ಸನಾ : ಯುದ್ಧಪೀಡಿತ ಯೆಮೆನ್ ನ ರಾಜಧಾನಿ ಸನಾದಿಂದ 630 ಮಂದಿಯನ್ನು ರಕ್ಷಿಸಲಾಗಿದೆ. ಅವರನ್ನು ಕೊನೆಯ ವಿಮಾನದ ಮೂಲಕ ಭಾರತಕ್ಕೆ ಕರೆತರಲಾಗಿದೆ.
ಇದರೊಂದಿಗೆ ಯೆಮೆನ್ ನಲ್ಲಿ ವೈಮಾನಿಕ ರಕ್ಷಣಾ ಕಾರ್ಯಚರಣೆಯನ್ನು ಅಂತ್ಯಗೊಳಿಸಲಾಗಿದೆ. ಇದುವರೆಗೆ ಯೆಮೆನ್ ನಲ್ಲಿ 5600 ಜನರನ್ನು ರಾಹತ್ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ.
ಅವರಲ್ಲಿ 4640 ಭಾರತೀಯರು ಮತ್ತು 960 ಮಂದಿ ವಿದೇಶಿಯರು ಸೇರಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಕಾರ್ಯಾಚರಣೆಯಲ್ಲಿ ಬುಧವಾರ 6 ದಿನದ ಮಗುವನ್ನು ರಕ್ಷಿಸಲಾಗಿದ್ದು, ರಕ್ಷಿಸಲ್ಪಟ್ಟವರ ಪೈಕಿ ಈ ಮಗು ಅತಿ ಕಿರಿಯದ್ದೆನಿಸಿಕೊಂಡಿದೆ.