ನವದೆಹಲಿ : 'ಆರ್.ಬಿ.ಐ' ತನ್ನ ನೂತನ ಆರ್ಥಿಕ ನೀತಿಗಳನ್ನು ಪ್ರಕಟಿಸಿದ್ದು ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಫೆ.3ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆರ್.ಬಿ.ಐ ಗೌರ್ನರ್, ರಘುರಾಮ್ ರಾಜನ್ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಹಣದುಬ್ಬರ ಮತ್ತು ಆರ್ಥಿಕ ಸಂಕಷ್ಟದ ನಡುವೆಯೂ ರೆಪೋ ದರ ಹಾಗೇ ಉಳಿಸಿಕೊಳ್ಳಲಿದೆ. ಆರ್ಥಿಕ ನೀತಿ ನಿಯಮಗಳ ಕುರಿತು ರಘುರಾಮ್ ವರದಿ ನೀಡಿದ್ದು ಸಿ.ಆರ್.ಆರ್ ದರ ಕೂಡಾ ಬದಲಾವಣೆ ಮಾಡಲಾಗಿಲ್ಲ.
ಕಳೆದ ಹಲವು ತಿಂಗಳುಗಳಿಂದ ರೆಪೋ ದರದಲ್ಲಿ ಯಾವುದೇ ಬದಲಾವಣೆಗಳು ನಡೆದಿಲ್ಲ, ಶೇ.7.75ರಷ್ಟಿದ್ದ ರೆಪೋ ದರ ಅದೇ ಪ್ರಮಾಣದಲ್ಲೇ ಮುಂದುವರೆದಿದೆ. ಸಿ.ಆರ್.ಆರ್ ದರ ಶೇ.4ರಷ್ಟಿದೆ. 2016ನೇ ಸಾಲಿನಲ್ಲಿ ಜಿಡಿಪಿ ದರ ಶೇ.6.5ರಷ್ಟಾಗಲಿದೆ ಎಂದು ಆರ್.ಬಿ.ಐ ಗವರ್ನರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.