Untitled Document
Sign Up | Login    
Dynamic website and Portals
  
June 17, 2015

ಬಿಹಾರ ಚುನಾವಣೆಗೂ ಮುನ್ನ ಸೈನಿಕರ ಪಿಂಚಣಿ ಯೋಜನೆ ಜಾರಿ ಸಾಧ್ಯತೆ

ನವದೆಹಲಿ : ನಿವೃತ್ತ ಸೇನಾನಿಗಳ ಬಹುವರ್ಷಗಳ ಬೇಡಿಕೆಯಾದ ಒನ್ ರಾಂಕ್, ಒನ್ ಪೆನ್ಶನ್ ಯೋಜನೆ ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಜಾರಿಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಯೋಜನೆ ಜಾರಿ ಕುರಿತು ಕೇಂದ್ರ ಸರ್ಕಾರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆ ಜಾರಿಗಾಗಿ ನಿವೃತ್ತ ಸೈನಿಕರನ್ನು ಪ್ರತ್ಯೇಕ ವಿಭಾಗದಲ್ಲಿ ಇರಿಸಬೇಕಾದ ಅಗತ್ಯವಿದೆ. ಇಲ್ಲದೇ ಹೋದಲ್ಲಿ ಇತರೆ ಸರ್ಕಾರಿ ಅಧಿಕಾರಿಗಳು ಕೂಡಾ ಇದೇ ರೀತಿಯ ಬೇಡಿಕೆಯನ್ನು ಮುಂದಿಡುವ ಸಾಧ್ಯತೆ ಇದೆ. ಹೀಗಾಗಿ ಇಂಥ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. 2015ರ ಸೆಪ್ಟೆಂಬರ್‌/ ಅಕ್ಟೋಬರ್‌ ತಿಂಗಳಲ್ಲಿ ನಡೆಯಲಿರುವ ಬಿಹಾರ ಚುನಾವಣೆಗೂ ಮುನ್ನ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆ ಜಾರಿ ಕುರಿತು ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಈ ಯೋಜನೆ ಅನ್ವಯ, ಯಾವುದೇ ವರ್ಷದಲ್ಲಿ ನಿವೃತ್ತಿಯಾದ ಯೋಧನಿಗೆ, ಹಾಲಿ ನಿವೃತ್ತಿಯಾಗುವ ಯೋಧನಿಗೆ ಸಿಗುವಷ್ಟೇ ಪಿಂಚಣಿ ಸಿಗುತ್ತದೆ. ಅಂದರೆ 1995ರಲ್ಲಿ ನಿವೃತ್ತಿಯಾದ ಯೋಧರಿಗೂ, 2015ರಲ್ಲಿ ನಿವೃತ್ತಿಯಾಗುವ ಯೋಧರಿಗೆ ಸಿಕ್ಕಷ್ಟೇ ಪಿಂಚಣಿ ಸಿಗುತ್ತದೆ. ಈ ಯೋಜನೆ ಜಾರಿಯಾದರೆ 22 ಲಕ್ಷ ನಿವೃತ್ತ ಸೇನಾ ಸಿಬ್ಬಂದಿ ಮತ್ತು 6 ಲಕ್ಷ ಯುದ್ಧ ವಿಧವೆಯರಿಗೆ ಭಾರೀ ಲಾಭವಾಗಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited