Untitled Document
Sign Up | Login    
Dynamic website and Portals
  
November 11, 2014

ಆಸ್ಟ್ರೇಲಿಯಾದಲ್ಲಿ ಮೋದಿ ಎಕ್ಸ್ ಪ್ರೆಸ್ ರೈಲು

ಪ್ರಧಾನ ಮಂತ್ರಿ ನರೇಂದ್ರ ಮೊದಿ ಪ್ರಧಾನ ಮಂತ್ರಿ ನರೇಂದ್ರ ಮೊದಿ

ಮೆಲ್ಬರ್ನ್ : ಆಸ್ಟ್ರೇಲಿಯಾದಲ್ಲಿ ಇದೀಗ ಪ್ರಧಾನಿ ನರೇಂದ್ರ ಮೋದಿ ಫೀವರ್ ಶುರುವಾಗಿದೆ. ಮೋದಿ ಮೋಡಿಗೆ ಒಳಗಾಗಿರುವ ಆಸ್ಟ್ರೇಲಿಯಾದ ಮಂದಿ ಅವರನ್ನು ನೋಡಲು ತೆರಳಲು ವಿಶೇಷ ರೈಲೊಂದನ್ನು ಏರಲಿದ್ದಾರೆ. ಈ ರೈಲಿಗೆ ಮೋದಿ ಎಕ್ಸ್ ಪ್ರೆಸ್ ಎಂದು ಹೆಸರಿಡಲಾಗಿದೆ.

ನ.11ರಿಂದ 10 ದಿನಗಳ ಕಾಲ ಸುದೀರ್ಘ‌ ವಿದೇಶಿ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಮ್ಯಾನ್ಮಾರ್‌, ಆಸ್ಟ್ರೇಲಿಯಾ, ಫಿಜಿ ದೇಶಗಳಿಗೆ ೇಟಿ ನೀಡಲಿದ್ದಾರೆ. ನ.16ರಿಂದ 18ರ ತನಕ ಆಸ್ಟ್ರೇಲಿಯಾಕ್ಕೆ ನೀಡುವ ೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದ್ದು, 28 ವರ್ಷಗಳ ನಂತರ ಾರತದ ಪ್ರಧಾನಿಯೊಬ್ಬರು ಆಸ್ಟ್ರೇಲಿಯಾಕ್ಕೆ ೇಟಿ ನೀಡುತ್ತಿದ್ದಾರೆ. ಅಮೆರಿಕಾದ ಮ್ಯಾಡಿಸನ್‌ ಸ್ಕ್ವೇರ್‌ನಲ್ಲಿ ಾಷಣ ಮಾಡಿದ ಮಾದರಿಯಲ್ಲಿ ನ.17ರಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಅನಿವಾಸಿ ಾರತೀಯರನ್ನು ಉದ್ದೇಶಿಸಿ ಮೋದಿ ಾಷಣ ಮಾಡಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳಾಗಿದ್ದು, ಮೋದಿ ಅವರ ಕಾರ್ಯಕ್ರಮದಲ್ಲಿ ಾಗವಹಿಸಲೆಂದು ಅವರ ಅಿಮಾನಿಗಳು '4' ಬೋಗಿಗಳುಳ್ಳ ರೈಲಿನಲ್ಲಿ ತೆರಳಲಿದ್ದಾರೆ. ಇದಕ್ಕೆ ಅಿಮಾನಿಗಳು ಮೋದಿ ಎಕ್ಸ್‌ ಪ್ರೆಸ್‌ ಎಂದು ನಾಮಕಾರಣ ಮಾಡಿದ್ದಾರೆ.

220 ಮಂದಿ ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದಾಗಿದ್ದು, ನ.16ರಂದು ಮೆಲ್ಬರ್ನ್ನ ದಕ್ಷಿಣ ರೈಲ್ವೇ ನಿಲ್ದಾಣದಿಂದ ತನ್ನ ಪ್ರಯಾಣ ಆರಂಿಸಲಿದೆ. ಸುಮಾರು 870 ಕಿ.ಮೀ. ದೂರವನ್ನು ಕ್ರಮಿಸಿ ಅಂದು ರಾತ್ರಿ 8.30ರ ಸುಮಾರಿಗೆ ಸಿಡ್ನಿ ನಿಲ್ದಾಣವನ್ನು ತಲುಪಲಿದೆ ಎಂದು ತಿಳಿದು ಬಂದಿದೆ.

ಮೋದಿ ಎಕ್ಸ್‌ ಪ್ರೆಸ್‌ ನ 4 ಬೋಗಿಗಳನ್ನು ತ್ರಿರಂಗದ ಬಲೂನ್‌ಗಳಿಂದ ಸಿಂಗಾರಗೊಳಿಸಲಿದ್ದು, ಪ್ರಯಾಣದ ವೇಳೆ ಎಲ್ಲರಿಗೂ ಗುಜರಾತ್‌ನ ವಿಶೇಷ ಖಾದ್ಯಗಳನ್ನು ಉಣಬಡಿಸಲು ಮೋದಿ ಅಿಮಾನಿಗಳು ಯೋಜನೆ ರೂಪಿಸಿದ್ದಾರೆ. ಮೋದಿ ಅವರು ಸಾಮಾನ್ಯ ಕಾರ್ಯಕರ್ತರಾಗಿದ್ದ ಹೆಚ್ಚಾಗಿ ರೈಲಿನಲ್ಲಿ ಓಡಾಟ ನಡೆಸುತ್ತಿದ್ದರು. ಇದರಿಂದ ಪ್ರೇರಣೆಗೊಂಡು ಈ ಯೋಜನೆ ರೂಪಿಸಲಾಗಿದ್ದು, ಒಟ್ಟಾರೆ ಇಡೀ ಪ್ರಯಾಣವನ್ನು ನನೆಪಿನಲ್ಲಿ ಉಳಿಯುವಂತೆ ಮಾಡುವುದೇ ನಮ್ಮ ಉದ್ದೇಶ ಎಂದಿದ್ದಾರೆ.

ಮೆರಿಕದ ಮ್ಯಾಡಿಸನ್‌ ಸ್ಕ್ವೇರ್‌ ನಲ್ಲಿ ಾರತೀಯರನ್ನು ಉದ್ದೇಶಿಸಿ ಮಾತನಾಡಿದ ಮಾದರಿಯಲ್ಲೇ, ಆಸ್ಟ್ರೇಲಿಯಾದ ಕ್ರೀಡಾಂಗಣವೊಂದರಲ್ಲಿ ಾರತೀ ಯರನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಮ್ಯಾಡಿಸನ್‌ ಸ್ಕ್ವೇರ್‌ನಲ್ಲಿ 18000 ಜನ ಅಿಮಾನಿಗಳು ನೆರೆದಿದ್ದರೆ, ಸಿಡ್ನಿ ಕ್ರೀಡಾಂಗಣದಲ್ಲಿ 27000ಕ್ಕೂ ಹೆಚ್ಚು ಅಿಮಾನಿಗಳು ಮೋದಿ ಅವರ ಾಷಣವನ್ನು ಆಲಿಸಲಿದ್ದಾರೆ. ಕಾರ್ಯಕ್ರಮ ಆಯೋಜನೆಗಾಗಿ ಆಸ್ಟ್ರೇಲಿಯಾದಲ್ಲಿನ ಾರತೀಯರು ಸಂಘವೊಂದನ್ನು ನೋಂದಣಿ ಮಾಡಿಸಿಕೊಂಡು ಸಿದ್ಧತೆ ನಡೆಸಿದ್ದಾರೆ.

ಜಿ-20 ಶೃಂಗಸೆ ಬಳಿಕ ಮೋದಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಉಯ ದೇಶಗಳು 4 ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಪ್ರಮುಖವಾಗಿ ೇಟಿಯ ವೇಳೆ ಐತಿಹಾಸಿಕ ಾರತ- ಆಸ್ಟ್ರೇಲಿಯಾ ಅಣು ಒಪ್ಪಂದಕ್ಕೆ ಚಾಲನೆ ದೊರೆಯುವ ನೀರೀಕ್ಷೆ ಇದೆ. ಾರತಕ್ಕೆ ಯುರೇನಿಯಂ ಪೂರೈಕೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೋಟ್‌ ಮಾತುಕತೆ ನಡೆಸಲಿದ್ದಾರೆ. ಟೋನಿ ಅಬೋಟ್‌ ಸೆ.6ರಂದು ಾರತಕ್ಕೆ ೇಟಿ ನೀಡಿದ್ದ ಸಂದರ್ದಲ್ಲಿ ಾರತಕ್ಕೆ ಯುರೇನಿಯಂ ಪೂರೈಕೆಯ ಕರಿತು ಸಮ್ಮತಿ ಸೂಚಿಸಿದ್ದರು. ಆಸ್ಟ್ರೇಲಿಯಾ ಜಗತ್ತಿನ ಶೇ. 40ರಷ್ಟು ಯುರೇನಿಯಂ ನಿಕ್ಷೇಪವನ್ನು ಹೊಂದಿದ್ದು, ಪ್ರತಿವರ್ಷ 7,000 ಟನ್‌ಗಳಷ್ಟು ಯುರೇನಿಯಂ ಉತ್ಪಾದಿಸುತ್ತಿದೆ.

ಆಸಿಯಾನ್‌, ಪೂರ್ವ ಏಷ್ಯಾ, ಜಿ-20 ಶೃಂಗಸೆಗಳಲ್ಲಿ ಾಗವಹಿಸುವ ಅವರು ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಶೃಂಗಸೆಯಲ್ಲಿ ಾರತದಲ್ಲಿ ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳನ್ನು ತೆರದಿಡಲಿರುವ ಅವರು, ಜಾಗತಿಕ ಆರ್ಥಿಕತೆಯಲ್ಲಿ ನೂತನ ಹೆಜ್ಜೆ ಗುರುತು ಮೂಡಿಸುವ ಉತ್ಸಾಹದಲ್ಲಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited