ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೈಗೊಂಡ ಕೆಲ ಪ್ರಮುಖ ನಿರ್ಧಾರಗಳಿಂದಾಗಿ 2013-14ನೇ ಸಾಲಿನಲ್ಲಿ ದೇಶದ ಆರ್ಥಿಕತೆ(ಜಿಡಿಪಿ) ಶೇ.50ರಷ್ಟು ವೇಗವಾಗಿ ಬೆಳವಣಿಗೆ ಕಂಡಿದೆ.
ಪ್ರಧಾನಿ ಮೋದಿ ಸರ್ಕಾರ ಕೈಗೊಂಡ ಪ್ರಮುಖ ನಿರ್ಧಾರಗಳಿಂದಾಗಿಯೇ ದೇಶದ ಆರ್ಥಿಕತೆ ಕಳೆದ ವರ್ಷಕ್ಕಿಂತಲೂ ಅತಿ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಯುಪಿಎ ಸರ್ಕಾರವಿದ್ದ ಸಂದರ್ಭದಲ್ಲಿ ದೇಶದ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿತ್ತು. ಆದರೆ ಎನ್.ಡಿ.ಎ ಸರ್ಕಾರದ ನಿರ್ಣಯಗಳಿಂದಾಗಿ ಶೇ.50ರಷ್ಟು ವೇಗವಾಗಿ ಬೆಳವಣಿಯಾಗುತ್ತಿದೆ.
ಇತ್ತೀಚೆಗಷ್ಟೇ ಐಎಂಎಫ್ ಪ್ರಕಟಿಸಿದ್ದ ವರದಿಯಲ್ಲಿ ಭಾರತದ ಆರ್ಥಿಕತೆ ಅತಿವೇಗವಾಗಿ ಬೆಳೆಯುತ್ತಿದ್ದು, ಸದ್ಯದಲ್ಲೇ ಚೀನಾದ ಆರ್ಥಿಕ ಬೆಳವಣಿಗೆಯನ್ನು ಹಿಂದಿಕ್ಕಲಿದೆ ಎಂದು ಹೇಳಿತ್ತು. ಇದಕ್ಕೆ ಪೂರಕವಾಗಿ ಭಾರತದಲ್ಲಿ ಮತ್ತೊಂದು ವರದಿ ಪ್ರಕಟವಾಗಿದ್ದು ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ದೇಶದ ಆರ್ಥಿಕತೆ ಶೇ.50ರಷ್ಟು ವೇಗವಾಗಿ ಬೆಳವಣಿಯಾಗುತ್ತಿದೆ ಎಂದು ಹೇಳಲಾಗಿದೆ.