ನವದೆಹಲಿ : ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ್ ಪಡೆಯುವ ವಿಧಾನವನ್ನು ಇನ್ನಷ್ಟು ಸುಲಭವಾಗಿಸಿದೆ. ಅರ್ಜಿಯ ಜೊತೆ ಆಧಾರ್, ಮತದಾರನ ಗುರುತಿನ ಚೀಟಿ ಮತ್ತು ಪಾನ್ಕಾರ್ಡ್ ಜೊತೆ ನನ್ನ ವಿರುದ್ಧ ಯಾವುದೇ ಕ್ರಿಮಿನಲ್ ಕೇಸುಗಳು ಬಾಕಿ ಇಲ್ಲ ಎಂಬ ಅಫಿಡವಿಟ್ ಹೇಳಿಕೆ ನೀಡಿದರೆ ಒಂದು ವಾರದಲ್ಲಿ ಪಾಸ್ ಪೋರ್ಟ್ ನಿಮ್ಮ ಮನೆ ತಲುಪಲಿದೆ.
ಇಲ್ಲಿಯವರೆಗೆ ಪೊಲೀಸ್ ವೆರಿಫಿಕೇಶನ್ ಬಹಳ ದಿನ ತೆಗೆದುಕೊಳ್ಲುತಿತ್ತು. ಇನ್ನು ಮುಂದೆ, ಪಾಸ್ ಪೋರ್ಟ್ ವಿತರಿಸಿದ ನಂತರ ಪೊಲೀಸ್ ವೆರಿಫಿಕೇಶನ್ ನಡೆಯಲಿದೆ. ಆಲ್ ಲೈನ್ ನಲ್ಲಿ ಆಧಾರ್ ನಂಬರ್ ನ ಆಧಾರದ ಮೇಲೆ ಪ್ರಕ್ರಿಯೆ ನಡೆಯಲಿದೆ.
ಪೊಲೀಸ್ ವೆರಿಫಿಕೇಶನ್ ನಲ್ಲಿ ಬಂದ ವರದಿ ಪ್ರತಿಕೂಲವಾಗಿದ್ದರೆ ಅಂತಹ ಪಾಸ್ ಪೋರ್ಟ್ ಅನ್ನು ಹಿಂಪಡೆಯಲಾಗುವುದು ಎಂದು ಸಚಿವಾಲಯ ತಿಳಿಸಿದೆ.