ಮ್ಯೂನಿಚ್ : ಜರ್ಮನಿಯ ಮ್ಯೂನಿಚ್ ನಗರದ ಮಾಲ್ ವೊಂದರ ಮೇಲೆ ನಾಗರಿಕರನ್ನು ಗುರಿಯಾಗಿಸಿಕೊಂಡು ಬಂದೂಕುದಾರಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 9 ಮಂದಿ ಸಾರ್ವಜನಿಕರು ಮೃತಪಟ್ಟಿದ್ದಾರೆ. ಬಂದೂಕುದಾರಿ ಸಹ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸಿಟಿ ಒಲಿಂಪಿಕ್ ಪಾರ್ಕ್ ಗೆ ಸ್ಥಳೀಯ ಕಾಲಮಾನ ಸಂಜೆ 5.50 ಸುಮಾರಿಗೆ ನುಗ್ಗಿದ ಶಸ್ತ್ರಸಜ್ಜಿತ ಶಂಕಿತ ಉಗ್ರನೊಬ್ಬ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾನೆ ಪರಿಣಾಮ 9 ಮಂದಿ ಮೃತಪಟ್ಟಿದ್ದಾರೆ. ಇನ್ನು ಪೊಲೀಸರು ಸೇರಿ 10ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಘಟನೆ ನಂತರ ಒಲಿಂಪಿಯನ್ ಮಾಲ್ ರಸ್ತೆ ಬಂದ್ ಮಾಡಿರುವ ಪೊಲೀಸರು ಇಡೀ ಮಾಲ್ ಸುತ್ತುವರಿದಿದ್ದಾರೆ. ಮತ್ತೊಂದೆಡೆ ಒಲಿಂಪಿಕ್ ಮಾಲ್ ಸಮೀಪದ ಮೆಟ್ರೋ ರೈಲು ನಿಲ್ದಾಣದಲ್ಲೂ ಗುಂಡಿನ ದಾಳಿ ನಡೆದಿದ್ದು, ಅಲ್ಲೂ ಉಗ್ರರು ಅಡಗಿ ಕುಳಿತ್ತಿದ್ದಾರೆ ಎನ್ನಲಾಗುತ್ತಿದೆ.