Untitled Document
Sign Up | Login    
Dynamic website and Portals
  
October 25, 2014

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈಗ ಪಾಕ್ ಅಧ್ಯಕ್ಷ!

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಇಸ್ಲಾಮಾಬಾದ್ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನದ ಅಧ್ಯಕ್ಷರಂತೆ! ಇಂತದ್ದೊಂದು ತಪ್ಪನ್ನು ಸ್ವತಃ ಪಾಕಿಸ್ತಾನದ ಅಧಿಕಾರಿಗಳೇ ಮಾಡಿ ನಗೆಪಾಟಲಿಗೀಡಾಗಿದ್ದಾರೆ.

ಪಾಕಿಸ್ತಾನ ಆರ್ಥಿಕ ಸಂಸ್ಥೆ ಆಯೋಜಿಸಿರುವ ವಾರ್ಷಿಕ ಘಟಿಕೋತ್ಸವದ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪಾಕಿಸ್ತಾನದ ಅಧ್ಯಕ್ಷ ಎಂದು ತಪ್ಪಾಗಿ ಪ್ರಿಂಟ್ ಮಾಡಲಾಗಿದೆ. ಅಲ್ಲದೇ ಮನಮೋಹನ್ ಸಿಂಗ್, ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಬೇಕೆಂದು ಮನವಿ ಮಾಡಲಾಗಿದೆ.

ಪಾಕಿಸ್ತಾನದ ಅಧ್ಯಕ್ಷ ಮ್ಯಾನ್ಮೂಮ್ ಹುಸೇನ್ ಅವರ ಹೆಸರನ್ನು ಪ್ರಕಟಿಸುವ ಬದಲು ಆರ್ಥಿಕ ಸಂಸ್ಥೆ ಪ್ರಕಟಿಸಿರುವ ಆಹ್ವಾನ ಪತ್ರಿಕೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರನ್ನು ಪ್ರಕಟಿಸಲಾಗಿದೆ. ಈ ಯಡವಟ್ಟನ್ನು ಪಾಕಿಸ್ತಾನದ ಪತ್ರಿಕೆಯೊಂದು ಬಯಲು ಮಾಡಿದ್ದು ವಾರ್ಷಿಕ ಘಟಿಕೋತ್ಸವ ನಡೆಸುತ್ತಿದ್ದ ಸಂಸ್ಥೆಗೆ ತೀವ್ರ ಮುಜುಗರ ಉಂಟಾಗಿದೆ.

ಪತ್ರಿಕೆಯಲ್ಲಿ ಈ ವಿಷಯ ಪ್ರಕಟವಾಗುತ್ತಿದ್ದಂತೆಯೇ ಎಚ್ಚೆತ್ತಿರುವ ಅಧಿಕಾರಿಗಳು ತಪ್ಪನ್ನು ಸರಿಪಡಿಸಿದ್ದಾರೆ. ಆದರೆ ತಪ್ಪು ಸರಿಪಡಿಸಿಕೊಳ್ಳುವ ವೇಳೆಗೆ ಹಲವು ಗಣ್ಯರಿಗೆ ಆಹ್ವಾನ ಪತ್ರಿಕೆಯನ್ನು ಕಳಿಸಿಕೊಡಲಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited