Untitled Document
Sign Up | Login    
Dynamic website and Portals
  
December 14, 2014

ರಷ್ಯಾದೊಂದಿಗೆ ಒಪ್ಪಂದ: ಭಾರತಕ್ಕೆ ಅಮೆರಿಕ ಎಚ್ಚರಿಕೆ

ವಾಷಿಂಗ್ಟನ್ : ರಷ್ಯಾದೊಂದಿಗೆ ಭಾರತ ಸೌಹಾರ್ದ ಸಂಬಂಧ ಹೊಂದುವ ವಿಚಾರದಲ್ಲಿ ತನಗೇನೂ ಸಮಸ್ಯೆ ಇಲ್ಲ ಎಂದು ಅಮೆರಿಕ ಸ್ಪಷ್ಟ ಪಡಿಸಿದೆಯಾದರೂ ಹಲವಾರು ನಿರ್ಬಂಧಗಳು ಹೇರಲ್ಪಟ್ಟಿರುವ ರಷ್ಯಾದೊಂದಿಗೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲು ಇದು ಸೂಕ್ತ ಸಮಯವಲ್ಲ ಎಂದು ಭಾರತಕ್ಕೆ ಎಚ್ಚರಿಕೆ ನೀಡಿದೆ.

ಮಧ್ಯ ಪೂರ್ವದಲ್ಲಿನ ಸದ್ಯದ ಪರಿಸ್ಥಿತಿಯ ಕುರಿತಂತೆ ಅಮೆರಿಕದ ವಿದೇಶಾಂಗ ಸಚಿವ ಜಾನ್‌ ಕೆರಿ ಅವರು ರಷ್ಯಾದಲ್ಲಿನ ತನ್ನ ಸಹವರ್ತಿ ಸೆಗೈಲಾವ್ರೋವ್‌ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಮಾತುಕತೆಯ ವೇಳೆ ಇಸ್ರೇಲ್‌, ವೆಸ್ಟ್‌ಬ್ಯಾಂಕ್‌ ಮತ್ತು ಈ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ವಿಶ್ವಸಂಸ್ಥೆ ಕೈಗೊಂಡಿರುವ ನಿರ್ಣಯಗಳ ಕುರಿತಂತೆ ಈರ್ವರು ನಾಯಕರು ಪರಸ್ಪರ ಚರ್ಚೆ ನಡೆಸಿದರು ಎಂದು ಅಮೆರಿಕದ ವಿದೇಶಾಂಗ ಖಾತೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ಆದರೆ ರಷ್ಯಾದೊಂದಿಗೆ ಆರ್ಥಿಕ ಸಂಬಂಧ ವೃದ್ಧಿಗೆ ಪಕ್ವವಾದ ಕಾಲ ಇದಲ್ಲ. ಉಕ್ರೇನ್‌ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಯುರೋಪಿಯನ್‌ ಒಕ್ಕೂಟ ಹಲವಾರು ನಿರ್ಬಂಧಗಳನ್ನು ಹೇರಿರುವ ಹಿನ್ನೆಲೆಯಲ್ಲಿ ರಷ್ಯಾದೊಂದಿಗೆ ವಾಣಿಜ್ಯ ಸಂಬಂಧ ಬಲವರ್ಧನೆಗೆ ಇದು ಸೂಕ್ತ ಸಮಯವಲ್ಲ. ಆದರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಭೇಟಿ ವೇಳೆ ಭಾರತ ಆ ರಾಷ್ಟ್ರದೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಬಗೆಗೆ ತಮ್ಮದೇನೂ ತಕರಾರಿಲ್ಲ ಎಂದವರು ಹೇಳಿದರು.

ಭಾರತದೊಂದಿಗಿನ ಸಂಬಂಧವು ಅಮೆರಿಕಕ್ಕೆ ಅತ್ಯಂತ ಮಹತ್ವದ್ದಾಗಿದ್ದು ಉಭಯ ರಾಷ್ಟ್ರಗಳ ನಡುವೆ ಆರ್ಥಿಕ ಸಂಬಂಧಗಳೂ ದೃಢವಾಗಿವೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರ ಇತ್ತೀಚಿನ ಭಾರತ ಭೇಟಿಯಿಂದ ಮುಂದಿನ ತಿಂಗಳು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಭಾರತ ಭೇಟಿಯ ಮೇಲೆ ಯಾವುದೇ ಪರಿಣಾಮವನ್ನು ಬೀರಲಾರದು ಎಂದು ಅಮೆರಿಕದ ವಿದೇಶಾಂಗ ಖಾತೆಯ ವಕ್ತಾರೆ ಜೆನ್‌ ಸಾಕಿ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited