ನವದೆಹಲಿ : 2015, ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಜರ್ಮನ್ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳಿವೆ.
ಸಧ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಮೋದಿ ಅವರನ್ನು ಬ್ರಿಸ್ಬೇನ್ನಲ್ಲಿ ನಡೆದ ಜಿ-20 ಶೃಂಗ ಸಭೆಯಲ್ಲಿ ಭೇಟಿಯಾದ ಜರ್ಮನ್ನ ಚಾನ್ಸ್ಲರ್ ಎಂಜೆಲಾ ಮಾರ್ಕೆಲ್ ಅವರು ಜರ್ಮನಿಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ.
ಮಾರ್ಕೆಲ್ ಅವರು ಮೋದಿ ಅವರ ಬಳಿ ಭಾರತದೊಂದಿಗಿನ ನಮ್ಮ ಸಂಬಂಧಗಳು ಗಾಢವಾಗುತ್ತಿದ್ದು,ನಿಮ್ಮ ಭೇಟಿಗಾಗಿ ಎದುರು ನೋಡುತ್ತಿದ್ದೇವೆ ಎಂದಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಸಯ್ಯದ್ ಅಕ್ಮರುದ್ದೀನ್ ಟ್ವೀಟ್ ಮಾಡಿದ್ದಾರೆ.
ಮೋದಿ ಸಹ ಮಾರ್ಕೆಲ್ ಅವರ ಆಹ್ವಾನ ಸ್ವೀಕರಿಸಿದ್ದು, ಜರ್ಮನ್ಗೆ ಭೇಟಿ ನೀಡುವ ಒಲವು ಹೊಂದಿದ್ದಾರೆ ಎಂದು ತಿಳಿದುಬಂದಿದೆ.