Untitled Document
Sign Up | Login    
Dynamic website and Portals
  

Related News

ಪ್ರಧಾನಿ ಮೋದಿ ಓರ್ವ ಟೆರರಿಸ್ಟ್: ಪಾಕ್ ವಿದೇಶಾಂಗ ಸಚಿವ ಖ್ವಾಜಾ ಮೊಹಮ್ಮದ್ ಆಸೀಫ್

ಭಾರತದ ಪ್ರಧಾನಿ ನರೇಂದ್ರ ಮೋದಿ ಓರ್ವ ಟೆರರಿಸ್ಟ್. ಆರ್ ಎಸ್ ಎಸ್ ಒಂದು ಉಗ್ರ ಸಂಘಟನೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಖ್ವಾಜಾ ಮೊಹಮ್ಮದ್ ಆಸೀಫ್ ವಾಗ್ದಾಳಿ ನಡೆಸಿದ್ದಾರೆ. ಪಾಕ್ ನ ಜಿಯೋ ಸುದ್ದಿವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿರುವ ಖ್ವಾಜಾ ಆಸೀಫ್ ಅವರು,...

ಪಾಕ್ ಜತೆ ಐದು ಅಜೆಂಡಾ ಕುರಿತು ಚರ್ಚಿಸಲು ಭಾರತ ಸಿದ್ಧವಿದೆ: ವಿಕಾಸ್ ಸ್ವರೂಪ್

ಪಾಕಿಸ್ತಾನದ ಜತೆ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಸುವುದು ಈಗ ಪಾಕಿಸ್ತಾನದ ನಿರ್ಧಾರವನ್ನು ಅವಲಂಬಿಸಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್‌.ಜೈಶಂಕರ್‌ ಪಾಕಿಸ್ತಾನಕ್ಕೆ ತಿಳಿಸಿದ್ದಾರೆ ಎಂದು ವಿದೇಶಾಂಗ ವಕ್ತಾರ ವಿಕಾಸ್‌ ಸ್ವರೂಪ್‌ ಹೇಳಿದ್ದಾರೆ. ಗಡಿಯಾಚೆಗಿನ ಭಯೋತ್ಪಾದನೆ, ಜಮ್ಮು ಮತ್ತು ಕಾಶ್ಮೀರದ ಭಾಗಗಳ ಅಕ್ರಮ ಸ್ವಾಧೀನ...

ಅಗತ್ಯ ವಸ್ತುಗಳ ಪೂರೈಕೆ ಅಗತ್ಯವಿಲ್ಲ: ಪಾಕ್ ಗೆ ಭಾರತ ತಿರುಗೇಟು

ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕಾಶ್ಮೀರಿಗಳಿಗೆ ನೆರವು ನೀಡಲು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವುದಾಗಿ ಹೇಳಿದ್ದ ಪಾಕಿಸ್ತಾನ ಪ್ರಸ್ತಾವನೆಗೆ ಭಾರತ ತಿರುಗೇಟು ನೀಡಿದೆ. ಕಾಶ್ಮೀರಿಗಳಿಗೆ ನೆರವು ನೀಡಲು ಅಗತ್ಯ ವಸ್ತುಗಳನ್ನು ಪೂರೈಕೆ ಮಾಡುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಇಸ್ಲಾಮಾಬಾದ್​ ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ...

ಜುಲೈ 7ರಿಂದ ಆಫ್ರಿಕಾದ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 7ರಿಂದ ಆಫ್ರಿಕಾದ 4 ದೇಶಗಳಿಗೆ 5 ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಮೊದಲು ಮೊಜಾಂಬಿಕ್ ಗೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಜು.8, 9 ರಂದು ಅಲ್ಲಿನ ಅಧ್ಯಕ್ಷ...

ಯೋಗ ದಿನಾಚರಣೆಗೆ ವಿಶ್ವ ಮಟ್ಟದಲ್ಲಿ ಸಿಗುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಗೆ ಪ್ರಧಾನಿ ಸಂತಸ

2014ರ ಸೆಪ್ಟೆಂಬರ್​ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಗ್ಗೆ ಪ್ರಸ್ತಾಪಿಸಿದಾಗ ವಿದೇಶಗಳಿಂದ ಇಷ್ಟು ಪ್ರಮಾಣದ ಉತ್ಸಾಹ ಕಂಡುಬರಬಹುದೆಂಬ ನಿರೀಕ್ಷೆಯಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ದೇಶಿಸಿ ನವದೆಹಲಿಯಲ್ಲಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ...

ಭಾರತೀಯ ನೌಕಾದಳದಿಂದ ವಿದೇಶಿ ನಾವಿಕರ ರಕ್ಷಣೆ

ಮುಳುಗುತ್ತಿದ್ದ ಹಡಗಿನಲ್ಲಿನ ನಾವಿಕರನ್ನು ಭಾರತೀಯ ನೌಕಾದಳ ಸಿಬ್ಬಂದಿಗಳು ಅರಬ್ಬಿ ಸಮುದ್ರದಲ್ಲಿ ರಕ್ಷಿಸಿದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರದಲ್ಲಿ ಇನ್ಸಿನಿಟಿ ಹೆಸರಿನ ವಿದೇಶಿ ಹಡಗು ಸಂಚರಿಸುತ್ತಿರುವಾಗ ಹಡಗಿನಲ್ಲಿ ರಂದ್ರ ಕಾಣಿಸಿಕೊಂಡಿದ್ದರಿಂದ ಮುಳುಗುವ ಸ್ಥಿತಿಗೆ ತಲುಪಿತ್ತು. ಹಡಗಿನಲ್ಲಿ ಒಂದೇ ಸಮನೆ ನೀರು...

ಆಫ್ಘಾನಿಸ್ತಾನದ ಕಾಬೂಲ್ ನಲ್ಲಿ ಭಾರತೀಯ ಮಹಿಳೆಯ ಅಪಹರಣ

ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ನಲ್ಲಿ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಮಹಿಳೆಯೊಬ್ಬರನ್ನು ಅಪಹರಿಸಲಾಗಿದೆ ಎಂದು ತಿಳಿದುಬಂದಿದೆ. ಅಪಹರಿಸಲ್ಪಟ್ಟ ಮಹಿಳೆ ಕೋಲ್ಕತ್ತ ಮೂಲದ 40 ವರ್ಷದ ಜುದಿತ್ ಡಿಸೋಜಾ ಎಂದು ತಿಳಿದುಬಂದಿದೆ. ಇವರನ್ನು ಕಾಬೂಲ್​ನ ತೈಮನಿ ಎಂಬ ಪ್ರದೇಶದಿಂದ ಬಂದೂಕುಧಾರಿಯೊಬ್ಬ ಅಪಹರಿಸಿದ್ದಾನೆ ಎನ್ನಲಾಗಿದೆ. ಅಪಹರಣಕ್ಕೆ...

ಪ್ರಧಾನಿ ಮೋದಿಯವರಿಂದ ಭಾರತವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲಾಗುತ್ತಿದೆ: ವೆಂಕಯ್ಯ ನಾಯ್ಡು

ಪ್ರಧಾನಿ ನರೇಂದ್ರ ಮೋದಿ ವಿಶ್ವದ ಪ್ರಮುಖ 10 ನಾಯಕರಲ್ಲಿ ಒಬ್ಬರಾಗಿದ್ದಾರೆ, ಜಾಗತಿಕ ವೇದಿಕೆಯಲ್ಲಿ ಅವರನ್ನು ಗುರುತಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಭಾರತವನ್ನು ಈಗ ಜಾಗತಿಕ ಮಟ್ಟದಲ್ಲಿ ಗುರುತಿಸಲಾಗುತ್ತಿದೆ. ಮೋದಿ ಅವರಿಗೆ ಇತರೆ ದೇಶಗಳು ಒಂದರ ಹಿಂದೆ ಒಂದು ಕೆಂಪು...

ವಿದೇಶಿ ಬಂಡವಾಳ ಹೂಡಿಕೆ ಮೂಲಕ ರಾಷ್ಟ್ರೀಯ ವಹಿವಾಟು ಉನ್ನತೀಕರಣ: ಪ್ರಧಾನಿ ಮೋದಿ

ವಿದೇಶೀ ಹೂಡಿಕೆಗಳನ್ನು ಆಕರ್ಷಿಸುವ ಸಲುವಾಗಿ ನಾವು ನಮ್ಮ ಆರ್ಥಿಕತೆಯನ್ನು ತೆರೆದಿದ್ದೇವೆ. ಭ್ರಷ್ಟಾಚಾರವನ್ನು ನಿಗ್ರಹಿಸುವ ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೆಂದ್ರ ಎನ್.ಡಿ.ಎ ಸರ್ಕಾರ ಎರಡು ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ವಾಲ್ ಸ್ಟ್ರೀಟ್ ಜರ್ನಲ್ ಗೆ ನೀಡಿರುವ ಸಂದರ್ಶನದಲ್ಲಿ...

ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ನಿಗದಿ

ಕೊನೆಗೂ ಭಾರತ-ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿದೆ. ಏ.26 ರಂದು ಹಾರ್ಟ್ ಆಫ್ ಏಷ್ಯಾ ಸಮ್ಮೇಳನದ ಸಂದರ್ಭದಲ್ಲಿ ಭಾರತ-ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿಗಳ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಅಜೀಜ್ ಅಹ್ಮದ್ ಚೌಧರಿ ಹಾರ್ಟ್ ಆಫ್ ಏಷ್ಯಾ...

ವಿಮಾನದಲ್ಲೇ ರಾತ್ರಿ ವಿಶ್ರಾಂತಿ: ಸಮಯ ಉಳಿಸಲು ಪ್ರಧಾನಿ ಪ್ಲ್ಯಾನ್

ಪ್ರಧಾನಿ ಸಹಿತ ರಾಜಕೀಯ ಗಣ್ಯರು ವಿದೇಶ ಪ್ರವಾಸ ಕೈಗೊಂಡಾಗ ಐಷಾರಾಮಿ ಹೊಟೇಲ್‌ ಗ‌ಳಲ್ಲಿ ಕಾಲ ಕಳೆಯುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಪ್ರಧಾನಿ ನರೇಂದ್ರ ಮೋದಿ, ಸಮಯ ಉಳಿಸುವ ಸಲುವಾಗಿ ರಾತ್ರಿ ವೇಳೆ ವಿಮಾನದಲ್ಲೇ ಮಲಗುವ ಸಂಪ್ರದಾಯ ಆರಂಭಿಸಿದ್ದಾರೆ ಎಂಬ ಅಚ್ಚರಿಯ...

ಒಂದು ವಾರದಲ್ಲಿ ಪಾಸ್ ಪೋರ್ಟ್

ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ್ ಪಡೆಯುವ ವಿಧಾನವನ್ನು ಇನ್ನಷ್ಟು ಸುಲಭವಾಗಿಸಿದೆ. ಅರ್ಜಿಯ ಜೊತೆ ಆಧಾರ್‌, ಮತದಾರನ ಗುರುತಿನ ಚೀಟಿ ಮತ್ತು ಪಾನ್‌ಕಾರ್ಡ್‌ ಜೊತೆ ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಕೇಸುಗಳು ಬಾಕಿ ಇಲ್ಲ ಎಂಬ ಅಫಿಡವಿಟ್‌ ಹೇಳಿಕೆ ನೀಡಿದರೆ ಒಂದು ವಾರದಲ್ಲಿ...

ಪ್ರಧಾನಿ ಮೋದಿ ಲಾಹೋರ್ ಭೇಟಿಃ ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿ ಭೇಟಿ ನಿಗದಿ

ಭಾರತ-ಪಾಕಿಸ್ತಾನ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳು ಜನವರಿ 15 ಕ್ಕೆ ಇಸ್ಲಮಾಬಾದ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಅಧಿಕೃತ ಘೋಷಣೆಯಾಗಬೇಕಿದೆಯಷ್ಟೆ. ಪ್ರಧಾನಿ ನರೇಂದ್ರ ಮೋದಿ ಅವರ ಆಕಸ್ಮಿಕ ಪಾಕಿಸ್ತಾನದ ಭೇಟಿಯ ನಂತರ ಈ ಸುದ್ದಿ ಬಂದಿದೆ. ಶುಕ್ರವಾರ...

ಲಿಬಿಯಾದಲ್ಲಿ ನಾಲ್ವರು ಭಾರತೀಯರ ಅಪಹರಣ : ಐಸಿಸ್ ಉಗ್ರರ ಕೈವಾಡದ ಶಂಕೆ

ಲಿಬಿಯಾದಲ್ಲಿ ನಾಲ್ವರು ಭಾರತೀಯರ ಅಪಹರಣವಾಗಿರುವ ವರದಿಯಾಗಿದೆ. ಈ ನಾಲ್ವರೂ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ನಾಲ್ವರನ್ನೂ ಗುರುವಾರ ಸಂಜೆ ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಈ ಅಪಹರಣದ ಹಿಂದೆ ಐಸಿಸ್ ಉಗ್ರರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಭಾರತೀಯ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಮಾಹಿತಿ ಖಚಿತಪಡಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಈ...

ಭಾಷೆ ವಿದೇಶೀ ನೆಲದಲ್ಲಿ ಅಪರಿಚಿತರನ್ನೂ ಒಂದುಗೂಡಿಸುತ್ತದೆ: ಪ್ರಧಾನಿ ಮೋದಿ

ಭಾಷೆ ಪರದೇಶಗಳಲ್ಲಿ ಅಪರಿಚತರನ್ನೂ ಒಂದುಗೂಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಷ್ಯಾ ಹಾಗೂ 5 ಮಧ್ಯ ಏಷಿಯಾ ದೇಶಗಳ ಪ್ರವಾಸದಲ್ಲಿರುವ ಮೋದಿ ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್ ನಲ್ಲಿ ಜು.7ರಂದು ಅನಿವಾಸಿ ಭಾರತೀಯರನ್ನು, ಹಿಂದಿ ಭಾಷೆ ಕಲಿಯುವ ವಿದ್ಯಾರ್ಥಿಗಳನ್ನು ಹಾಗೂ ಭಾರತ...

ವಿದೇಶೀ ಎನ್ ಜಿ ಒ ಸಂಶೋಧಕರಿಗೆ ಇನ್ನು ಮುಂದೆ ವೀಸಾ ದುರ್ಲಭ

ಭಾರತದಲ್ಲಿ ಸರಕಾರೇತರ ಸಂಸ್ಥೆ (ಎನ್.ಜಿ.ಒ) ಗಳಲ್ಲಿ ಮಾನವ ಹಕ್ಕು ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮಾಡಲು ಬಯಸುವ ವಿದೇಶೀಯರು ಇನ್ನು ಮುಂದೆ ವೀಸಾ ಪಡೆಯಲು ಸರಕಾರ ಕಠಿಣ ಪರಿಶೀಲನೆಗಳಿಗೆ ಒಳಪಡಬೇಕಾಗುತ್ತದೆ. ಸಂಶೋಧನಗೆಳಿಗೆ ಸಂಬಂಧಿಸಿದಂತೆ ಭಾರತದ ಉದಾರ ನೀತಿಯನ್ನು ದುರುಪಯೋಗಪಡಿಸಿದ ಉದಾಹರಣೆಗಳು ಹೆಚ್ಚುತ್ತಿರುವ...

ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಚಾಲನೆ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾದ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಜುಲೈ 1 ರಂದು ಚಾಲನೆ ನೀಡಲಿದ್ದಾರೆ. ನವದೆಹಲಿಯ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ, ಸಂಜೆ 4 ಗಂಟೆಗೆ ಡಿಜಿಟಲ್ ಇಂಡಿಯಾ ಸಪ್ತಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ನೂರಾರು ಕೋಟಿ...

ಯುದ್ಧ ಟ್ಯಾಂಕರ್ ನಿರ್ಮಾಣ: ಸ್ವದೇಶಿ, ವಿದೇಶಿ ಕಂಪನಿಗಳಿಗೆ ಆಹ್ವಾನ

ಪ್ರಮುಖ ಯುದ್ಧ ಟ್ಯಾಂಕರ್‌ (ಎಂಬಿಟಿಎಸ್‌)ಗಳನ್ನು ಬದಲಾಯಿಸಲು ಮುಂದಾಗಿರುವ ಭಾರತೀಯ ಸೇನೆ, ಭವಿಷ್ಯದ ಯುದ್ಧ ಟ್ಯಾಂಕರ್‌ (ಫ್ಯೂಚರ್‌ ಕಾಂಬ್ಯಾಟ್‌ ವೆಹಿಕಲ್‌, ಎಫ್ಆರ್‌ಸಿವಿ) ನಿರ್ಮಾಣಕ್ಕೆ ಸ್ವದೇಶಿ ಮತ್ತು ವಿದೇಶಿ ಕಂಪನಿಗಳಿಗೆ ಆಹ್ವಾನ ನೀಡಿದೆ. ಸೇನೆಯ ಈ ನಡೆ ಈಗಾಗಲೇ ಯುದ್ಧ ಟ್ಯಾಂಕರ್‌ ಗಳ ಮಾದರಿ...

ಪ್ರಯಾಣ ದಾಖಲೆಗಾಗಿ ಹೆಸರು ಬದಲಿಸಿಕೊಂಡಿದ್ದ ಲಲಿತ್ ಮೋದಿ

ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ವಿದೇಶ ಪ್ರಯಾಣ ಸಂಬಂಧ ತಮ್ಮ ಹೆಸರನ್ನೇ ಬದಲಿಸಿಕೊಂಡಿದ್ದ ವಿಚಾರ ಈಗ ಬಹಿರಂಗವಾಗಿದೆ. ಬ್ರಿಟೀಷ್ ಮೂಲದ ಮಾಧ್ಯಮ ವರದಿ ಮಾಡಿರುವಂತೆ ಬ್ರಿಟಿಷ್ ಸರ್ಕಾರಕ್ಕೆ ಲಲಿತ್ ಮೋದಿ ಸಲ್ಲಿಕೆ ಮಾಡಿರುವ ದಾಖಲೆಗಳಲ್ಲಿ ಅವರು ತಮ್ಮ ಹೆಸರನ್ನು ಪ್ರಿನ್ಸ್ ಚಾರ್ಲ್ಸ್...

ಕೇಂದ್ರ ಸರ್ಕಾರ ದೇಶಭ್ರಷ್ಟನಿಗೆ ರಕ್ಷಣೆ ನೀಡುತ್ತಿದೆ: ಕಾಂಗ್ರೆಸ್

ಲಲಿತ್ ಮೋದಿ ವಿದೇಶದಲ್ಲಿ ವಾಸಿಸಲು ನೆರವು ನೀಡಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾನವೀಯತೆ ನೆಲೆಯಲ್ಲಿ ಸಹಾಯ ಮಾಡಿದ್ದು ಸುಳ್ಳು. ಕೇಂದ್ರ ಎನ್.ಡಿ.ಎ ಸರ್ಕಾರ ಒಬ್ಬ ಕ್ರಿಮಿನಲ್ ಗೆ ರಕ್ಷಣೆ ನೀಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ ಗಂಭೀರವಾಗಿ...

ಸುಷ್ಮಾ ಸ್ವರಾಜ್ ಗೆ ತಾವು ಏನುಮಾಡಿದ್ದೇವೆ ಎಂಬ ಅರಿವಿಲ್ಲ: ಪ್ರಶಾಂತ್ ಭೂಷಣ್

ಐಪಿಎಲ್ ವಿವಾದದಲ್ಲಿ ಸಿಲುಕಿ, ದೇಶದದಿಂದ ಓಡಿ ಹೋದವರ ಪರವಾದ ಧೋರಣೆ ಸರಿಯಲ್ಲ. ಸುಷ್ಮಾ ಸ್ವರಾಜ್ ತಮಗೆ ತಕ್ಕದಲ್ಲದ ಕೆಲಸ ಮಾಡಿದ್ದಾರೆ. ಲಲಿತ್ ಮೋದಿ ಅವರು ವೀಸಾ ಪಡೆಯಲು ಸುಷ್ಮಾ ಸ್ವರಾಜ್ ಅವರು ನೆರವಾದದ್ದು, ಸರಿಯಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮತ್ತು ಸಾಮಾಜಿಕ...

ಶಾಲೆ ಮೇಲೆ ಪಾಕ್‌ ಹೆಲಿಕಾಪ್ಟರ್‌ ಪತನ: 7 ಜನರ ಸಾವು

ರಾಯಭಾರಿಗಳನ್ನು ಹೊತ್ತೂಯ್ಯುತ್ತಿದ್ದ ಪಾಕಿಸ್ತಾನ ಸೇನೆಗೆ ಸೇರಿದ ಹೆಲಿಕಾಪ್ಟರೊಂದು ಪಾಕ್‌ ನ ಉತ್ತರ ದಿಕ್ಕಿನಲ್ಲಿರುವ ಗಿಲಿಟ್‌ ನ ಶಾಲೆಯೊಂದರ ಮೇಲೆ ಪತನವಾಗಿದೆ. ಈ ದುರ್ಘ‌ಟನೆಯಲ್ಲಿ ನಾರ್ವೆ ಹಾಗೂ ಫಿಲಿಪ್ಪೀನ್ಸ್‌ ನ ರಾಯಭಾರಿಗಳು, ಮಲೇಷ್ಯಾ ಮತ್ತು ಇಂಡೋನೇಷ್ಯಾ ರಾಯಭಾರಿಗಳ ಪತ್ನಿಯಂದಿರು, ಹೆಲಿಕಾಪ್ಟರ್‌ ನ ಇಬ್ಬರು...

ಡಾಲರ್ ಎದುರು ಕುಸಿದ ರೂಪಾಯಿ ಮೌಲ್ಯ

'ಅಮೆರಿಕಾ'ದ ಡಾಲರ್ ಎದುರು ರೂಪಾಯಿ ಮೌಲ್ಯ 71ಪೈಸೆ ಕುಸಿದಿದೆ. ಮೇ.7ರಂದು ಪ್ರಾರಂಭವಾದ ವಹಿವಾಟಿನಲ್ಲಿ ಪ್ರತಿ ಡಾಲರ್ ಗೆ 63.75ರಷ್ಟಿದ್ದ ರೂಪಾಯಿ ಮೌಲ್ಯ ಮಧ್ಯಾಹ್ನದ ವೇಳೆಗೆ 64ಕ್ಕೆ ಕುಸಿದಿದೆ. ಸೆಪ್ಟೆಂಬರ್ ನಂತರ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ಕುಸಿದಿದೆ. ಜಾಗತಿಕ ಮಟ್ಟದಲ್ಲಿ...

ಹಣವಿಲ್ಲದೇ ಮುಚ್ಚುವ ಸ್ಥಿತಿಗೆ ತಲುಪಿದ ಗ್ರೀನ್ ಪೀಸ್ ಎನ್.ಜಿ.ಒ

ವಿದೇಶದಿಂದ ಅಕ್ರಮವಾಗಿ ದೇಣಿಗೆ ಪಡೆಯುತ್ತಿದ್ದ ಎನ್.ಜಿ.ಒ ಗಳ ವಹಿವಾಟುಗಳ ಮೇಲೆ ಕಣ್ಣಿಡಲು ಕೇಂದ್ರ ಸರ್ಕಾರ ಆದೇಶಿಸಿದ ಕೆಲವೇ ತಿಂಗಳಲ್ಲಿ ಗ್ರೀನ್ ಪೀಸ್ ಎನ್.ಜಿ.ಒಗೆ ಹಣದ ಕೊರತೆ ಎದುರಾಗಿದೆ! ಹಣದ ಕೊರತೆ ಎದುರಾಗಿರುವ ಪರಿಣಾಮ ಗ್ರೀನ್ ಪೀಸ್ ಎನ್.ಜಿ.ಒ ಮುಚ್ಚಲು ತಯಾರಿ ನಡೆಸಿದೆ....

ಗ್ರಾಮ ಪಂಚಾಯತ್ ಚುನಾವಣೆ: ಸಿಎಂ ವಿದೇಶ ಪ್ರವಾಸ ರದ್ದು

ಬಂಡವಾಳ ಹೂಡಿಕೆ ಆಕರ್ಷಿಸುವ ನಿಟ್ಟಿನಲ್ಲಿ ನಿಗದಿಯಾಗಿದ್ದ ಫ್ರಾನ್ಸ್, ಸ್ವೀಡನ್, ಜರ್ಮನ್ ಪ್ರವಾಸಕ್ಕೆ ತೆರಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಾಕರಿಸಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ, ಇತರೆ ಕಾರ್ಯಕ್ರಮಗಳ ಒತ್ತಡದ ಹಿನ್ನೆಲೆಯಲ್ಲಿ ವಿದೇಶ ಪ್ರವಾಸಕ್ಕೆ ತೆರಳಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ರಾಜ್ಯಕ್ಕೆ ಬಂಡವಾಳ ಆಕರ್ಷಿಸುವ ಸಲುವಾಗಿ...

ಒಬಾಮಾ ಭಾರತ ಭೇಟಿ ವಿಚಾರ: ಖರ್ಚು-ವೆಚ್ಚದ ವಿವರ ನೀಡಲು ಕೇಂದ್ರ ನಕಾರ

ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಜನವರಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಂರ್ಭದಲ್ಲಿ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂಬ ವಿವರ ನೀಡಿ ಎಂದು ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಐ) ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ವಿದೇಶಾಂಗ ವ್ಯವಹಾರಗಳ...

ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ : ಪಾಕ್ ನಿಲುವಿಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ

'ಕಾಶ್ಮೀರಿ ಪಂಡಿತ'ರಿಗೆ ಪುನರ್ವಸತಿ ಕಲ್ಪಿಸುವ ಯೋಜನೆ ಬಗ್ಗೆ ಪಾಕಿಸ್ತಾನದ ನಿಲುವನ್ನು ಭಾರತ ಸರ್ಕಾರ ಖಂಡಿಸಿದೆ. ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಿದರೆ, ಜನಸಂಖ್ಯೆಯಲ್ಲಿ ವ್ಯತ್ಯಯವಾಗುವುದರಿಂದ ವಿಶ್ವಸಂಸ್ಥೆ ನಿರ್ಣಯಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಪಾಕಿಸ್ತಾನ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ...

ಧಾರ್ಮಿಕ ಸ್ವಾತಂತ್ರ್ಯದ ಬಗೆಗಿನ ಅಮೆರಿಕಾ ವರದಿ ಪೂರ್ವಾಗ್ರಹ ಪೀಡಿತ: ಭಾರತ

'ನರೇಂದ್ರ ಮೋದಿ' ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಅಲ್ಪಸಂಖ್ಯಾತರು ಭಾರತದಲ್ಲಿ ಧಾರ್ಮಿಕ ಹಿಂಸಾಚಾರಕ್ಕೆ ತುತ್ತಾಗುತ್ತಿದ್ದಾರೆ ಎಂಬ ಅಮೆರಿಕಾ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ವರದಿಗೆ ಭಾರತ ಸರ್ಕಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಭಾರತವನ್ನು ಸರಿಯಾಗಿ ಅರ್ಥಮಾಡಿಕೊಳ್ಳದವರು ಮಾತ್ರ ಈ ರೀತಿಯ ವರದಿ...

ಮೇ.6ಕ್ಕೆ ಕಾಂಗ್ರೆಸ್ ಸಭೆ: ರಾಹುಲ್ ಗಾಂಧಿಗೆ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಸಾಧ್ಯತೆ

'ರಾಹುಲ್ ಗಾಂಧಿ' ಅವರಿಗೆ ಕಾಂಗ್ರೆಸ್ ನಲ್ಲಿ ಅತ್ಯುನ್ನತ ಹುದ್ದೆ ನೀಡುವ ವಿಷಯ ಮತ್ತೆ ಚರ್ಚೆಗೆ ಬಂದಿದೆ. ಈ ಬಗ್ಗೆ ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸಲು ಮೇ.6ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಭೆ ಕರೆದಿದ್ದಾರೆ. ನವದೆಹಲಿಯಲ್ಲಿರುವ ಸೋನಿಯಾ ಗಾಂಧಿ ನಿವಾಸದಲ್ಲೇ ಕಾಂಗ್ರೆಸ್...

ರಾಜ್ಯಪಾಲರ ಪ್ರವಾಸಗಳಿಗೆ ಕೇಂದ್ರ ಸರ್ಕಾರ ಕಡಿವಾಣ

ಬಯಸಿದಾಗ ವಿದೇಶ ಪ್ರವಾಸ ಅಥವಾ ತಮ್ಮ ರಾಜ್ಯಕ್ಕೆ ಹೋಗುವ ರಾಜ್ಯಪಾಲರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಡಿವಾಣ ಹಾಕಿದೆ. ಕಾರ್ಯನಿರ್ವಹಿಸುತ್ತಿರುವ ರಾಜ್ಯದಿಂದ ರಾಜ್ಯಪಾಲರು ಹೊರಕ್ಕೆ ಕಾಲಿಡುವ ಮುನ್ನ ರಾಷ್ಟ್ರಪತಿಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂಬ ನಿಯಮವನ್ನು ರೂಪಿಸಿದೆ. ವರ್ಷವೊಂದರಲ್ಲಿ 73ಕ್ಕಿಂತ ಹೆಚ್ಚು...

ಯೆಮೆನ್‌ ನಲ್ಲಿ ರಕ್ಷಣಾ ಕಾರ್ಯಾಚರಣೆ ಅಂತ್ಯ

ಯುದ್ಧಪೀಡಿತ ಯೆಮೆನ್‌ ನ ರಾಜಧಾನಿ ಸನಾದಿಂದ 630 ಮಂದಿಯನ್ನು ರಕ್ಷಿಸಲಾಗಿದೆ. ಅವರನ್ನು ಕೊನೆಯ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ. ಇದರೊಂದಿಗೆ ಯೆಮೆನ್‌ ನಲ್ಲಿ ವೈಮಾನಿಕ ರಕ್ಷಣಾ ಕಾರ್ಯಚರಣೆಯನ್ನು ಅಂತ್ಯಗೊಳಿಸಲಾಗಿದೆ. ಇದುವರೆಗೆ ಯೆಮೆನ್‌ ನಲ್ಲಿ 5600 ಜನರನ್ನು ರಾಹತ್‌ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ....

ಭಾರತೀಯ ಮೀನುಗಾರರ 57 ದೋಣಿಗಳನ್ನು ಬಿಡುಗಡೆ ಮಾಡಿದ ಪಾಕಿಸ್ತಾನ

ಸೌಹಾರ್ದತೆಯ ಸಂಕೇತವಾಗಿ, ಮಾ.21ರಂದು ಪಾಕಿಸ್ತಾನ, ತನ್ನ ವಶದಲ್ಲಿದ್ದ ಭಾರತೀಯ ಮೀನುಗಾರರ 57 ದೋಣಿಗಳನ್ನು ಬಿಡುಗಡೆ ಮಾಡಿದೆ. ಪಾಕ್ ನಲ್ಲಿದ್ದ ದೋಣಿಗಳನ್ನು ಬಿಡುಗಡೆ ಮಾಡಲು ಕಳೆದ ಮೇ ನಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ವಿದೇಶಾಂಗ ಕಚೇರಿ ತಿಳಿಸಿದೆ. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್...

ತೆರಿಗೆ ನಿಯಮ ಅನುಸರಿಸದ 1142 ಎನ್.ಜಿ.ಒಗಳ ಪರವಾನಗಿ ರದ್ದು

'ವಾರ್ಷಿಕ ಆದಾಯ'ದ ಬಗ್ಗೆ ಮಾಹಿತಿ ನೀಡದೇ ವಿದೇಶಿ ದೇಣಿಗೆ ಪಡೆಯುತ್ತಿರುವ 1142 ಎನ್.ಜಿ.ಒ ಗಳು ಹಾಗೂ ಆಂಧ್ರಪ್ರದೇಶದ ಸಂಘ-ಸಂಸ್ಥೆಗಳ ಪರವಾನಗಿಯನ್ನು ಕೇಂದ್ರ ಗೃಹ ಇಲಾಖೆ ರದ್ದುಪಡಿಸಿದೆ. ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿರುವ ಪರಿಣಾಮ, ಒಸಾಮಿಯಾ ವಿಶ್ವವಿದ್ಯಾನಿಲಯ, ಹೈದ್ರಾಬಾದ್ ವಿಶ್ವವಿದ್ಯಾನಿಲಯ, ವಿಶಾಖಪಟ್ಟಣದಲ್ಲಿರುವ...

ಶ್ರೀಲಂಕಾ ಸಂಸತ್‌ನಲ್ಲಿ ಮೋದಿ ಭಾಷಣ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ, ಶ್ರೀಲಂಕಾದ ಸಂಸತ್ ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎಂದು ವಿದೇಶಾಂಗ ಇಲಾಖೆ ಕಚೇರಿ ಮೂಲಗಳು ಮಾಹಿತಿ ನೀಡಿದೆ. ಮಾ.12ರಿಂದ 15ರ ಒಳಗಿನ ಅವಧಿಯಲ್ಲಿ ಪ್ರಧಾನಿ ಮೋದಿ ಭಾಷಣ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಯಾಗಲಿದೆ. ಶ್ರೀಲಂಕಾದ ಪ್ರಮುಖ ನಗರಗಳಾದ ಅನುರಾಧಪುರ, ಕ್ಯಾಂಡೀಸ್,...

ವಿದೇಶಾಂಗ ಕಾರ್ಯದರ್ಶಿ ಬದಲಾವಣೆಯಲ್ಲಿ ರಾಜಕೀಯವಿಲ್ಲ: ಸುಷ್ಮಾ ಸ್ವಾರಾಜ್

ವಿದೇಶಾಂಗ ಕಾರ್ಯದರ್ಶಿ ಬದಲಾವಣೆಯಲ್ಲಿ ಯಾವುದೇ ರೀತಿಯ ರಾಜಕೀಯ ಮಾಡಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಜೈ ಶಂಕರ್ ಅವರನ್ನು ನೇಮಕ ಮಾಡುವುದಕ್ಕೂ ಮೊದಲೇ ಸುಜಾತ ಸಿಂಗ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೆ. ತಾವು ಹುದ್ದೆಯಿಂದ...

ವಿದೇಶಾಂಗ ಕಾರ್ಯದರ್ಶಿಯಾಗಿ ಎಸ್.ಜೈಶಂಕರ್ ನೇಮಕ

ಅಮೆರಿಕದಲ್ಲಿನ ಭಾರತೀಯ ರಾಯಭಾರಿಯಾಗಿದ್ದ ಎಸ್.ಜೈಶಂಕರ್ ಅವರನ್ನು ವಿದೇಶಾಂಗ ಇಲಾಖೆ ಕಾರ್ಯದರ್ಶಿಯನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹಾಲಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅಧಿಕಾರದ ಅವಧಿ ಮೊಟಕುಗೊಳಿಸಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ತಡರಾತ್ರಿ...

ಎನ್ ಜಿಒಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಚಿಂತನೆ

ವಿದೇಶಿ ದೇಣಿಗೆ ದುರುಪಯೋಗ ಪಡಿಸಿಕೊಳ್ಳುತ್ತಿರುವ, ಉಗ್ರಗಾಮಿ ಚಟುವಟಿಕೆಗಳ ಜತೆಗೆ ಸಂಬಂಧ ಇಟ್ಟುಕೊಂಡಿರುವ ಹಾಗೂ ಮತಾಂತರ ಕಾರ್ಯದಲ್ಲಿ ನಿರತವಾಗಿರುವ ಆರೋಪ ಎದುರಿಸುತ್ತಿರುವ 188 ಎನ್ ಜಿಒಗಳ ವಿರುದ್ಧ ಕ್ರಮಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇಂಥ ಎನ್ ಜಿಒಗಳ ಪಟ್ಟಿಯನ್ನು...

ಬಜೆಟ್ ಮಹತ್ವದ್ದು, ಆದರೆ ಮುಂದಿನ 364 ದಿನಗಳೂ ಸರ್ಕಾರಕ್ಕೆ ಮುಖ್ಯ: ಜೇಟ್ಲಿ

ಬಜೇಟ್ ಘೋಷಣೆಗಿಂತಲೂ ವಿದೇಶಿ ಬಂಡವಾಳ ಹೂಡಿಕೆ, ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ನೀತಿ ನಿರೂಪಣೆಗಳನ್ನು ಅನುಷ್ಠಾನಕ್ಕೆ ತರುವುದು ಮುಖ್ಯ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ. ವಿದೇಶಿ ಬಂಡವಾಳ ಹೂಡಿಕೆ, ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ...

ಒಬಾಮಾ ಭೇಟಿಯ ನಿತ್ಯದ ಖರ್ಚು 900 ಕೋಟಿ ರೂ

ಭಾರತಕ್ಕೆ 3 ದಿನಗಳ ಭೇಟಿಗಾಗಿ ಜ.25ರಂದು ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ವಿದೇಶ ಪ್ರವಾಸದ ನಿತ್ಯದ ಖರ್ಚು 900 ಕೋಟಿ ರೂಪಾಯಿ. ಒಬಾಮಾ ವಿದೇಶ ಪ್ರವಾಸವೆಂದರೆ ಅದು ಸಾಮಾನ್ಯವಲ್ಲ. ಅವರ ಜತೆ ನೂರಾರು ಭದ್ರತಾ ಸಿಬ್ಬಂದಿ, ಅಧಿಕಾರಿಗಳ ತಂಡ, ವಾಹನಗಳು,...

ಅರುಣಾಚಲ ಪ್ರದೇಶದ ಬಗ್ಗೆ ಜಪಾನ್ ಹೇಳಿಕೆಗೆ ಚೀನಾ ಆಕ್ರೋಶ

ಅರುಣಾಚಲ ಪ್ರದೇಶದ ಬಗ್ಗೆ ಜಪಾನ್ ವಿದೇಶಾಂಗ ಸಚಿವರು ನೀಡಿದ್ದ ಹೇಳಿಕೆ ಬಗ್ಗೆ ಚೀನಾ ಆಕ್ರೋಶ ವ್ಯಕ್ತಪಡಿಸಿದ್ದು ಸಚಿವರ ಹೇಳಿಕೆಯನ್ನು ವಿರೋಧಿಸುವುದಾಗಿ ತಿಳಿಸಿದೆ. ಭಾರತ ಪ್ರವಾಸ ಕೈಗೊಂಡಿದ್ದ ಜಪಾನ್ ವಿದೇಶಾಂಗ ಸಚಿವ ಫುಮಿಯೊ ಕಿಶಿದ, ಅರುಣಾಚಲ ಪ್ರದೇಶ ಭಾರತದ ಭಾಗ ಎಂದು ಹೇಳಿದ್ದರು....

ಕೇಂದ್ರ ಸಚಿವರ ವಿದೇಶ ಪ್ರವಾಸಕ್ಕೆ ಕಡಿವಾಣ: 21ಅರ್ಜಿಗಳು ಪಿಎಂಒ ದಿಂದ ತಿರಸ್ಕೃತ

ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ಅಸ್ಥಿತ್ವಕ್ಕೆ ಬಂದ 6 ತಿಂಗಳಲ್ಲಿ ಈವರೆಗೂ 12 ಕೇಂದ್ರ ಸಚಿವರು ಸಲ್ಲಿಸಿದ್ದ 21 ವಿದೇಶ ಪ್ರವಾಸದ ಪ್ರಸ್ತಾವನೆಯನ್ನು ಪ್ರಧಾನಿ ಕಾರ್ಯಾಲಯ ತಿರಸ್ಕರಿಸಿದೆ. ಮಾಧ್ಯಮ ವರದಿ ಪ್ರಕಾರ, ಪ್ರಧಾನಿ ಕಾರ್ಯಾಲಯ 9 ಅರ್ಜಿಗಳನ್ನು ತಿರಸ್ಕರಿಸಿದ್ದರೆ,...

ಪ್ರವಾಸಿ ಭಾರತೀಯ ದಿನಾಚರಣೆಗೆ ಪ್ರಧಾನಿ ಮೋದಿ ಚಾಲನೆ

ಗುಜರಾತ್ ನ ಗಾಂಧೀನಗರದಲ್ಲಿ ನಡೆಯುತ್ತಿರುವ 13ನೇ ಪ್ರವಾಸಿ ಭಾರತೀಯ ದಿನಾಚರಣೆಗೆ ಪ್ರಧಾನಿ ನರೇಂದ್ರ ಮೋದಿ ಜ.8ರಂದು ಚಾಲನೆ ನೀಡಿದ್ದಾರೆ. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇಂದು ಭಾರತದ ಸಾಮರ್ಥ್ಯ ಹೆಚ್ಚಿದ್ದು ವಿಶ್ವದ 200ಕ್ಕೂ ಹೆಚ್ಚು ದೇಶದಲ್ಲಿ ಭಾರತೀಯರು ಇದ್ದಾರೆ...

ಸ್ಫೋಟವಾದ ಹಡಗು ನಮ್ಮದಲ್ಲ: ಪಾಕಿಸ್ತಾನ

ಅರಬ್ಬಿ ಸಮುದ್ರದಲ್ಲಿ ಪತ್ತೆಯಾದ ಹಡಗುಗಳು ಪಾಕಿಸ್ತಾನದ ಹಡಗುಗಳಲ್ಲ. ಭಾರತದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಭಾರತಕ್ಕೆ ಮಾಹಿತಿ ರವಾನಿಸಿದೆ. ಕರಾಚಿಯಿಂದ ಯಾವುದೇ ಹಡಗು ಭಾರತದತ್ತ ಬಂದಿಲ್ಲ. ಗುಜರಾತ್ ನ ಪೋರಬಂದರ್ ಕರಾವಳಿಯಲ್ಲಿ ಪತ್ತೆಯಾಗಿದ್ದು ಪಾಕಿಸ್ತಾನದ ಹಡಗುಗಳಲ್ಲ. ಕೇಟಿ ಬಂದರಿನಿಂದ...

ಪ್ರಧಾನಿಯ ಯೋಜನೆಗಳ ಪೈಕಿ ಸ್ವಚ್ಛ ಭಾರತ ಅಭಿಯಾನಕ್ಕೇ ದೇಶಾದ್ಯಂತ ಅತಿ ಹೆಚ್ಚು ಮೆಚ್ಚುಗೆ

ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಯೋಜನೆಗಳ ಪೈಕಿ ದೇಶದ ಜನತೆ ಸ್ವಚ್ಛ ಭಾರತ ಅಭಿಯಾನವನ್ನು ಅತಿ ಹೆಚ್ಚು ಇಷ್ಟಪಟ್ಟಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ, ದೇಶಾದ್ಯಂತ ನರೇಂದ್ರ ಮೋದಿ ಅವರ ಉಳಿದ ಎಲ್ಲಾ...

ಹೊಸವರ್ಷ ಆಚರಣೆಯಲ್ಲಿ ಪಾಲ್ಗೊಳ್ಳಬಾರದು: ಸಚಿವರು, ಸಂಸದರಿಗೆ ಪ್ರಧಾನಿ ಮನವಿ

ನೂತನ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ವಿಶ್ವದಾದ್ಯಂತ ಬಿರುಸಿನ ತಯಾರಿ ನಡೆಯುತ್ತಿದೆ. ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲು ಎಲ್ಲರೂ ಉತ್ಸುಕರಾಗಿದ್ದಾರೆ. ಆದರೆ ಈ ಭಾರಿ ಹೊಸ ವರ್ಷಾಚರಣೆಯಲ್ಲಿ ಪಾಲ್ಗೊಳ್ಳದಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲ ಸಚಿವರಿಗೆ ಹಾಗೂ ಸಂಸದರಿಗೆ ಮನವಿ ಮಾಡಿದ್ದಾರೆ. ಸಚಿವರು ಹಾಗೂ ಸಂಸದರು ಕಮರ್ಷಿಯಲ್...

ಡಿ.10 ರಂದು ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ

ಡಿಸೆಂಬರ್ 10ರಂದು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್, ಭಾರತಕ್ಕೆ ಆಗಮಿಸುವುದರ ಬಗ್ಗೆ ವಿದೇಶಾಂಗ ಸಚಿವಾಲಯ ಖಚಿತ ಪಡಿಸಿದೆ. ಡಿಸೆಂಬರ್ 10 ಮತ್ತು 11 ರಂದು 15ನೇ ಭಾರತ-ರಷ್ಯಾ ವಾರ್ಷಿಕ ಸಮ್ಮೇಳನಕ್ಕೆ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ನವದೆಹಲಿಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯ...

ಪ್ರಧಾನಿ ಮೋದಿ ವಿದೇಶ ಪ್ರವಾಸ ಅಭಿವೃದ್ಧಿಗೆ ಸಹಕಾರ: ಸುಷ್ಮಾ ಸ್ವರಾಜ್

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿದೇಶ ಪ್ರವಾಸದಿಂದ ಭಾರತದ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಿಪ್ರಾಯಪಟ್ಟಿದ್ದಾರೆ. ಲೋಕಸಭೆ ಕಲಾಪದ ವೇಳೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್, ಮೋದಿ ವಿದೇಶದಲ್ಲಿ ನೆಲೆಸಿರುವ ಭಾರತೀಯ ಎಂಬ ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು....

ಕಪ್ಪು ಹಣದ ಬಗ್ಗೆ ಭಾರತಕ್ಕೆ ಮಾಹಿತಿ ಇಲ್ಲ: ಹರ್ವ್ ಫಾಲ್ಸಿಯಾನಿ

ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣದ ಕುರಿತು ಭಾರತಕ್ಕೆ ಶೇ.1ರಷ್ಟೂ ಮಾಹಿತಿ ಇಲ್ಲ ಎಂದು ಸ್ವಿಸ್ ಬ್ಯಾಂಕ್ ಖಾತೆದಾರರ ಪಟ್ಟಿ ಬಿಡುಗಡೆ ಮಾಡಿದ ಖ್ಯಾತಿಯ ಹರ್ವ್ ಫಾಲ್ಸಿಯಾನಿ ಹೇಳಿದ್ದಾರೆ. ಫ್ರಾನ್ಸ್‌ನಲ್ಲಿ ಖಾಸಗಿ ಸುದ್ದಿವಾಹಿನಿಯಲ್ಲಿ ಮಾತನಾಡಿರುವ ಹರ್ವ್ ಫಾಲ್ಸಿಯಾನಿ, ಕಪ್ಪು ಹಣದ ಬಗ್ಗೆ ಭಾರತಕ್ಕೆ ಹೆಚ್ಚು...

ಪ್ರಧಾನಿ ಮೋದಿ ಜರ್ಮನ್‌ ಪ್ರವಾಸ ಸಾಧ್ಯತೆ

2015, ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಜರ್ಮನ್‌ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ. ಸಧ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಮೋದಿ ಅವರನ್ನು ಬ್ರಿಸ್ಬೇನ್‌ನಲ್ಲಿ ನಡೆದ ಜಿ-20 ಶೃಂಗ ಸಭೆಯಲ್ಲಿ ಭೇಟಿಯಾದ ಜರ್ಮನ್‌ನ ಚಾನ್ಸ್‌ಲರ್‌ ಎಂಜೆಲಾ ಮಾರ್ಕೆಲ್‌ ಅವರು ಜರ್ಮನಿಗೆ...

ಗಡಿ ರಾಜ್ಯಗಳ ಮದರಸಾಗಳಲ್ಲಿ ವಿದೇಶಿ ಶಿಕ್ಷಕರು: ಸಮೀಕ್ಷೆ ನಡೆಸಲು ಕೇಂದ್ರದ ನಿರ್ಧಾರ

ನೆರೆ ರಾಷ್ಟ್ರಗಳೊಂದಿಗೆ ಅಂತಾರಾಷ್ಟ್ರೀಯ ಗಡಿ ಹಂಚಿಕೊಂಡಿರುವ ರಾಜ್ಯಗಳ ಮದರಸಾಗಳಲ್ಲಿ ವಿದೇಶಿಗರು ಬೋಧನೆ ಮಾಡುತ್ತಿರುವುದರ ಬಗ್ಗೆ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ನ ಮದರಸಾದಲ್ಲಿ ಸ್ಫೋಟ ಪ್ರಕರಣ ನಡೆದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ....

ಇನ್ಸ್ಟಾಗ್ರಾಮ್ ನಲ್ಲಿ ಶೃಂಗ ಸಭೆ ಫೋಟೊ ಅಪ್ಲೋಡ್ ಮಾಡಿದ ಮೋದಿ

ಏಸಿಯಾನ್-ಇಂಡಿಯಾ ಶೃಂಗ ಸಭೆಯಲ್ಲಿ ಭಾಗವಹಿಸಲು ಮಯನ್ಮಾರ್ ಗೆ ತೆರಳಿರುವ ಪ್ರಧಾನಿ ಮೋದಿ ಅವರು, ಫೋಟೋ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಶೃಂಗ ಸಭೆಯ ಚಿತ್ರವೊಂದನ್ನು ಅಪ್ಲೋಡ್ ಮಾಡಿದ್ದಾರೆ. ಹತ್ತುದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಮಯನ್ಮಾರ್ ನಲ್ಲಿ ನಡೆಯಲಿರುವ ಶೃಂಗ ಸಭೆಯಲ್ಲಿ...

ಆಸ್ಟ್ರೇಲಿಯಾದಲ್ಲಿ ಮೋದಿ ಎಕ್ಸ್ ಪ್ರೆಸ್ ರೈಲು

ಆಸ್ಟ್ರೇಲಿಯಾದಲ್ಲಿ ಇದೀಗ ಪ್ರಧಾನಿ ನರೇಂದ್ರ ಮೋದಿ ಫೀವರ್ ಶುರುವಾಗಿದೆ. ಮೋದಿ ಮೋಡಿಗೆ ಒಳಗಾಗಿರುವ ಆಸ್ಟ್ರೇಲಿಯಾದ ಮಂದಿ ಅವರನ್ನು ನೋಡಲು ತೆರಳಲು ವಿಶೇಷ ರೈಲೊಂದನ್ನು ಏರಲಿದ್ದಾರೆ. ಈ ರೈಲಿಗೆ ಮೋದಿ ಎಕ್ಸ್ ಪ್ರೆಸ್ ಎಂದು ಹೆಸರಿಡಲಾಗಿದೆ. ನ.11ರಿಂದ 10 ದಿನಗಳ ಕಾಲ ಸುದೀರ್ಘ‌ ವಿದೇಶಿ...

ಡಾಲರ್ ಎದುರು ರೂಪಾಯಿ ಮೌಲ್ಯ ವೃದ್ಧಿ

'ಡಾಲರ್'ಎದುರು ರೂಪಾಯಿ ಮೌಲ್ಯ ವೃದ್ಧಿಯಾಗಿದೆ. ನ.5ರಂದು ದಿನದ ಆರಂಭದ ವಿದೇಶಿ ವಿನಿಮಯ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಬೆಲೆ 6 ಪೈಸೆ ಏರಿಕೆಯಾಗಿದೆ. ಹೂಡಿಕೆ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕಠಿಣ ನಿರ್ಧಾರದಿಂದ ಇತ್ತೀಚಿನ ದಿನಗಳಲ್ಲಿ ರೂಪಾಯಿ ಬೆಲೆ ಏರಿಕೆಯಾಗುತ್ತಿದೆ. ಅಂತರಾಷ್ಟ್ರೀಯ ಷೇರು...

ಕಪ್ಪುಹಣ ಹೊಂದಿರುವವರ ಹೆಸರು ಬಹಿರಂಗಗೊಳಿಸಲ್ಲ: ಸುಪ್ರೀಂ ಗೆ ಕೇಂದ್ರ ಸರ್ಕಾರ

'ಕಪ್ಪುಹಣ' ವಾಪಸ್ ತರುವ ಸಂಬಂಧ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿರುವ ಕೇಂದ್ರ ಸರ್ಕಾರ, ವಿದೇಶದಲ್ಲಿ ಕಪ್ಪುಹಣ ಹೊಂದಿರುವ ಭಾರತೀಯರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ತಿಳಿಸಿದೆ. ಕಪ್ಪುಹಣ ಹೊಂದಿರುವವರ ಬಗ್ಗೆ ಗೌಪ್ಯತೆ ಕಾಪಾಡುವುದು ಅನಿವಾರ್ಯವಾಗಿದ್ದು, ಈ ವಿಷಯದಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ...

ಭಾರತಕ್ಕೆ ಭಾರತವೇ ಮಾದರಿ: ಪ್ರಧಾನಿ ಮೋದಿ

ಶತಮಾನಗಳ ಇತಿಹಾಸವಿರುವ ಭಾರತ ಎಂದಿಗೂ ಚೀನಾ ರಾಷ್ಟ್ರವಾಗಲು ಬಯಸುವುದಿಲ್ಲ. ನಮಗೆ ನಾವೇ ಮಾದರಿ ಹೊರತು ಅನ್ಯ ರಾಷ್ಟ್ರ ಎಂದಿಗೂ ಮಾದರಿಯಾಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತಕ್ಕೆ ಎಂದೂ ಚೀನಾ...

ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಹಿಂದಿಯಲ್ಲಿ ಭಾಷಣ

ಪ್ರಧಾನಿ ನರೇಂದ್ರ ಮೋದಿ ಸೆ.27ರಂದು ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲೇ ಭಾಷಣ ಮಾಡಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ರಾಜನಥ್ ಸಿಂಗ್ ತಿಳಿಸಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲೇ ಭಾಷಣ ಮಾಡಿದ್ದರು. ನಾನೂ...

ಉಗ್ರ ಹಫೀಜ್ ಸಯೀದ್ ಗೆ ಪಾಕ್ ಕ್ಲೀನ್ ಚಿಟ್

'ಮುಂಬೈ ದಾಳಿ'ಯ ರುವಾರಿ, ಉಗ್ರ, ಹಫೀಜ್ ಸಯೀದ್ ಒಬ್ಬ ಪಾಕ್ ಪ್ರಜೆ, ಆತನ ವಿರುದ್ಧ ಯಾವುದೇ ಪ್ರಕರಣಗಳಿಲ್ಲ, ಆತ ರಾಷ್ಟ್ರದ ಯಾವುದೇ ಭಾಗದಲ್ಲಿ ಓಡಾಡಿಕೊಂಡಿರಬಹುದು ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ. ಹಫೀಜ್ ಸಯೀದ್ ಓರ್ವ ಪಾಕಿಸ್ತಾನ ಪ್ರಜೆ, ಆತ ತನ್ನ...

ಅಮೆರಿಕಾದಲ್ಲಿ ಮೋದಿ-ನವಾಜ್ ಷರೀಫ್ ದ್ವಿಪಕ್ಷೀಯ ಮಾತುಕತೆ ಸಾಧ್ಯತೆ ಕ್ಷೀಣ?

'ಅಮೆರಿಕ ಪ್ರವಾಸ' ಕೈಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪಾಕ್ ಪ್ರಧಾನಿ ನವಾಜ್ ಷರೀಫ್ ಭೇಟಿ ಮಾಡುವ ಸಾಧ್ಯತೆಗಳು ಕ್ಷೀಣಿಸುತ್ತಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸೀತ್, ಅಮೆರಿಕಾದಲ್ಲಿ ನವಾಜ್ ಷರೀಫ್-ನರೇಂದ್ರ ಮೋದಿ ಭೇಟಿಗೆ ಕಾರ್ಯಕ್ರಮ ನಿಗದಿಯಾಗಿಲ್ಲ...

ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

ಪಾಕ್ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜಮ್ಮು-ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನಾ ನೆಲೆಗಳ ಮೇಲೆ ಷೆಲ್ ದಾಳಿ ನಡೆಸಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಇದು ಮೂರನೇ ದಾಳಿಯಾಗಿದೆ. ಬಿ.ಎಸ್.ಎಫ್ ಪಡೆಗಳ...

ದ್ವಿಪಕ್ಷೀಯ ಮಾತುಕತೆ ರದ್ದು: ಪಾಕಿಸ್ತಾನಕ್ಕೆ ಮೋದಿ ಕಠಿಣ ಸಂದೇಶ

ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಶಬೀರ್ ಶಾ ಜೊತೆ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಷೀತ್ ಮಾತುಕತೆ ನಡೆಸಿದ ಬೆನ್ನಲ್ಲೇ, ಪಾಕಿಸ್ತಾನದೊಂದಿಗೆ ನಡೆಯಬೇಕಿದ್ದ ವಿದೇಶಾಂಗ ಕಾರ್ಯದರ್ಶಿ ಮಟ್ಟದ ದ್ವಿಪಕ್ಷೀಯ ಮಾತುಕತೆಗೆ ಭಾರತ ಸರ್ಕಾರ ಬ್ರೇಕ್ ಹಾಕಿದೆ. ಪಾಕಿಸ್ತಾನದ ರಾಯಭಾರಿಯೊಂದಿಗೆ ಆ.25ರಂದು ನಡೆಯಬೇಕಿದ್ದ ದ್ವಿಪಕ್ಷೀಯ ಮಾತುಕತೆಯನ್ನು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited