ನವದೆಹಲಿ : ಭಾರತ ಆರ್ಥಿಕವಾಗಿ ಅತೀ ವೇಗವಾಗಿ ಬೆಳೆಯಲು ಬಯಸುತ್ತದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಗಳವಾರ ಹೇಳಿದ್ದಾರೆ. ಆಫ್ರಿಕಾದಲ್ಲಿ ವ್ಯಾಪಾರ ಮತ್ತು ಆರ್ಥಿಕ ಸಹಕಾರದ ಹೊಸ ಅವಕಾಶಗಳ ಮೇಲೆ ಭಾರತ ಕಣ್ಣಿಟ್ಟಿದೆ.
ಭಾರತ ಇಂದು ಅತೀ ವೇಗವಾಗಿ ಅಭಿವೃದ್ಧಿ ಹೊಂದಲು ಬಯಸುತ್ತದೆ. ನಾವು ಇಂದಿನ ಬೆಳವಣಿಗೆಯ ಬಗ್ಗೆ ತೃಪ್ತಿ ಹೊಂದಿಲ್ಲ ಎಂದು 54 ದೇಶಗಳನ್ನು ಆಹ್ವಾನಿಸಿರುವ ಭಾರತ-ಆಫ್ರಿಕಾ ಶೃಂಗಸಭೆಯ ಮೊದಲು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಭಾರತ ಆಫ್ರಿಕಾದಲ್ಲಿ ಯೋಜನೆ ಅಭಿವೃದ್ಧಿ ಕಂಪನಿ ತೆರೆಯಲು ಭಾರತ ನಿರ್ಧರಿಸಿದೆ ಎಂದು ಅರುಣ್ ಜೇಟ್ಲಿ ಕಾರ್ಯಕ್ರಮದಲ್ಲಿ ತಿಳಿಸಿದರು. ಆಫ್ರಿಕಾದ ಜೊತೆ ಭಾರತದ ವಾರ್ಷಿಕ ವ್ಯಾಪಾರ 72 ಬಿಲಿಯನ್ ಡಾಲರ್ ಗೆ ಏರಿಕೆಯಾಗಿದೆ.