Untitled Document
Sign Up | Login    
Dynamic website and Portals
  
May 10, 2015

ಶಶಿ ಕಪೂರ್‌ ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ

ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ

ಮುಂಬೈ : ಬಾಲಿವುಡ್‌ ನ‌ ಹಿರಿಯ ನಟ ಶಶಿ ಕಪೂರ್‌ ಅವರಿಗೆ 2015 ನೇ ಸಾಲಿನ ಅತ್ಯುನ್ನತ ಚಲನ ಚಿತ್ರ ಪ್ರಶಸ್ತಿಯಾದ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಮುಂಬೈಯ ಪ್ರಥ್ವಿ ಚಿತ್ರಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಶಶಿ ಕಪೂರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಜೇಟ್ಲಿ, ಶಶಿ ಕಪೂರ್‌ ಅವರು ಮಹಾನ್‌ ಮೇರು ನಟ ,ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ಅವರು ಇಂದಿನ ಯುವ ಪೀಳಿಗೆಗೆ ಮಾದರಿ ಎಂದರು.

ಸಮಾರಂಭದಲ್ಲಿ ಬಾಲಿವುಡ್‌ ದಿಗ್ಗಜರಾದ ಅಮಿತಾಬ್‌ ಬಚ್ಚನ್‌, ಹೇಮಾ ಮಾಲಿನಿ, ಜಯಪ್ರದಾ , ಕಪೂರ್‌ ಕುಟುಂಬದ ನಟ, ನಟಿಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

77 ವರ್ಷದ ಶಶಿ ಕಪೂರ್‌ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು ,ಅವರಿಗೆ ದೆಹಲಿಗೆ ತೆರಳಿ ಪ್ರಶಸ್ತಿ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ವಿಶೇಷವೆಂದರೆ ಶಶಿ ಕಪೂರ್‌ ಅವರ ತಂದೆ ಪ್ರಥ್ವಿರಾಜ್‌ ಕಪೂರ್‌ ಮತ್ತು ಸಹೋದರ ರಾಜ್‌ ಕಪೂರ್‌ ಅವರೂ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದರು.

1969 ರಲ್ಲಿ ಆರಂಭವಾಗಿರುವ ಚಿತ್ರರಂಗದ ಮಹೋನ್ನತ ಪ್ರಶಸ್ತಿ ಫಾಲ್ಕೆ ಪುರಸ್ಕಾರಕ್ಕೆ ಭಾಜನರಾದ ದಿಗ್ಗಜರಲ್ಲಿ ಶಶಿ ಕಪೂರ್‌ 62 ನೇ ಯವರಾಗಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Entertainment

  • ಜುಲೈ 28 ರಿಂದ ಚೆನ್ನೈನಲ್ಲಿ ಕನ್ನಡ ಚಲನಚಿತ್ರೋತ್ಸವ
  • ಕನ್ನಡ ಚಲನಚಿತ್ರೋತ್ಸವವನ್ನು ಜುಲೈ 28 ರಿಂದ 31 ರವರೆಗೆ ಚೆನ್ನೈನ ಅಲುವಾರ್ ಪೇಟ್‍ನ ಕಸ್ತೂರಿ ರಂಗ ರಸ್ತೆಯಲ್ಲಿರುವ ರಷ್ಯನ್ ಸೆಂಟರ್ ಆಫ್ ಸೈನ್ಸ್ ಅಂಡ್ ಕಲ್ಚರ್ ನಲ್ಲಿ ಏರ್ಪಡಿಸಲಾಗಿದೆ.
  • ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್: ಬಾಲಿವುಡ್ ನಲ್ಲಿ ಮನಮೋಹನ್ ಸಿಂಗ್ ಕುರಿತು ಚಿತ್ರ ನಿರ್ಮಾಣ
  • 2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited