ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಮಲ್ಯ ರಸ್ತೆಯಲ್ಲಿರುವ ಕಾಫಿ ಡೇ ಕಚೇರಿಯ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಚಿಕ್ಕಮಂಗಳೂರು, ಬೆಂಗಳೂರು, ಮುಂಬಯಿ, ಚೆನ್ನೈ ಸೇರಿದಂತೆ 20 ಕಡೆಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ.
ಸಿದ್ದಾರ್ಥ ಅವರ ಮಾಲೀಕತ್ವದ ಕಾಫಿ ಡೇ ದೇಶ ವಿದೇಶಗಳಲ್ಲೂ ರೆಸ್ಟೋರೆಂಟ್ ಗಳನ್ನು ನಡೆಸುತ್ತಿದೆ. ಇದರ ಜೊತೆಗೆ ಸಿದ್ಧಾರ್ಥ್ ಒಡೆತನದಲ್ಲಿರುವ ಮಾಲ್, ಕಾಫಿ ಫ್ಲಾಂಟೇಶನ್ ಸೇರಿದಂತೆ ಹಲವು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ
1996 ರಲ್ಲಿ ಆರಂಭವಾದ ಕಾಫಿ ಡೇ ದೇಶದ 29 ರಾಜ್ಯಗಳಲ್ಲಿ 1530 ಮಳಿಗೆಗಳನ್ನು ಹೊಂದಿದೆ. ವಿದೇಶದಲ್ಲಿ ಆಸ್ಟ್ರೀಯಾ, ಜೆಕ್ ಗಣರಾಜ್ಯ, ಮಲೇಷ್ಯಾ, ಈಜಿಪ್ತ್ ಮತ್ತು ನೇಪಾಳದಲ್ಲೂ ಹಲವು ಮಳಿಗೆಗಳಿವೆ.