Untitled Document
Sign Up | Login    
Dynamic website and Portals
  
January 30, 2015

ವಿದೇಶಾಂಗ ಕಾರ್ಯದರ್ಶಿ ಬದಲಾವಣೆಯಲ್ಲಿ ರಾಜಕೀಯವಿಲ್ಲ: ಸುಷ್ಮಾ ಸ್ವಾರಾಜ್

ಸುಷ್ಮಾ ಸ್ವರಾಜ್ ಸುಷ್ಮಾ ಸ್ವರಾಜ್

ನವದೆಹಲಿ : ವಿದೇಶಾಂಗ ಕಾರ್ಯದರ್ಶಿ ಬದಲಾವಣೆಯಲ್ಲಿ ಯಾವುದೇ ರೀತಿಯ ರಾಜಕೀಯ ಮಾಡಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಜೈ ಶಂಕರ್ ಅವರನ್ನು ನೇಮಕ ಮಾಡುವುದಕ್ಕೂ ಮೊದಲೇ ಸುಜಾತ ಸಿಂಗ್ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದೆ. ತಾವು ಹುದ್ದೆಯಿಂದ ನಿವೃತ್ತಿ ಹೊಂದಿತ್ತಿರುವುದರಿಂದ, ಅಮೆರಿಕ ಭಾರತೀಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಜೈ ಶಂಕರ್ ಅವರನ್ನು ಭಾರತೀಯ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ವಿಚಾರವನ್ನು ಸುಜಾತ ಸಿಂಗ್ ಅವರಿಗೆ ಮೊದಲೇ ತಿಳಿಸಿದ್ದೆ ಎಂದರು.

ಯುಪಿಎ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂದಿದ್ದ ಸುಜಾತಾ ಸಿಂಗ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಅಮೆರಿಕದ ಭಾರತೀಯ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್. ಜೈಶಂಕರ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತ್ತು. ಜ.29ರಂದು ಜೈಶಂಕರ್ ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದರು. ಕೇಂದ್ರ ಸರ್ಕಾರದ ಈ ಕ್ರಮ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited