Untitled Document
Sign Up | Login    
Dynamic website and Portals
  
March 18, 2015

ತೆರಿಗೆ ನಿಯಮ ಅನುಸರಿಸದ 1142 ಎನ್.ಜಿ.ಒಗಳ ಪರವಾನಗಿ ರದ್ದು

ತೆರಿಗೆ ನಿಯಮ ಅನುಸರಿಸದ  1142 ಎನ್.ಜಿ.ಒಗಳ ಪರವಾನಗಿ ರದ್ದು

ನವದೆಹಲಿ : 'ವಾರ್ಷಿಕ ಆದಾಯ'ದ ಬಗ್ಗೆ ಮಾಹಿತಿ ನೀಡದೇ ವಿದೇಶಿ ದೇಣಿಗೆ ಪಡೆಯುತ್ತಿರುವ 1142 ಎನ್.ಜಿ.ಒ ಗಳು ಹಾಗೂ ಆಂಧ್ರಪ್ರದೇಶದ ಸಂಘ-ಸಂಸ್ಥೆಗಳ ಪರವಾನಗಿಯನ್ನು ಕೇಂದ್ರ ಗೃಹ ಇಲಾಖೆ ರದ್ದುಪಡಿಸಿದೆ.

ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿರುವ ಪರಿಣಾಮ, ಒಸಾಮಿಯಾ ವಿಶ್ವವಿದ್ಯಾನಿಲಯ, ಹೈದ್ರಾಬಾದ್ ವಿಶ್ವವಿದ್ಯಾನಿಲಯ, ವಿಶಾಖಪಟ್ಟಣದಲ್ಲಿರುವ ಆಂಧ್ರ ವಿಶ್ವವಿದ್ಯಾಲಯ ಸೇರಿದಂತೆ ಕ್ರಿಶ್ಚಿಯನ್ ಎನ್.ಜಿ.ಒ ಗಳು ಹಾಗೂ ಸಂಘ-ಸಂಸ್ಥೆಗಳು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ(FCRA) ಪರವಾನಗಿಯನ್ನು ಕಳೆದುಕೊಂಡಿವೆ.

ಹೈದ್ರಾಬಾದ್ ನ ಜ್ಯುಬಿಲಿ ಹಿಲ್ಸ್ ನಲ್ಲಿರುವ ಅಪೋಲೋ ಆಸ್ಪತ್ರೆಯ ಸಂಶೋಧನಾ ಹಾಗೂ ಶೈಕ್ಷಣಿಕ ಪ್ರತಿಷ್ಠಾನದ ಪರವಾನಗಿಯೂ ರದ್ದುಗೊಂಡಿದೆ. ಪರವಾನಗಿ ರದ್ದುಗೊಂಡಿರುವ ಸಂಸ್ಥೆಗಳು 2009-12ರ ವರೆಗೆ ತಮಗೆ ಸಂದಾಯವಾಗಿದ್ದ ವಿದೇಶಿ ದೇಣಿಗೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ ಎಂದು ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಈ ಬಗ್ಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡದೇ ಇರುವ ಹಿನ್ನೆಲೆಯಲ್ಲಿ ಗೃಹ ಇಲಾಖೆ, ಪರವಾನಗಿಯನ್ನು ರದ್ದುಗೊಳಿಸಿದೆ.

ವರದಿಗಳ ಪ್ರಕಾರ ಮತ್ತಷ್ಟು ಸಂಘ-ಸಂಸ್ಥೆ, ಎನ್.ಜಿ.ಒ ಗಳ ಪರವಾನಗಿಯೂ ರದ್ದುಗೊಳ್ಳುವ ಸಾಧ್ಯತೆ ಇದೆ. ವಿದೇಶಿ ದೇಣಿಗೆ ಸ್ವೀಕರಿಸುತ್ತಿರುವ ಬಗ್ಗೆ ಮಾಹಿತಿ ನೀಡಬೇಕೆಂದು 10331 ಎನ್.ಜಿ.ಒ ಗಳಿಗೆ ಕಳೆದ ಸೆಪ್ಟೆಂಬರ್ ನಲ್ಲಿ ಗೃಹ ಇಲಾಖೆ ಸೂಚನೆ ನೀಡಿತ್ತು. 30 ದಿನಗಳಲ್ಲಿ 2009-12ರ ವರೆಗೆ ಸಂದಾಯವಾಗಿದ್ದ ಹಣದ ಬಗ್ಗೆ ಮಾಹಿತಿ ನೀಡದೇ ಇದ್ದಲ್ಲಿ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಆದಾಗ್ಯೂ ಯಾವುದೇ ಎನ್.ಜಿ.ಒ ಗಳು ಮಾಹಿತಿ ಬಹಿರಂಗಪಡಿಸದ ಕಾರಣ ಎಫ್.ಸಿ.ಆರ್.ಎ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited