂದಾಗುತ್ತಿರುವ ಆರ್ಥಿಕ ಹೊರೆ ಕುರಿತ ವರದಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ಹಾಗೂ ಕರ್ನಾಟಕ ಸರ್ಕಾರದ...

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈಗ ಪಾಕ್ ಅಧ್ಯಕ್ಷ!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಅಧ್ಯಕ್ಷರಂತೆ! ಇಂತದ್ದೊಂದು ತಪ್ಪನ್ನು ಸ್ವತಃ ಪಾಕಿಸ್ತಾನದ ಅಧಿಕಾರಿಗಳೇ ಮಾಡಿ ನಗೆಪಾಟಲಿಗೀಡಾಗಿದ್ದಾರೆ. ಪಾಕಿಸ್ತಾನ ಆರ್ಥಿಕ ಸಂಸ್ಥೆ ಆಯೋಜಿಸಿರುವ ವಾರ್ಷಿಕ ಘಟಿಕೋತ್ಸವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪಾಕಿಸ್ತಾನದ...

ಡೀಸೆಲ್ ಬೆಲೆಯಲ್ಲಿ ಇಳಿಕೆ: ಮಧ್ಯರಾತ್ರಿಯಿಂದ ಜಾರಿ

ಮಹಾರಾಷ್ಟ್ರ, ಹರ್ಯಾಣ ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಮಹತ್ವದ ಆರ್ಥಿಕ ಸುಧಾರಣಾ ಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ,ಪೆಟ್ರೋಲ್ ರೀತಿ ಡೀಸೆಲ್ ಬೆಲೆಯನ್ನೂ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿದೆ. ಇದರ ಮೊದಲ ಹಂತವಾಗಿ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ...

ಸಂಪನ್ಮೂಲ ಕ್ರೂಢೀಕರಣದಲ್ಲಿ ಸರ್ಕಾರ ವಿಫಲ: ಬಿಎಸ್ ವೈ

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸಂಪನ್ಮೂಲ ಕ್ರೂಢಿಕರಣದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ, ಸಂಸದ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲು ಸರ್ಕಾರ ಎಡವಿದೆ ಎಂದು ಮುಖ್ಯಮಂತ್ರಿ...

ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ವಾಗ್ದಾಳಿ

ಮಹಾರಾಷ್ಟ್ರದಲ್ಲಿ 25 ವರ್ಷಗಳ ಬಿಜೆಪಿ-ಶಿವಸೇನೆ ನಡುವಿನ ಮೈತ್ರಿ ಅಂತ್ಯಗೊಂಡ ಬೆನ್ನಲ್ಲೇ ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ. ಬಿಜೆಪಿ ನಾಯಕರು ಮಹಾರಾಷ್ಟ್ರದ ವೈರಿಗಳು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ. ಬಿಜೆಪಿ-ಶಿವಸೇನೆಯ ಸುದೀರ್ಘ ಮೈತ್ರಿ ಮುಂದುವರೆಯಬೇಕು ಎಂಬುದು ಮೈತ್ರಿಕೂಟದ ಇತರ...

ಭಾರತಕ್ಕೆ ಭಾರತವೇ ಮಾದರಿ: ಪ್ರಧಾನಿ ಮೋದಿ

ಶತಮಾನಗಳ ಇತಿಹಾಸವಿರುವ ಭಾರತ ಎಂದಿಗೂ ಚೀನಾ ರಾಷ್ಟ್ರವಾಗಲು ಬಯಸುವುದಿಲ್ಲ. ನಮಗೆ ನಾವೇ ಮಾದರಿ ಹೊರತು ಅನ್ಯ ರಾಷ್ಟ್ರ ಎಂದಿಗೂ ಮಾದರಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತಕ್ಕೆ ಎಂದೂ ಚೀನಾ...

ಏರಿಕೆ ಕಂಡ ಜಿಡಿಪಿ ದರ: ಕೊನೆಗೂ ಈಡೇರಿದ ಮೋದಿ ಅಚ್ಚೆ ದಿನ್ ಭರವಸೆ

ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೂ ಮುನ್ನ ನೀಡಿದ್ದ ಅಚ್ಚೆ ದಿನ್ ಭರವಸೆ ಕೊನೆಗೂ ಈಡೇರಿದೆ. ಆ.29ರಂದು ಬಿಡುಗಡೆಯಾದ ಜಿಡಿಪಿ ಮಾಹಿತಿ ಪ್ರಸಕ್ತ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ ಶೇ.5.7ರಷ್ಟು ಏರಿಕೆ ಕಂಡಿದೆ. ಕಳೆದ ತ್ರೈಮಾಸಿಕದಲ್ಲಿ ಜಿಡಿಪಿ ದರ ಶೇ.4.6ರಷ್ಟಿತ್ತು. ಮೋದಿ ಎನ್.ಡಿ.ಎ ಸರ್ಕಾರ...

ಸುದ್ದಿಗೋಷ್ಠಿಗಳ ಮೂಲಕ ಎನ್.ಡಿಎ ಸರ್ಕಾರದ ನೂರು ದಿನ ಆಚರಣೆ

ಸೆ.3ಕ್ಕೆ ನೂರು ದಿನಗಳು ತುಂಬಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ, ಈ ಸಂಭ್ರಮವನ್ನು ಸಾಮಾಜಿಕ ಬದಲಾವಣೆಯೊಂದಿಗೆ ಆರ್ಥಿಕ ಪ್ರಗತಿ ಎಂಬ ವಿಷಯದೊಂದಿಗೆ ಮಾಧ್ಯಮದ ಮೂಲಕ ಅನಾವರಣಗೊಳಿಸಲು ಸಿದ್ಧತೆ ನಡೆಸಿದೆ. ನೂರು ದಿನಗಳ ಅವಧಿಯಲ್ಲಿ ತಾನು ಮಾಡಿದ್ದೇನು ಎಂಬುದನ್ನು ಸರಣಿ...

ಬಡತನ ನಿರ್ಮೂಲನೆಗೆ ಆರ್ಥಿಕ ಅಸ್ಪೃಶ್ಯತೆ ನಿರ್ಮೂಲನೆ ಮಾಡಬೇಕು-ಪ್ರಧಾನಿ ಮೋದಿ

ಬಡತನ ನಿರ್ಮೂಲನೆ ಮಾಡಲು ಆರ್ಥಿಕ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಬೇಕು, ಅಭಿವೃದ್ಧಿಗಾಗಿ ಬ್ಯಾಂಕ್ ಖಾತೆ ತೆರೆಯುವ ಮೂಲಕ ದೇಶದ ನಾಗರಿಕರನ್ನು ಆರ್ಥಿಕತೆಯೊಂದಿಗೆ ಜೊತೆಗೂಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಣಕಾಸು ಸೇವೆಗಳು ಜನಸಾಮಾನ್ಯರ ಕೈಗೆಟುಕುವಂತೆ ಮಾಡುವ ಉದ್ದೇಶದಿಂದ ರೂಪಿಸಲಾಗಿರುವ ಜನ್-ಧನ್ ಯೋಜನೆಗೆ...

ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನೆರವು ನೀಡಿ: ಸಿದ್ದರಾಮಯ

ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಬ್ಯಾಂಕುಗಳು ಹೆಚ್ಚಿನ ನೆರವು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ನಗರದ ಬಹುಮಹಡಿ ಕಟ್ಟಡದಲ್ಲಿ ಸಿಂಡಿಕೇಟ್ ಬ್ಯಾಂಕ್ ನೂತನ ಶಾಖೆ ಹಾಗೂ ಎಟಿಎಂ ಸೌಲಭ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕುಗಳ ಸೇವೆಗಳು ರಾಜ್ಯ ಹಾಗೂ ರಾಷ್ಟ್ರದ...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited