ಭೋಪಾಲ್ : ಹಿಂದಿ ಪ್ರಚಾರ ಮತ್ತು ಉತ್ಕೃಷ್ಟಗೊಳಿಸಲು ಪ್ರಯತ್ನಗಳು ಅಗತ್ಯ ಎಂದು ಗುರುವಾರ ಒತ್ತಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ದಿನಗಳಲ್ಲಿ ಡಿಜಿಟಲ್ ಜಗತ್ತಿನಲ್ಲಿ ಇಂಗ್ಲೀಷ್ ಮತ್ತು ಚೈನೀಸ್ ಭಾಷೆಯಷ್ಟೇ ಪ್ರಭಾವಿ ಭಾಷೆಯಾಗಿರುತ್ತದೆ ಎಂದರು.
ನಾವು ಹಿಂದಿ ಭಾಷೆಯನ್ನು ಮರೆತರೆ ದೇಶಕ್ಕೆ ನಷ್ಟ ಎಂದ ಪ್ರಧಾನಿ ನರೇಂದ್ರ ಮೋದಿ, ಅಳಿವಿನಂಚಿನಲ್ಲಿರುವ ಭಾಷೆಗಳ ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದರು.
ಭೋಪಾಲ್ ನಲ್ಲಿ ನಡೆಯುತ್ತಿರುವ ವಿಶ್ವ ಹಿಂದಿ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ, ಗುಜರಾತ್ ನಲ್ಲಿ ಟೀ ಮಾರಾಟ ಮಾಡುತ್ತಿದ್ದ ತಮ್ಮ ಹಿಂದಿನ ದಿನಗಳ ನೆನಪು ಮಾಡಿಕೊಂಡು, ಅದರಿಂದ ತಾವು ಹಿಂದಿಯನ್ನು ಚೆನ್ನಾಗಿ ಮಾತನಾಡಲು ಸಹಾಯವಾಯಿತೆಂದರು.
ತಾವು ಭೇಟಿ ಮಾಡಿದ ದೇಶಗಳಲ್ಲಿ ಹೇಗೆ ಹಿಂದಿ ಪ್ರಾಮುಖ್ಯತೆ ಪಡೆದಿದೆ ಎನ್ನುವುದಕ್ಕೆ ತಾವು ಸಾಕ್ಷಿಯಾಗಿರುವುದನ್ನು ವಿವರಿಸಿದ ಪ್ರಧಾನಿ ನರೇಂದ್ರ ಮೋದಿ, ವಿದೇಶಗಳಲ್ಲಿ ಹಿಂದಿಯ ಪ್ರಚಾರದಲ್ಲಿ ಹಿಂದಿ ಸಿನಿಮಾಗಳ ಪಾತ್ರವನ್ನು ಒಪ್ಪಿಕೊಂಡರು.
ಮುಂಬರುವ ದಿನಗಳಲ್ಲಿ ಇಂಗ್ಲೀಷ್, ಚೈನೀಸ್ ಮತ್ತು ಹಿಂದಿ ಈ ಮೂರು ಭಾಷೆಗಳು ಡಿಜಿಟ್ಲ್ ಜಗತ್ತಿನ ಬ್ರಭಾವಿ ಭಾಷೆಯಾಗಿರುತ್ತದೆ ಎಂದು ನುಡಿದರು. ನಮ್ಮ ಗಮನ ಹಿಂದಿ ಭಾಷೆಯನ್ನು ಪ್ರಚಾರ ಮಾಡುವುದು ಮಾತ್ರವಲ್ಲದೇ ಅಳಿವಿನಂಚಿನಲ್ಲಿರುವ ಭಾಷೆಗಳಿಗೂ ಗಮನ ಹರಿಸಬೇಕೆಂದರು.
ಭಾಷಾ ತಜ್ನರ ಎಚ್ಚರಿಕೆಯನ್ನು ನಾವು ಗಮನಿಸದಿದ್ದರೆ ಈ ಭಾಷೆಗಳು ಇತಿಹಾಸ ಸೇರುತ್ತವೆ. ಭಾಷೆಯೇ ಇಲ್ಲದಿದ್ದರೆ ಸಾಹಿತ್ಯ ಉಳಿಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.