Untitled Document
Sign Up | Login    
Dynamic website and Portals
  
April 5, 2016

ಬಡ್ಡಿದರ ಶೇ.0.25ರಷ್ಟು ಕಡಿತ ಮಾಡಿದ ಆರ್.ಬಿ.ಐ: ಗೃಹ ಮತ್ತು ವಾಹನ ಸಾಲಗಳು ಇನ್ನಷ್ಟು ಅಗ್ಗ

ಮುಂಬೈ : ಭಾರತೀಯ ರಿಸರ್ವ್‌ ಬ್ಯಾಂಕ್‌ ಹಾಲಿ ಹಣಕಾಸು ವರ್ಷದ ಮೊದಲ ದ್ವೆಮಾಸಿಕ ನೀತಿ ಪರಾಮರ್ಶೆಯನ್ನು ಅನಾವರಣಗೊಳಿಸಿದ್ದು ಬಡ್ಡಿ ದರವನ್ನು ಶೇ.0.25ರಷ್ಟು ಕಡಿತಗೊಳಿಸಿದೆ. ಪರಿಣಾಮ ಗೃಹ ಮತ್ತು ವಾಹನ ಸಾಲಗಳು ಇನ್ನಷ್ಟು ಅಗ್ಗವಾಗಲಿವೆ.

2013ರ ಸೆಪ್ಟಂಬರ್‌ನಲ್ಲಿ ಆರ್‌.ಬಿ.ಐ ಗವರ್ನರ್‌ ಆಗಿ ಅಧಿಕಾರ ಸ್ವೀಕರಿಸಿದಂದಿನಿಂದಲೂ ಹಣದುಬ್ಬರದ ಮೇಲೆ ಅಂಕುಶ ಹೇರುತ್ತಾ ಬಂದಿರುವ ರಘುರಾಮ ರಾಜನ್‌ ಅವರು ರೆಪೋ ದರವನ್ನು ಶೇ.6.50 ಪ್ರಮಾಣಕ್ಕೆ ನಿಗದಿಸಿದ್ದು ಇದು 2011ರ ಜನವರಿಯ ಬಳಿಕದ ಕನಿಷ್ಠ ಮಟ್ಟವಾಗಿದೆ.

ರಿವರ್ಸ್‌ ರೆಪೋ ದರವನ್ನು ಶೇ.0.25ರಷ್ಟು ಇಳಿಸಿರುವ ರಘುರಾಮ ರಾಜನ್‌, ಇದನ್ನೀಗ ಶೇ.5.50 ಪ್ರಮಾಣಕ್ಕೆ ನಿಗದಿಸಿದ್ದಾರೆ. ಆದರೆ ನಗದು ಮೀಸಲು ಅನುಪಾತವನ್ನು ಶೇ.4.0 ಪ್ರಮಾಣದಲ್ಲೇ ಉಳಿಸಿಕೊಂಡಿದ್ದಾರೆ.

ಕಳೆದ ಫೆ.2ರಂದು ರಘುರಾಮ ರಾಜನ್‌, ಆರ್‌.ಬಿ.ಐ ಬಡ್ಡಿದರಗಳಲ್ಲಿ ಯಾವುದೇ ಪರಿಷ್ಕರಣೆ ಮಾಡದೆ ಅವುಗಳನ್ನು ಯಥಾವತ್ತಾಗಿ ಉಳಿಸಿಕೊಂಡಿದ್ದರು. ಹಣದುಬ್ಬರ ಏರುವ ಮತ್ತು ಆರ್ಥಿಕಾಭಿವೃದ್ಧಿ ಗತಿಗೆ ಧಕ್ಕೆ ಉಂಟಾಗಬಹುದೆಂಬ ಶಂಕೆಯೇ ಇದಕೆ ಕಾರಣವಾಗಿತ್ತು.

2015ರಲ್ಲಿ ಆರ್‌.ಬಿ.ಐ ರೆಪೋ ದರವನ್ನು ಒಟ್ಟಾರೆಯಾಗಿ ಶೇ.1.25ರಷ್ಟು ಇಳಿಸಿದ್ದರೂ ವಾಣಿಜ್ಯ ಬ್ಯಾಂಕುಗಳು ಅದರ ಲಾಭವನ್ನು ತಮ್ಮ ಗ್ರಾಹಕರಿಗೆ ಬಿಟ್ಟುಕೊಡದೆ ಆರ್‌ಬಿ.ಐ ಗೆ ಮುಜುಗರ ಉಂಟುಮಾಡಿದ್ದವು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited