ನವದೆಹಲಿ : 'ಡಾಲರ್'ಎದುರು ರೂಪಾಯಿ ಮೌಲ್ಯ ವೃದ್ಧಿಯಾಗಿದೆ. ನ.5ರಂದು ದಿನದ ಆರಂಭದ ವಿದೇಶಿ ವಿನಿಮಯ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಬೆಲೆ 6 ಪೈಸೆ ಏರಿಕೆಯಾಗಿದೆ.
ಹೂಡಿಕೆ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕಠಿಣ ನಿರ್ಧಾರದಿಂದ ಇತ್ತೀಚಿನ ದಿನಗಳಲ್ಲಿ ರೂಪಾಯಿ ಬೆಲೆ ಏರಿಕೆಯಾಗುತ್ತಿದೆ. ಅಂತರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ರೂಪಾಯಿ ಬೆಲೆ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದು, ರುಪಾಯಿ ಬೆಲೆ ಡಾಲರ್ ಮುಂದೆ 61.34 ಆಗಿದೆ.
ಸಾಧಾರಣ ಮಟ್ಟದಲ್ಲಿ ಚುರುಕಾಗಿದ್ದ ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿಯು ಡಾಲರ್ ಎದುರು ನಡೆದ ವಹಿವಾಟಿನಲ್ಲಿ ತನ್ನ ರೂಪಾಯಿ ಮೌಲ್ಯವನ್ನು 61.34ರೂ.ಗಳಿಗೆ ಸ್ಥಿರಗೊಳಿಸಿತು.