Untitled Document
Sign Up | Login    
Dynamic website and Portals
  
April 10, 2016

ವಿಮಾನದಲ್ಲೇ ರಾತ್ರಿ ವಿಶ್ರಾಂತಿ: ಸಮಯ ಉಳಿಸಲು ಪ್ರಧಾನಿ ಪ್ಲ್ಯಾನ್

ಪ್ರಧಾನಿ ನರೇಂದ್ರ ಮೋದಿ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಪ್ರಧಾನಿ ಸಹಿತ ರಾಜಕೀಯ ಗಣ್ಯರು ವಿದೇಶ ಪ್ರವಾಸ ಕೈಗೊಂಡಾಗ ಐಷಾರಾಮಿ ಹೊಟೇಲ್‌ ಗ‌ಳಲ್ಲಿ ಕಾಲ ಕಳೆಯುತ್ತಾರೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಪ್ರಧಾನಿ ನರೇಂದ್ರ ಮೋದಿ, ಸಮಯ ಉಳಿಸುವ ಸಲುವಾಗಿ ರಾತ್ರಿ ವೇಳೆ ವಿಮಾನದಲ್ಲೇ ಮಲಗುವ ಸಂಪ್ರದಾಯ ಆರಂಭಿಸಿದ್ದಾರೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.

ಮೋದಿ ಇತ್ತೀಚೆಗೆ ಕೈಗೊಂಡ ವಿದೇಶ ಪ್ರವಾಸದ ವೇಳೆ ಹೊಟೇಲ್ ಗಳಲ್ಲಿ ಉಳಿಯದೆ, ವಿಮಾನದಲ್ಲೇ ಹೆಚ್ಚಾಗಿ ಪ್ರಯಾಣಿಸಿದ್ದಾರಂತೆ. ಮಾರ್ಚ್‌ 30ರಿಂದ ಎ. 2ರ ವರೆಗೆ ಅಮೆರಿಕ, ಬೆಲ್ಜಿಯಂ ಹಾಗೂ ಸೌದಿ ಅರೇಬಿಯಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೂರು ರಾತ್ರಿಗಳನ್ನು ಏರ್‌ ಇಂಡಿಯಾ ಒನ್‌ ವಿಮಾನದಲ್ಲೇ ಕಳೆದಿದ್ದಾರಂತೆ. ದಿಲ್ಲಿಯಿಂದ ಬ್ರಸೆಲ್ಸ್‌, ಬ್ರಸೆಲ್ಸ್‌ನಿಂದ ವಾಷಿಂಗ್ಟನ್‌ ಹಾಗೂ ವಾಷಿಂಗ್ಟನ್‌ ನಿಂದ ರಿಯಾದ್‌ ಗೆ ರಾತ್ರಿ ವೇಳೆ ಪ್ರಯಾಣಿಸಿದ್ದಾರೆ. ಉಳಿದಂತೆ 2 ರಾತ್ರಿಗಳನ್ನಷ್ಟೇ ವಾಷಿಂಗ್ಟನ್‌ ಹಾಗೂ ರಿಯಾದ್‌ ನ ಹೊಟೇಲ್ ನಲ್ಲಿ ಕಳೆದಿದ್ದಾರೆ.

ಮಾ. 31ರಂದು ಬ್ರಸೆಲ್ಸ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದ್ದ ಮೋದಿ, ಮಾ.30ರಂದು ರಾತ್ರಿಯೇ ನವದೆಹಲಿಯಿಂದ ಬೆಲ್ಜಿಯಂಗೆ ಪ್ರಯಾಣ ಬೆಳೆಸಿದರು. ಅಂದು ಸತತ 2 ಕಾರ್ಯ ಕ್ರಮಗಳಲ್ಲಿ ಭಾಗಿಯಾದ ಮೋದಿ, ಅದೇ ದಿನ ರಾತ್ರಿ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದರು.

ಮೋದಿ ಬಯಸಿದ್ದರೆ ಅಂದು ರಾತ್ರಿ ವಿಶ್ರಾಂತಿ ಪಡೆದು ಎ. 1ರಂದು ಭಾರತೀಯ ಸಮು ದಾಯದವರನ್ನು ಉದ್ದೇಶಿಸಿ ಮಾತನಾಡಬಹುದಿತ್ತು. ಆದರೆ ಭಾರತೀಯ ಸಮುದಾಯದವರ ಒಂದು ದಿನ ವ್ಯರ್ಥ ಮಾಡಲು ಬಯಸದ ಮೋದಿ, ಮಾ.30ರಂದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅದೇ ರಾತ್ರಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದರು. ರಾತ್ರಿಯಿಡೀ ಪ್ರಯಾಣದ ಬಳಿಕ ಅಮೆರಿಕದಲ್ಲಿ ಬಂದಿಳಿದ ಮೋದಿ ಅಲ್ಲಿ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಲ್ಲಿ ಒಂದು ದಿನ ಹೊಟೇಲ್‌ನಲ್ಲಿ ತಂಗಿದ ಮೋದಿ, ಸೌದಿ ಅರೇಬಿಯಾಕ್ಕೆ ತೆರಳುವಾಗಲೂ ರಾತ್ರಿಯಿಡೀ ವಿಮಾನದಲ್ಲೇ ಸಂಚರಿಸಿ ಅಲ್ಲೇ ನಿದ್ದೆ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮ್ಮ ಅಧಿಕಾರದ ಮೊದಲ 2 ವರ್ಷಗಳ ಅವಧಿಯಲ್ಲಿ ಮೋದಿ ಅವರು 92 ದಿನಗಳನ್ನು ವಿದೇಶದಲ್ಲಿ ಕಳೆದಿದ್ದಾರೆ. ಇನ್ನು ಯುಪಿಎ 1 ಮತ್ತು ಯುಪಿಎ 2ರಲ್ಲಿ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ 72 ದಿನಗಳನ್ನು ವಿದೇಶದಲ್ಲಿ ಕಳೆದಿದ್ದರು. ಆದರೆ ಸಿಂಗ್‌ಗೆ ಹೋಲಿಸಿದರೆ ಮೋದಿ ಭೇಟಿ ಕೊಟ್ಟ ದೇಶಗಳ ಸಂಖ್ಯೆ ಹೆಚ್ಚು ಎಂಬುದು ವಿಶೇಷ. ಸಿಂಗ್‌ ಅವರು ತನ್ನ 35 ವಿದೇಶ ಪ್ರವಾಸಗಳಲ್ಲಿ 42 ದೇಶಗಳಿಗೆ ಭೇಟಿ ಕೊಟ್ಟಿದ್ದರೆ, ಮೋದಿ 20 ವಿದೇಶ ಪ್ರವಾಸಗಳಲ್ಲೇ 40 ದೇಶಗಳಿಗೆ ಭೇಟಿ ಕೊಟ್ಟಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited