ವಾಷಿಂಗ್ ಟನ್ : ಭಾರತದ ಆರ್ಥಿಕ ಬೆಳವಣಿಗೆ ದರ 2016ರ ವೇಳೆಗೆ ಚೀನಾದ ಯೋಜಿತ ಬೆಳವಣಿಗೆ ದರವನ್ನೂ ದಾಟಿ ಬೆಳೆಯಲಿದೆ ಎಂದು ಐಎಂಎಫ್ ಹೇಳಿದೆ.
ಪ್ರಸಕ್ತ ಸಾಲಿನಲ್ಲಿ ಆರ್ಥಿಕ ಬೆಳವಣಿಗೆ ಶೇ.6.3ರಷ್ಟಿದ್ದು, 2016ರ ವೇಳೆಗೆ ಶೇ.6.5ರಷ್ಟು ಏರಿಕೆಯಾಗಲಿದೆ. ಇದು ಚೀನಾದ ಯೋಜಿತ ಬೆಳವಣಿಗೆ ದರಕ್ಕಿಂತಲೂ ಹೆಚ್ಚು ಎಂದು ಐಎಂಎಫ್ ತಿಳಿಸಿದೆ.
2013ರಲ್ಲಿ ಚೀನಾದ ಬೆಳವಣಿಗೆ ದರ ಶೇ.7.8ರಷ್ಟಿದ್ದರೆ ಭಾರತದ್ದು ಶೇ.5.8ರಷ್ಟಿತ್ತು. ಆದರೆ 2015ರ ವೇಳೆಗೆ ಭಾರತ ಚೀನಾವನ್ನು ಹಿಂದಿಕ್ಕುವ ಸಾಧ್ಯತೆಗಳು ದಟ್ಟವಾಗಿದೆ ಎಂದು ಐಎಂಎಫ್ ನ ಸಂಶೋಧನಾ ವಿಭಾಗದ ಉಪನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕ ಸುಧಾರಣಾ ಕ್ರಮಗಳು ಭಾರತದ ಆರ್ಥಿಕತೆ ಚೀನಾದ ಆರ್ಥಿಕತೆಗಳಿಗಿಂತಲೂ ಹೆಚ್ಚು ಬೆಳವಣಿಗೆಯಾಗಲು ಸಹಾಯಕವಾಗುತ್ತಿದೆ. ಪ್ರಧಾನಿ ಮೋದಿ ಅವರ ಯೋಜನೆಗಳಿಂದಾಗಿ ಭಾರತದ ಆರ್ಥಿಕತೆ 2016ರ ವೇಳೆಗೆ ಶೇ.6.3ರಷ್ಟಾಗಲಿದೆ ಎಂದು ಐಎಂಎಫ್ ಹೇಳಿದೆ.