Untitled Document
Sign Up | Login    
Dynamic website and Portals
  
January 25, 2015

ಎನ್ ಜಿಒಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಚಿಂತನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ : ವಿದೇಶಿ ದೇಣಿಗೆ ದುರುಪಯೋಗ ಪಡಿಸಿಕೊಳ್ಳುತ್ತಿರುವ, ಉಗ್ರಗಾಮಿ ಚಟುವಟಿಕೆಗಳ ಜತೆಗೆ ಸಂಬಂಧ ಇಟ್ಟುಕೊಂಡಿರುವ ಹಾಗೂ ಮತಾಂತರ ಕಾರ್ಯದಲ್ಲಿ ನಿರತವಾಗಿರುವ ಆರೋಪ ಎದುರಿಸುತ್ತಿರುವ 188 ಎನ್ ಜಿಒಗಳ ವಿರುದ್ಧ ಕ್ರಮಕೈಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಇಂಥ ಎನ್ ಜಿಒಗಳ ಪಟ್ಟಿಯನ್ನು ಈಗಾಗಲೇ ಆಂತರಿಕ ಗುಪ್ತಚರ ಸಂಸ್ಥೆಗಳು ಸಿದ್ಧಪಡಿಸಿದ್ದು, ಈ ಕುರಿತ ವರದಿಯನ್ನು ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಟ್ಟಿವೆ.

ವಿದೇಶಿ ನಿಧಿಗಳು ಹಾಗೂ ಹಣಕಾಸು ಅಕ್ರಮದ ಕುರಿತು ತನಿಖೆ ನಡೆಸುವ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ(ಸಿಬಿಡಿಟಿ) ಮತ್ತು ಜಾರಿ ನಿದೇಶನಾಲಯ(ಇಡಿ)ಕ್ಕೆ ಈ ಸಂಬಂಧ ಈಗಾಗಲೇ ಮಾಹಿತಿ ನೀಡಲಾಗಿದೆ.

ಕಳೆದ ವರ್ಷ ನ.21ರಂದು ನಡೆದ ಸರ್ಕಾರದ ಆರ್ಥಿಕ ಗುಪ್ತಚರ ಸಮಿತಿ ಸಭೆಯಲ್ಲಿ ವಿದೇಶಿ ದೇಣಿಗೆ ದುರುಪಯೋಗ ಆಗುತ್ತಿರುವ ಕುರಿತು ಕಳವಳ ವ್ಯಕ್ತವಾಗಿತ್ತು. ಇಂಥ ಎನ್ ಜಿಒಗಳ ನೋಂದಣಿ ರದ್ದು ಸೇರಿದಂತೆ ಅನೇಕ ಕಠಿಣ ಕ್ರಮಗಳನ್ನು ಶಿಫಾರಸು ಮಾಡಲಾಗಿತ್ತು.

ಮೆಡಿಸನ್ ಸ್ಯಾನ್ಸ್ ಫ್ರಾಂಟಿಯರ್ಸ್ ಅಥವಾ ಡಾಕ್ರ್ ವಿದೌಂಟ್ ಬಾರ್ಡರ್ಸ್ ಎಡಪಂಥೀಯ ಉಗ್ರ ಜತೆಗೆ ಸಂಪರ್ಕ ಹೊಂದಿದ ಆರೋಪ ಇದೆ. ಈ ಎನ್ ಜಿಒ ಹೆಸರು 2008, 2010 ಮತ್ತು 2013ರಲ್ಲ ಮೂರು ಬಾರಿ ಪ್ರಸ್ತಾಪವಾಗಿತ್ತು. ಈ ಸಂಘಟನೆ ಸೆಟಲೈಟ್ ಫೋನ್ ಅನ್ನೂ ಬಳಸುತ್ತಿರುವ ಆರೋಪ ಎದುರಿಸುತ್ತಿದೆ. ಈ ರೀತಿಯ ಫೋನ್ ಬಳಕೆಗೆ ಸರ್ಕಾರದ ಅನುಮತಿ ಇಲ್ಲ. ಇದಲ್ಲದೆ ವನವಾಸಿ ಚೇತ್ನಾ ಆಶ್ರಮ್, ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ ಫೌಂಡೇಶನ್ ಸೇರಿದಂತೆ ಇನ್ನೂ 11 ಎನ್ ಜಿಒಗಳು ಎಡಪಂಥೀಯ ಉಗ್ರ ಸಂಘಟನೆಗಳ ಜತೆಗೆ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited