ಮುಂಬೈ : ಆರ್.ಎಸ್.ಎಸ್ ಸರಸಂಘ ಚಾಲಕರಾಗಿರುವ ಮೋಹನ್ ಭಾಗವತ್ ಅವರಿಗೆ ವಿವಿಐಪಿಗಳಿಗೆ ಒದಗಿಸುವ ಝಡ್ ಪ್ಲಸ್ ಭದ್ರತೆಯನ್ನು ಒದಗಿಸಲಾಗಿದೆ.
ಭಾಗವತ್ ಅವರಿಗೆ ಕೆಲ ಮೂಲಭೂತವಾದಿ ಸಂಘಟನೆಗಳಿಂದ ಜೀವ ಭಯ ಇರುವ ಕಾರಣದಿಂದ ಝಡ್ ಪ್ಲಸ್ ಭದ್ರತೆ ಒದಗಿಸಲು ಕೇಂದ್ರ ಗೃಹ ಇಲಾಖೆ ಅನುಮೋದನೆ ನೀಡಿತ್ತು.
ಸಿ.ಐ.ಎಸ್.ಎಫ್ ನ 60 ಮಂದಿ ಶಸ್ತ್ರಧಾರಿ ಕಮಾಂಡೊಗಳಿಗೆ ಮೋಹನ್ ಭಾಗವತ್ ಅವರ ರಕ್ಷಣೆಯ ಜವಾಬ್ದಾರಿ ನೀಡಲಾಗಿದೆ.
ಭಾಗವತ್ ಅವರು ನಾಗಪುರದಲ್ಲಿರುವ ಆರ್.ಎಸ್.ಎಸ್ ಪ್ರಧಾನ ಕಚೇರಿ, ಮಹಾರಾಷ್ಟ್ರ ಸೇರಿದಂತೆ ಭಾರತದಾಧ್ಯಂತ ಎಲ್ಲೆ ತೆರಳಿದರು ಸಿ.ಐ.ಎಸ್.ಎಫ್ ನ ಕಮಾಂಡೊಗಳು ರಕ್ಷಣೆ ನೀಡಲಿದ್ದಾರೆ.