Untitled Document
Sign Up | Login    
Dynamic website and Portals
  
July 7, 2015

ಭಾಷೆ ವಿದೇಶೀ ನೆಲದಲ್ಲಿ ಅಪರಿಚಿತರನ್ನೂ ಒಂದುಗೂಡಿಸುತ್ತದೆ: ಪ್ರಧಾನಿ ಮೋದಿ

ಹಿಂದಿ ಭಾಷೆ ಕಲಿಯುವ ವಿದ್ಯಾರ್ಥಿಗಳನ್ನುಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಹಿಂದಿ ಭಾಷೆ ಕಲಿಯುವ ವಿದ್ಯಾರ್ಥಿಗಳನ್ನುಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ

ತಾಷ್ಕೆಂಟ್ : ಭಾಷೆ ಪರದೇಶಗಳಲ್ಲಿ ಅಪರಿಚತರನ್ನೂ ಒಂದುಗೂಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ರಷ್ಯಾ ಹಾಗೂ 5 ಮಧ್ಯ ಏಷಿಯಾ ದೇಶಗಳ ಪ್ರವಾಸದಲ್ಲಿರುವ ಮೋದಿ ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್ ನಲ್ಲಿ ಜು.7ರಂದು ಅನಿವಾಸಿ ಭಾರತೀಯರನ್ನು, ಹಿಂದಿ ಭಾಷೆ ಕಲಿಯುವ ವಿದ್ಯಾರ್ಥಿಗಳನ್ನು ಹಾಗೂ ಭಾರತ ಭೂಖಂಡ ವಿಶೇಷಜ್ನ (ಇಂಡೋಲಾಜಿಸ್ಟ್) ರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಮಾತನ್ನು ಹೇಳಿದರು.

'ನಾನು ನಿನ್ನೆ ನಿಮ್ಮ ದೇಶದ ಅಧ್ಯಕ್ಷರನ್ನು ಮತ್ತು ಪ್ರಧಾನಿಯವರನ್ನು ಭೇಟಿ ಮಾಡಿದೆ. ಆ ಸಂದರ್ಭದಲ್ಲಿ ಹಿನ್ನಲೆಯಲ್ಲಿ ಭಾರತೀಯ ಸಂಗೀತ ಕೇಳಿ ಬರುತ್ತಿತ್ತು. ಆಶ್ಚರ್ಯವೆಂದರೆ ಇಬ್ಬರೂ ಗಣ್ಯರಿಗೂ ಅದು ತಿಳಿದಿತ್ತು' ಎಂದು ಪ್ರಧಾನಿ ಮೋದಿ ಸಭೆಗೆ ತಿಳಿಸಿದರು.

'ಮನುಷ್ಯನ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಭಾಷೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾನು ನಂಬುತ್ತೇನೆ. ಒಂದು ಸಾಮಾನ್ಯ ಭಾಷೆ ವಿದೇಶೀ ನೆಲದಲ್ಲಿ ಭೇಟಿಯಾಗುವ ಎಲ್ಲಾ ಜನರನ್ನೂ ಒಂದುಗೂಡಿಸುತ್ತದೆ' ಎಂದು ಮೋದಿ ಅಭಿಪ್ರಾಯಪಟ್ಟರು.

ಭಾರತದ ವಿದೇಶಾಂಗ ಸಚಿವಾಲಯವಕ್ತಾರ ವಿಕಾಸ್ ಸ್ವರೂಪ್ ಅವರು ಟ್ವಿಟ್ಟರ್ ನಲ್ಲಿ ಮಾಹಿತಿಗಳನ್ನು ಹಂಚಿಕೊಂಡರು.

8 ದಿನಗಳ ಮಧ್ಯ ಏಷಿಯಾ ದೇಶಗಳ ಹಾಗೂ ರಷ್ಯಾ ಭೇಟಿಯ ಪ್ರಥಮ ಹಂತದಲ್ಲಿ ಸೋಮವಾರ ತಾಷ್ಕೆಂಟ್ ನಲ್ಲಿ ಬಂದಿಳಿದ ಪ್ರಧಾನಿ ಮೋದಿ, ಉಗ್ರವಾದದ ಸಮಸ್ಯೆಯನ್ನು ಹತ್ತಿಕ್ಕುವಲ್ಲಿ ಭಾರತ ಉಜ್ಬೇಕಿಸ್ತಾನದ ಜೊತೆಯಲ್ಲಿ ಕೆಲಸ ಮಾಡುವ ನಿರೀಕ್ಷೆ ಹೊಂದಿದೆ ಎಂದು ಹೇಳಿದರು.

ಭಾರತ ಮತ್ತು ಉಬ್ಜೇಕಿಸ್ತಾನಗಳ ಸಂಬಂಧ ವೃದ್ಧಿಯ ಬಗ್ಗೆ ಮಾತನಾಡುತ್ತ ಮೋದಿ, ಉಭಯ ದೇಶಗಳ ಮಧ್ಯೆ ಆರ್ಥಿಕ ಸಹಕಾರ, ಪ್ರದೇಶದಲ್ಲಿ ಸ್ಥಿರತೆ ಮತ್ತು ಪ್ರಾದೇಶಿಕ ಜೋಡಣೆಗಳನ್ನು ಉತ್ತೇಜಿಸುವ ವಿಚಾರದಲ್ಲಿ ಭಾರತ ಎದುರು ನೋಡುತ್ತಿದೆ ಎಂದರು.

ಈ ಮೊದಲು ಪ್ರಧಾನಿ ಮೋದಿ ಉಜ್ಬೇಕಿಸ್ತಾನದ ಅಧ್ಯಕ್ಷ ಕರಿಂ ಮಾಸ್ಸಿಮೊವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಚಿತ್ರ ಕೃಪೆ : http://pmindia.gov.in/

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited