Untitled Document
Sign Up | Login    
Dynamic website and Portals
  
November 16, 2014

ಆರ್ಥಿಕ ಸುಧಾರಣೆ ಇಂದಿನ ಅಗತ್ಯ: ಪ್ರಧಾನಿ ಮೋದಿ

ಬ್ರಿಸ್ಬೇನ್‌ : ಆರ್ಥಿಕ ಸುಧಾರಣೆಗಳು ಇಂದಿನ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ, ಅಮೆರಿಕ, ರಷ್ಯಾ ಸೇರಿದಂತೆ 19 ರಾಷ್ಟ್ರಗಳನ್ನೊಳಗೊಂಡ ಜಿ-20 ಶೃಂಗ ಸಭೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ಆರಂಭವಾಗಿದೆ. ಸಮಾರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್‌ ಅವರು ಕ್ವೀನ್ಸ್‌ ಲ್ಯಾಂಡ್‌ ನ ಸಂಸತ್‌ ಭವನದಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ

ಆರ್ಥಿಕ ಸುಧಾರಣೆಗಳು ಜನರ ಹಿತ ಮತ್ತು ಜನರ ಉನ್ನತಿಗೆ ಪೂರಕವಾಗಿರಬೇಕು, ಸುಧಾರಣಾ ಕಾರ್ಯಕ್ರಮಗಳನ್ನು ಸರ್ಕಾರಗಳು ಇನ್ನಷ್ಟು ಸರಳಗೊಳಿಸಬೇಕಾಗಿದೆ ಎಂದರು.

ಭಯೋತ್ಪಾದನೆ ಹತ್ತಿಕ್ಕಲು ಸಮಾನ ಕಾರ್ಯತಂತ್ರ ಅಗತ್ಯ, ಜಗತ್ತಿಗೆ ಸವಾಲಾಗಿರುವ ಭಯೋತ್ಪಾದನೆಯನ್ನು ಹತ್ತಿಕ್ಕಲು ಸಮಾನ ಕಾರ್ಯತಂತ್ರ ಅಳವಡಿಸಿಕೊಳ್ಳಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಡೆದ ಫ್ರಾನ್ಸ್‌ ಅಧ್ಯಕ್ಷ ಫ್ರಾಂಕೊಸ್‌ ಹಾಲೆಂಡ್‌ ಅವರೊಂದಿಗೆ ದಿವಪಕ್ಷೀಯ ಆರ್ಥಿಕ ಒಪ್ಪಂದಗಳ ಕುರಿತು ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited