Untitled Document
Sign Up | Login    
Dynamic website and Portals
  
December 26, 2015

ಪ್ರಧಾನಿ ಮೋದಿ ಲಾಹೋರ್ ಭೇಟಿಃ ಭಾರತ-ಪಾಕ್ ವಿದೇಶಾಂಗ ಕಾರ್ಯದರ್ಶಿ ಭೇಟಿ ನಿಗದಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್

ನವದೆಹಲಿ : ಭಾರತ-ಪಾಕಿಸ್ತಾನ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳು ಜನವರಿ 15 ಕ್ಕೆ ಇಸ್ಲಮಾಬಾದ್ ನಲ್ಲಿ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಅಧಿಕೃತ ಘೋಷಣೆಯಾಗಬೇಕಿದೆಯಷ್ಟೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಕಸ್ಮಿಕ ಪಾಕಿಸ್ತಾನಭೇಟಿಯ ನಂತರ ಈ ಸುದ್ದಿ ಬಂದಿದೆ. ಶುಕ್ರವಾರ ಸಂಜೆ ಕಾಬೂಲ್ ನಿಂದ ದೆಹಲಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಗೆ ಜನ್ಮದಿನದ ಶುಭಾಷಯ ಕೋರಲಿ ಪ್ರಧಾನಿ ಮೋದಿ ಅವರು ಲಾಹೋರ್ ಗೆ ಭೇಟಿ ನೀಡಿ ಇಡೀ ವಿಶ್ವಕ್ಕೆ ಅಚ್ಚರಿ ಮೂಡಿಸಿದ್ದರು. ಇದೊಂದು ಐತಿಹಾಸಿಕ ಭೇಟಿಯಾಗಿದೆ.

ಖುದ್ದು ನವಾಜ್ ಶರೀಫ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಲಾಹೋರ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಅಲ್ಲಿಂದ ನವಾಜ್ ಷರೀಫ್ ಅವರ ಪೂರ್ವಿಕರ ಮನೆಗೆ ಹೆಲಿಕಾಪ್ಟರ್ ನಲ್ಲಿ ತೆರಳಿ ಮಾತುಕತೆ ನಡೆಸಿದರು. ಮಾತುಕತೆಯ ನಿಖರ ವಿವರಗಳನ್ನು ಬಹಿರಂಗಪಡಿಸಿಲ್ಲ. ಆದರೆ ಶಾಂತಿ ಪ್ರಕ್ರಿಯೆಯನ್ನು ಮುಂದುವರಿಸಲು ಎರಡೂ ದೇಶಗಳ ಪ್ರಧಾನಮಂತ್ರಿಗಳು ಈ ವೇಳೆ ಬದ್ಧತೆ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

 

English Summary : India Pakistan Foriegn Secretaries are likely to meet on January 15 in Islamabad. This news comes after Prime Minister Narendra Modi's hostoric visit to Lahore on Friday.

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited