Untitled Document
Sign Up | Login    
Dynamic website and Portals
  
October 13, 2015

ಇಂಗ್ಲೆಂಡ್ ನಲ್ಲಿ 'ಮೋದಿ ಎಕ್ಸ್ ಪ್ರೆಸ್' ಬಸ್ ಗೆ ಚಾಲನೆ

ಮೋದಿ ಎಕ್ಸ್ ಪ್ರೆಸ್ ಬಸ್ ಮೋದಿ ಎಕ್ಸ್ ಪ್ರೆಸ್ ಬಸ್

ಲಂಡನ್ : ಇಂಗ್ಲೆಂಡ್ ನಲ್ಲಿ ವಾಸವಾಗಿರುವ ಅನಿವಾಸಿ ಭಾರತೀಯರು ಮುಂಬರುವ ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನಲೆಯಲ್ಲಿ 'ಮೋದಿ ಎಕ್ಸ್ ಪ್ರೆಸ್' ಬಸ್ ಗೆ ಚಾಲನೆ ನೀಡಿದ್ದಾರೆ. ಲಂಡನ್ ನಗರದ ಎಲ್ಲಾ ಪ್ರಮುಖ ಸ್ಥಳಗಳಿಗೆ ಈ ಬಸ್ ಮುಂದಿನ ಒಂದು ತಿಂಗಳು ಸಂಚರಿಸಲಿದೆ.

ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಂಗ್ಲೆಂಡ್ ಪ್ರವಾಸ ಕೈಗೊೞಲಿದ್ದು ಅದನ್ನು ಐತಿಹಾಸಿಕ ಭೇಟಿಯನ್ನಾಗಿ ಮಾಡಲು ಅನಿವಾಸಿ ಭಾರತೀಯರು ಸಾಕಷ್ಟು ತಯಾರಿಗಳನ್ನು ಮಾಡುತ್ತಿದ್ದಾರೆ. ಸುಮಾರು 400 ಅನಿವಾಸಿ ಭಾರತೀಯರ ಸಂಘಟನೆಗಳು ಈ ಪ್ರಯತ್ನದಲ್ಲಿ ತೊಡಗಿವೆ. ಪ್ರಧಾನಿ ಭೇಟಿಯ ಮಹತ್ವವನ್ನು ಬಿಂಬಿಸಲು 'ಮೋದಿ ಎಕ್ಸ್ ಪ್ರೆಸ್' ಬಸ್ ಸಂಚಾರವನ್ನು ಆರಂಭಿಸಲಾಗಿದೆ.

ಭಾನುವಾರ ಆರಂಭಗೊಂಡ ಬಸ್ ಮೊತ್ತ ಮೊದಲು 'ಲಿಟ್ಲ್ ಇಂಡಿಯಾ' ಎಂದು ಕರೆಸಿಕೊಳ್ಳುವ ಈಲಿಂಗ್ ರಸ್ತೆಯಲ್ಲಿರುವ ವೆಂಬ್ಲೆಯನ್ನು ತಲುಪಿತು. ಅಲ್ಲಿಂದ ಮುಂದೆ ಟ್ರಫಾಲ್ಗರ್ ಸ್ಕ್ಯೇರ್ ಗೆ ಪ್ರಯಾಣಿಸಲಿದೆ. 'ಯುಕೆ ವೆಲ್ ಕಂಸ್ ಮೋದಿ' ಸಂಘಟನಾ ಸಮಿತಿಯ ಸದಸ್ಯ ಮಯೂರಿ ಪಾರ್ಮರ್, "ಭಾರತದಲ್ಲಿ ನಡೆದ 'ಚಾಯ್ ಪೆ ಚರ್ಚಾ ಮಾದರಿಯಲ್ಲಿ ನಾವು ಇಂಗ್ಲೆಂಡ್ ನಲ್ಲಿ 'ಬಸ್ ಪೆ ಚರ್ಚಾ' ನಡೆಸಲಿದ್ದೇವೆ" ಎಂದು ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನವೆಂಬರ್ 13ರಂದು ಪ್ರಸಿದ್ಧ ವೆಂಬ್ಲೇ ಕ್ರೀಡಾಂಗಣದಲ್ಲಿ ಪ್ರಧಾನಿ ಮೋದಿಯವರಿಗೆ ಅಭೂತಪೂರ್ವ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಭವ್ಯತೆ ಒಲಿಂಪಿಕ್ಸ್ ಮಾದರಿಯಲ್ಲಿ ಇರುತ್ತದೆ ಎಂದು ಬಣ್ಣಿಸಲಾಗಿದೆ. ಮೋದಿ ಸ್ವಾಗತ ಕಾರ್ಯಕ್ರಮಕ್ಕೆ 400ಕ್ಕೂ ಮಿಕ್ಕಿ ಭಾರತೀಯ ಸಮುದಾಯ ಸಂಘಟನೆಗಳು ಒಟ್ಟಾಗಿ ಕೆಲಸಮಾಡುತ್ತಿವೆ.

ಇತ್ತೀಚೆಗೆ ದುಬೈಯಲ್ಲಿ ನಡೆದ ಸ್ವಾಗತ ಕಾರ್ಯಕ್ರಮದಲ್ಲಿ 40,000ಕ್ಕೂ ಮೀರಿ ಅನಿವಾಸಿ ಭಾರತೀಯರು ಪಾಲ್ಗೊಂಡಿದ್ದು ಅದೊಂದು ದಾಖಲೆಯಾಗಿತ್ತು. ಲಂಡನ್ ನಲ್ಲಿ ಈ ಸಂಖ್ಯೆ 60,000 ಮೀರಿಸುವ ನಿರೀಕ್ಷೆಯಿದ್ದು ಈಗಾಗಲೇ ಕಾರ್ಯಕ್ರಮಕ್ಕೆ ನೋಂದಾಯಿಸಿದವರ ಸಂಖ್ಯೆ 50ಸಾವಿರ ದಾಟಿದೆ ಎನ್ನಲಾಗಿದೆ.

ದೇಶದ ಮೂಲೆ ಮೂಲೆಗಳಿಂದ 250ಕ್ಕೂ ಹೆಚ್ಚಿನ ನಗರಗಳಲ್ಲಿ ವಾಸಿಸುವ ಭಾರತೀಯ ಮೂಲದ ಅಭಿಮಾನಿಗಳು ಈಗಾಗಲೇ ಮೋದಿ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಲು ತಮ್ಮ ಹೆಸರುಗಳನ್ನು ನೋಂದಾಯಿದ್ದಾರೆ. ಪ್ರವೇಶ ಅಹ್ವಾನ ಪತ್ರಗಳನ್ನು ಮುಂದಿನ ಕೆಲವು ದಿನಗಳಲ್ಲಿ ರವಾನಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಇಂಗ್ಲೆಂಡ್ ದೇಶದಲ್ಲಿ 15 ಲಕ್ಷದಷ್ಟು ಅನಿವಾಸಿ ಭಾರತೀಯರು ವಾಸವಾಗಿದ್ದು ಅದರಲ್ಲಿ ಸಾಕಷ್ಟು ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಾತುರರಾಗಿದ್ದಾರೆ. ಸ್ವಾಗತ ಕಾರ್ಯಕ್ರಮದಲ್ಲಿ ವಿಶ್ವದ ಎಲ್ಲೆಡೆಯಿಂದ ಕರೆಸಲಾದ ಕಲಾವಿದರು ಪ್ರದರ್ಶನ ನೀಡದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಅತ್ಯದ್ಭುತ ರೀತಿಯಲ್ಲಿ ಪಟಾಕಿ ಸಿಡಿಸಲಾಗುತ್ತದೆ.

 

 

Related News

You have an error in your SQL syntax; check the manual that corresponds to your MariaDB server version for the right syntax to use near 'ಮೋದಿ ಎಕ್ಸ್ ಪ್ರೆಸ್'%' and id!='18936' and news_s...' at line 1