Untitled Document
Sign Up | Login    
Dynamic website and Portals
  
June 30, 2015

ಆರ್ಥಿಕ ಸಂಕಷ್ಟ: ಗ್ರೀಸ್ ದಿವಾಳಿಯತ್ತ

ಅಥೆನ್ಸ್‌ : ಆರ್ಥಿಕ ಸಂಕಷ್ಟ ಮತ್ತು ಸಾಲದ ಸುಳಿಗೆ ಸಿಲುಕಿರುವ ಯುರೋಪಿಯನ್‌ ಒಕ್ಕೂಟದ ಸದಸ್ಯ ದೇಶವಾದ ಗ್ರೀಸ್‌, ಈಗ ವಿಶ್ವದ ಆರ್ಥಿಕತೆಯನ್ನೇ ಅಲ್ಲೋಲ ಕಲ್ಲೋಲ ಮಾಡಿದೆ.

ಐಎಂಎಫ್ ಸೇರಿ ವಿವಿಧ ಐರೋಪ್ಯ ದೇಶಗಳು, ಸಂಸ್ಥೆಗಳಿಂದ ಗ್ರೀಸ್‌ 2008ರಲ್ಲಿ 16 ಲಕ್ಷ ಕೋಟಿ ರೂ.ನಷ್ಟು ಸಾಲ ಪಡೆದಿತ್ತು. ಗಡುವು (ಜೂ.30) ಹತ್ತಿರ ಬಂದರೂ ಸಾಲ ಮರುಪಾವತಿ ಮಾಡಲಾಗದೆ ಇಡೀ ದೇಶ ದಿವಾಳಿತನ ಎದುರಿಸುತ್ತಿದೆ. ದಿವಾಳಿ ಆದರೆ ಸಾಲ ಮನ್ನಾ ಆಗಬಹುದು ಎಂಬ ನಿರೀಕ್ಷೆಯಲ್ಲಿ ಗ್ರೀಸ್‌ ಇದೆ ಎನ್ನಲಾಗುತ್ತಿದೆ. ಅಲ್ಲದೆ, ಹೊಸದಾಗಿ ಸಾಲ ಪಡೆದರೆ ಸುಧಾರಣಾ ಕ್ರಮ ಕೈಗೊಳ್ಳಬೇಕು' ಎಂದು ಐರೋಪ್ಯ ದೇಶಗಳು ವಿಧಿಸಿರುವ ಷರತ್ತಿನ ಸಂಬಂಧ ಜನಮತಸಂಗ್ರಹ ಮಾಡಲು ಜುಲೈ 5ರ ದಿನಾಂಕವನ್ನು ನಿಗದಿಪಡಿಸಿದೆ.

ಇದೇ ವೇಳೆ, ಗ್ರೀಸ್‌ ನಲ್ಲಿನ ಆರ್ಥಿಕ ಸಂಕಷ್ಟದ ಪರಿಣಾಮ 6 ದಿನ ಕಾಲ ಬ್ಯಾಂಕ್‌ ಗಳು ಬಂದ್ ಆಗಿದ್ದು, ಎಟಿಎಂ ಹಣ ವಾಪಸು ಪಡೆಯುವ ಮೇಲೂ ಮಿತಿ ಹೇರಲಾಗಿದೆ.

ಇದು ವಿಶ್ವ ಆರ್ಥಿಕ ಮಾರುಕಟ್ಟೆ ಮೇಲೆ ದುಷ್ಪರಿಣಾಮ ಬೀರಿದ್ದು, ಜಾಗತಿಕವಾಗಿ ಷೇರುಪೇಟೆಗಳು ಕುಸಿದಿವೆ. ಜರ್ಮನಿ ಮತ್ತು ಫ್ರಾನ್ಸ್‌ ಷೇರುಪೇಟೆಗಳು ಶೇ.3ರಷ್ಟು ಕುಸಿದಿದ್ದು, ಯುರೋ ಮೌಲ್ಯವೂ ಪ್ರತಿ ಡಾಲರ್‌ಗೆ 1.10ಕ್ಕೆ ಕುಸಿದಿದೆ.

ಇನ್ನು, ಭಾರತೀಯ ಷೇರುಪೇಟೆಯೂ ತಲ್ಲಣಕ್ಕೊಳಗಾಗಿದ್ದು, ಒಂದು ಹಂತದಲ್ಲಿ ಸೆನ್ಸೆಕ್ಸ್‌ 600ಕ್ಕೂ ಹೆಚ್ಚು ಅಂಕ ಕುಸಿದಿತ್ತು. ಕೇಂದ್ರ ಸರ್ಕಾರದ ಭರವಸೆಯಿಂದಾಗಿ ತುಸು ಚೇತರಿಸಿಕೊಂಡಿತು.

ಹಾಗೊಂದು ವೇಳೆ, ಗ್ರೀಸ್‌ನಲ್ಲಿನ ಪರಿಸ್ಥಿತಿ ಸುಧಾರಣೆಯಾಗದೇ ಹೋದರೆ ಅದರ ಪರಿಣಾಮ ಭಾರತದ ಮೇಲೂ ಆಗಲಿದೆ. "ಗ್ರೀಸ್‌ಗೆ ಆರ್ಥಿಕ ಸಹಾಯ ಮಾಡಿದ್ದ ಯುರೋಪಿಯನ್‌ ದೇಶಗಳು ವಿತ್ತೀಯ ಸಂಕಷ್ಟಕ್ಕೆ ಸಿಲುಕಿ ಬಂಡವಾಳ ಹಿಂತೆಗೆಯಬಹುದು. ಅಲ್ಲದೆ, ಯುರೋ ಮೌಲ್ಯ ದುರ್ಬಲಗೊಂಡು ಅದು ಸಾಫ್ಟ್ವೇರ್‌ ಮತ್ತು ಇತರ ವ್ಯಾಪಾರ ವಲಯಗಳ ಮೇಲೆ ಪರಿಣಾಮ ಬೀರಬಹುದು' ಎಂದು ಭಾರತದ ಸರ್ಕಾರದ ಅಧಿಕಾರಿಗಳು ಎಚ್ಚರಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Business & Economics

ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಐಟಿ ದಾಳಿ
  • ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಾಲಿಕತ್ವದ ಕೆಫೆ ಕಾಫಿ ಡೇ ಮೇಲೆ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
  • ಆರ್ ಬಿಐ ನೂತನ ಅಧ್ಯಕ್ಷರಿಂದ ಮೊದಲ ಹಣಕಾಸು ನೀತಿ ಪ್ರಕಟ
  • ಸಾಮಾನ್ಯ ಬಜೆಟ್ ನೊಂದಿಗೆ ರೈಲ್ವೆ ಬಜೆಟ್ ವಿಲೀನ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited