ಮುಂಬೈ : 'ಅಮೆರಿಕಾ'ದ ಡಾಲರ್ ಎದುರು ರೂಪಾಯಿ ಮೌಲ್ಯ 71ಪೈಸೆ ಕುಸಿದಿದೆ.
ಮೇ.7ರಂದು ಪ್ರಾರಂಭವಾದ ವಹಿವಾಟಿನಲ್ಲಿ ಪ್ರತಿ ಡಾಲರ್ ಗೆ 63.75ರಷ್ಟಿದ್ದ ರೂಪಾಯಿ ಮೌಲ್ಯ ಮಧ್ಯಾಹ್ನದ ವೇಳೆಗೆ 64ಕ್ಕೆ ಕುಸಿದಿದೆ. ಸೆಪ್ಟೆಂಬರ್ ನಂತರ ಇದೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ಕುಸಿದಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವುದು ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿಯದಂತೆ ತಡೆಯೊಡ್ಡಿದೆ ಎಂದು ಫಾರೆಕ್ಸ್(ವಿದೇಶೀ ವಿನಿಮಯ)ಡೀಲರ್ ಗಳು ಅಭಿಪ್ರಾಯಪಟ್ಟಿದ್ದಾರೆ.
ಕನಿಷ್ಠ ಪರ್ಯಾಯ ತೆರಿಗೆ ಹಾಗೂ ಸಂಸತ್ ನಲ್ಲಿ ತೆರಿಗೆ ಸುಧಾರಣೆ ಮಸೂದೆ ಅಂಗೀಕಾರದ ಬಗ್ಗೆ ದೀರ್ಘಾವಧಿಯಿಂದಲೂ ಇದ್ದ ಆತಂಕವೂ ಸಹ ಇಂದಿನ ರೂಪಾಯಿ ಮೌಲ್ಯ ಕುಸಿಯಲು ಕಾರಣವಾಗಿರುವ ಅಂಶಗಳಲ್ಲಿ ಒಂದು ಎಂದು ಆರ್ಥಿಕ ತಜ್ನರು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಬಿ.ಎಸ್.ಇ ಸೆನ್ಸೆಕ್ಸ್ ಅಂಕಗಳೂ ಸಹ ಶೇ.0.71ರಷ್ಟು ಕುಸಿದಿದೆ.