ನವದೆಹಲಿ : ಕಳೆದ ವರ್ಷ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪ್ರತಿಪಾದಿಸಿದರು. ಆರ್ಥಿಕ ಪರಿವರ್ತನೆಯ ಕೆಲಸ ಮ್ಯಾರಥಾನ್ ನ ಹಾಗೆ ಎಂದು ವಿವರಿಸಿದರು.
ಎಲ್ಲಾ ಆರ್ಥಿಕ ಸೂಚಕಗಳ ಪ್ರಕಾರ, 17 ತಿಂಗಳ ಮೊದಲು ನಾವು ಅಧಿಕಾರ ವಹಿಸಿಕೊೞುವ ಮೊದಲಿಗಿಂತ ಈಗ ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ದೆಹಲಿ ಅರ್ಥಶಾಸ್ತ್ರ ಸಭೆಯಲ್ಲಿ ಹೇಳಿದರು.
ಜಿಡಿಪಿ ಏರಿಕೆಯಲ್ಲಿತ್ತು ಮತ್ತು ಹಣದುಬ್ಬರ ನಿಯಂತ್ರಣಕ್ಕೆ ಒಳಪಟ್ಟಿತ್ತು. ಅವರ ಸರ್ಕಾರ ಆರ್ಥಿಕತೆಯನ್ನು ಬೆಳವಣಿಗೆಯ ಹಾದಿಯಲ್ಲಿ ತರಲು ಅನೇಕ ಸುಧಾರಣೆಗಳು ಕೈಗೊಂಡಿತು ಎಂದು ತಿಳಿಸಿದರು. ವಿತ್ತೀಯ ಕೊರತೆ ಇಳಿಕೆಯಾಗಿದೆ ಮತ್ತು ರೂಪಾಯಿ ಸ್ಥಿರವಾಗಿದೆ. ಖಂಡಿತಾ ಇದು ಆಕಸ್ಮಿಕವಾಗಿ ಆಗಿದ್ದಲ್ಲ. ಈ ಯಶಸ್ಸು ಹಲವು ನೀತಿಗಳ ಸರಣಿಯ ಫಲವಾಗಿದೆ ಎಂದು ಪ್ರಧಾನಿ ಹೇಳಿದರು.
ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ, ಆರ್ ಬಿ ಐ ಗೌವರ್ನರ್ ರಘುರಾಮ್ ರಾಜನ್ ಮುಂತಾದವರು ಭಾಗವಹಿಸಿದ್ದರು.