Untitled Document
Sign Up | Login    
Dynamic website and Portals
  
January 24, 2015

ಬಜೆಟ್ ಮಹತ್ವದ್ದು, ಆದರೆ ಮುಂದಿನ 364 ದಿನಗಳೂ ಸರ್ಕಾರಕ್ಕೆ ಮುಖ್ಯ: ಜೇಟ್ಲಿ

ಹಣಕಾಸು ಸಚಿವ ಅರುಣ್‌ ಜೇಟ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ

ನವದೆಹಲಿ : ಬಜೇಟ್ ಘೋಷಣೆಗಿಂತಲೂ ವಿದೇಶಿ ಬಂಡವಾಳ ಹೂಡಿಕೆ, ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ನೀತಿ ನಿರೂಪಣೆಗಳನ್ನು ಅನುಷ್ಠಾನಕ್ಕೆ ತರುವುದು ಮುಖ್ಯ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

ವಿದೇಶಿ ಬಂಡವಾಳ ಹೂಡಿಕೆ, ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ ನೀತಿ ನಿರೂಪಣೆಯಲ್ಲಿ ಹೊಸ ಉಪಕ್ರಮಗಳನ್ನು ಜಾರಿಗೆ ತಂದಿದೆ. ಹಾಗಾಗಿ ಮುಂದಿನ ತಿಂಗಳು ಮಂಡನೆಯಾಗಲಿರುವ ಬಜೆಟ್ ಘೋಷಣೆಗಿಂತಲೂ ಈ ಕ್ರಮಗಳು ಹೆಚ್ಚು ಮಹತ್ವದ್ದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಬಜೆಟ್ ನಮ್ಮ ಸರ್ಕಾರದ ಪಾಲಿಗೆ ಮಹತ್ವದ ಗಳಿಗೆ. ಅದೇ ರೀತಿ ಮುಂದಿನ 364 ದಿನಗಳೂ ಸರ್ಕಾರದ ಪಾಲಿಗೆ ಅಷ್ಟೇ ಮುಖ್ಯ. ಹಾಗೆಂದು ನಾನು ಬಜೆಟ್ ಬಗ್ಗೆ ಜನ ಇಟ್ಟುಕೊಂಡಿರುವ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ ಎಂದು ಹೇಳಿದರು.

ರೈಲ್ವೆ, ರಕ್ಷಣಾ ಕ್ಷೇತ್ರಗಳನ್ನು ವಿದೇಶಿ ಬಂಡವಾಳ ಹೂಡಿಕೆಗೆ ತೆರೆಯುವಂತೆ ಮಾಡುವುದು ಸಣ್ಣ ಮಾತಲ್ಲ, ಜಿಎಸ್‌ಟಿ ಅನುಷ್ಠಾನಕ್ಕೆ ಮುಂದಾಗುವುದು, ಅದಿರು ಕ್ಷೇತ್ರ, ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆಗೆ ಸಂಬಂಧಿಸಿ ತೆಗೆದುಕೊಂಡ ಉಪಕ್ರಮಗಳು ಸಾಮಾನ್ಯವಾದುದೇನಲ್ಲ ಎಂದು ತಿಳಿಸಿದರು.

ನಮ್ಮ ಹಿಂದಿನ ಸರ್ಕಾರಗಳು ಈ ವಿಚಾರದಲ್ಲಿ ವಿಫಲವಾಗಿತ್ತು. ಆದರೆ, ನಾವು ದೇಶದ ಆರ್ಥಿಕ ಬೆಳವಣಿಗೆಯ ದೃಷ್ಠಿಯಿಂದ ಇದನ್ನೆಲ್ಲ ಬಜೆಟ್‌ಗೆ ಮೊದಲೇ ಮಾಡಿ ತೋರಿಸಿದ್ದೇವೆ ಎಂದು ಜೇಟ್ಲಿ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited