ನವದೆಹಲಿ : ಸಾಮಾನ್ಯ ಜನರಿಗೆ ಕೇಂದ್ರ ಸರ್ಕಾರ ಮತ್ತೊಮ್ಮೆ ರಿಲೀಫ್ ನೀಡಲಿದ್ದು, ಪ್ರತಿ ಲೀಟರ್ ಪೆಟ್ರೋಲ್ ದರ 1.50ಕ್ಕೆ ಇಳಿಕೆಯಾಗುವ ಸಾಧ್ಯತೆ ಇದೆ.
ಪೆಟ್ರೋಲ್ ದರ ಮತ್ತೊಮ್ಮೆ ಇಳಿಕೆಯಾದರೆ, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಸತತವಾಗಿ 7ನೇ ಬಾರಿಗೆ ಪೆಟ್ರೋಲ್ ದರ ಇಳಿಕೆಯಾಗಲಿದೆ.
ಕಚ್ಚಾತೈಲ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಳಿಕೆಯಾಗಿರುವುದರಿಂದ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ದರ ಮತ್ತೊಮ್ಮೆ ಇಳಿಕೆ ಮಾಡಲು ಸಿದ್ಧತೆ ನಡೆಸಿವೆ.
ಪೆಟ್ರೋಲ್ ದರ ಇಳಿಕೆ ರೈತರು, ಜನಸಾಮಾನ್ಯರಿಗೆ ಸಹಾಯವಾಗುವುದರೊಂದಿಗೆ, ಹಣದುಬ್ಬರ ಕಡಿಮೆಯಾಗುವುದಕ್ಕೂ ಸಹಾಯಕಾರಿಯಾಗಲಿದೆ.
ಕಳೆದ ಶನಿವಾರವಷ್ಟೇ ಪೆಟ್ರೋಲ್ ಹಾಗೂ ಡಿಸೇಲ್ ದರ ಇಳಿಕೆಯಾಗಿತ್ತು. ತೈಲ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿರುವುದು ಸಾಮಾನ್ಯ ಜನಗಳ ಮೇಲಿನ ಆರ್ಥಿಕ ಹೊರೆ ತಗ್ಗಿಸುವಲ್ಲಿ ಮೋದಿ ಸರ್ಕಾರದ ಬದ್ಧತೆಯನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ನ.15ರಂದು ಪೆಟ್ರೋಲ್ ದರ ಕಡಿಮೆಯಾಗುವ ಸಾಧ್ಯತೆ ಇದೆ.