Untitled Document
Sign Up | Login    
Dynamic website and Portals
  

Related News

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಶಂಕಿತ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ ಎಸ್ ಐ ಟಿ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಮೂವರು ಶಂಕಿತ ಹಂತಕರ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಸಿದ್ದಿಗೋಷ್ಠಿ ನಡೆಸಿದ ಎಸ್ಐಟಿ ಮುಖ್ಯಸ್ಥ ಬಿಕೆ ಸಿಂಗ್, ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಂಕಿತರ ರೇಖಾಚಿತ್ರವನ್ನು ಬಿಡಸಲಾಗಿದೆ. ಸಿಸಿಟಿವಿಯಲ್ಲಿ...

ಅರಮನೆ ನಗರಿಯಲ್ಲಿ ಕಳೆಕಟ್ಟಿದ ಜಂಬೂಸವಾರಿ ಮೆರವಣಿಗೆ: ಮನಸೂರೆಗೊಳ್ಳುತ್ತಿದೆ ಸಾಂಸ್ಕೃತಿಕ ಕಲಾತಂಡಗಳ ವೈಭವ

ವಿಶ್ವ ವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ವೈಭವದ ಚಾಲನೆ ದೊರೆತಿದ್ದು, ಅರಮನೆ ನಗರಿಯಲ್ಲಿ ರಾಜ ಗಾಂಭೀರ್ಯದಿಂದ ಸಾಗುತ್ತಿರುವ ಗಜೆಪಡೆಗಳು, ಸಾಂಸ್ಕೃತಿಕ ಕಲಾತಂಡಗಳು, ಚಿತ್ತಾಕರ್ಷಕ ಸ್ತಬ್ದಚಿತ್ರಗಳು ಕಣ್ಮನಸೆಳೆಯುತ್ತಿವೆ. ಪೋಲಿಸ್ ಬ್ಯಾಂಡ್‌ಗಳ ಸುಶ್ರಾವ್ಯ ಸಂಗೀತ, ಅರಮನೆಯ ವಾದ್ಯವೃಂದ, ಕಂಸಾಳೆ, ವೀರಗಾಸೆ, ಡೊಳ್ಳು ಕುಣಿತ, ಪೂಜಾಕುಣಿತ, ಕರಡಿ...

ಶೂಟಿಂಗ್ ವೇಳೆ ಸಾವನ್ನಪ್ಪಿದ ಅನಿಲ್, ಉದಯ್ ಮೃತದೇಹಕ್ಕಾಗಿ ಮುಂದುವರೆದ ಶೋಧ ಕಾರ್ಯ

ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್ ಮೇಲಿನಿಂದ ಕೆರೆಗೆ ಜಿಗಿಯುವ ಸಾಹಸಮಯ ದೃಶ್ಯ ಚಿತ್ರೀಕರಿಸುತ್ತಿದ್ದ ಸಮಯದಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಖಳನಟರಾದ ಉದಯ್ ಹಾಗೂ ಅನಿಲ್ ಶವಕ್ಕಾಗಿ ಕಳೆದ 20 ಗಂಟೆಗಳಿಂದ ಶೋಧಕಾರ್ಯ ನಡೆಸುತ್ತಿದ್ದು, ಮಂಗಳವಾರವೂ ಮುಂದುವರಿದಿದೆ. ಈ ಚಿತ್ರದಲ್ಲಿ ದುನಿಯಾ...

ಒಬಾಮಾ ಕಿರುಚಿತ್ರದಲ್ಲಿ ವಿಶ್ವದ ಏಕೈಕ ನಾಯಕ ಪ್ರಧಾನಿ ಮೋದಿ

ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ ಅವರ ಸಾಧನೆ ವಿವರಿಸುವ ಕಿರುಚಿತ್ರವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಈ ಕಿರುಚಿತ್ರದಲ್ಲಿ ಕಾಣಿಸಿಕೊಂಡ ಏಕೈಕ ವಿಶ್ವ ನಾಯಕ ಎಂಬ ಹೆಗ್ಗಳಿಕೆಗೂ ಪ್ರಧಾನಿ ಮೋದಿ ಪಾತ್ರರಾಗಿದ್ದಾರೆ. ಫಿಲಡೆಲ್ಫಿಯಾದಲ್ಲಿ ನಡೆದ ಡೆಮಾಕ್ರೆಟಿಕ್‌ ಪಕ್ಷದ ಮಹತ್ವದ ಅಧ್ಯಕ್ಷೀಯ...

ಜುಲೈ 28 ರಿಂದ ಚೆನ್ನೈನಲ್ಲಿ ಕನ್ನಡ ಚಲನಚಿತ್ರೋತ್ಸವ

ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಕನ್ನಡ ಚಲನಚಿತ್ರೋತ್ಸವವನ್ನು ಜುಲೈ 28 ರಿಂದ 31 ರವರೆಗೆ ಚೆನ್ನೈನ ಅಲುವಾರ್ ಪೇಟ್‍ನ ಕಸ್ತೂರಿ ರಂಗ ರಸ್ತೆಯಲ್ಲಿರುವ ರಷ್ಯನ್ ಸೆಂಟರ್ ಆಫ್ ಸೈನ್ಸ್ ಅಂಡ್ ಕಲ್ಚರ್ ನಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್.ಬಿ.ದಿನೇಶ್...

ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್: ಬಾಲಿವುಡ್ ನಲ್ಲಿ ಮನಮೋಹನ್ ಸಿಂಗ್ ಕುರಿತು ಚಿತ್ರ ನಿರ್ಮಾಣ

ಸಂಜಯ್ ಬಾರು ಅವರ ‘ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್: ಮೇಕಿಂಗ್ ಆಂಡ್ ಅನ್​ವೆುಕಿಂಗ್ ಆಫ್ ಮನಮೋಹನ್ ಸಿಂಗ್’ ಎಂಬ ಕಾದಂಬರಿ ಆಧಾರಿತ ಚಿತ್ರ ನಿರ್ಮಿಸಲು ಬಾಲಿವುಡ್ ಮುಂದಾಗಿದೆ. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಬಯಸದೇ ಬಂದ ಭಾಗ್ಯ. ಅದಕ್ಕೆ...

2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

2015ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಕನ್ನಡದ ತಿಥಿ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ, ವಿಜಯ ರಾಘವೇಂದ್ರ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರೆ, ಮಾಲಾಶ್ರೀ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾರ್ತಾ ಸಚಿವ ರೋಶನ್...

ಬ್ಯೂಟಿಫುಲ್ ಚಿತ್ರದ ಧ್ವನಿ ಸುರುಳಿ ಬಿಡುಗಡೆ

ಚಲನಚಿತ್ರವನ್ನು ಪ್ರಾಯೋಗಿಕ ನೆಲೆಯಲ್ಲಿ ವಿದ್ಯಾರ್ಥಿದೆಸೆಯಲ್ಲಿ ತಯಾರು ಮಾಡುವುದು ಉತ್ತಮ ಕಾರ್ಯ. ಬ್ಯೂಟಿಫುಲ್ ಚಿತ್ರ ಈ ಹಿನ್ನೆಲೆಯಲ್ಲಿ ಕೊಂಚ ಮುಂದುವರಿದು ಪೂರ್ಣಪ್ರಮಾಣದ ಚಲನಚಿತ್ರವೊಂದರ ಗುಣಮಟ್ಟವನ್ನು ಕಾಯ್ದುಕೊಂಡಿದೆ. ಇಲ್ಲಿರುವ ಅಷ್ಟೂ ಹಾಡುಗಳು ಸರಳ ಮತ್ತು ಸುಂದರವಾಗಿ ಮೂಡಿಬಂದಿದೆ ಎಂದು ಉದ್ಯಮಿ ಪೂರಣ್ ವರ್ಮ ಹೇಳಿದರು....

ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಶನಿವಾರ ವರ್ಣಮೈತ್ರಿ ಕಲಾ ಉತ್ಸವ

ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಗಳ ದಿವ್ಯಸಾನ್ನಿಧ್ಯದಲ್ಲಿ ಶನಿವಾರ, ಜ. 30 ರಂದು 'ವರ್ಣಮೈತ್ರಿ ಕಲಾ ಉತ್ಸವ' ಸಂಪನ್ನವಾಗಲಿದೆ. ಕೊಬಾಲ್ಟ್(ರಿ) ಫೋರಮ್ ಆಪ್ ಆರ್ಟ್ಸ & ಮ್ಯೂಸಿಕ್ ಸಂಸ್ಥೆಯು ತನ್ನ 9 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತವಾಗಿ 'ವರ್ಣಮೈತ್ರಿ ಕಲಾ ಉತ್ಸವ'ವನ್ನು...

ಭಾರತದಿಂದ ವಿಯೆಟ್ನಾಂನಲ್ಲಿ ಉಪಗ್ರಹ ಟ್ರ್ಯಾಕಿಂಗ್ ಸ್ಟೇಷನ್ ನಿರ್ಮಾಣ

ಭಾರತ ದಕ್ಷಿಣ ವಿಯೆಟ್ನಾಂನಲ್ಲಿ ಉಪಗ್ರಹ ಟ್ರ್ಯಾಕಿಂಗ್ ಸ್ಟೇಷನ್ ಮತ್ತು ಚಿತ್ರಣ ಕೇಂದ್ರವನ್ನು (imaging centre) ನಿರ್ಮಾಣ ಮಾಡಲಿದೆ. ಇದರಿಂದ ಚೀನಾ ಮತ್ತು ದಕ್ಷಿಣ ಚೀನಾ ಸಮುದ್ರ ಸೇರಿದಂತೆ ಈ ಪ್ರದೇಶವನ್ನು ಆವರಿಸುವ ಭಾರತೀಯ ಭೂ ವೀಕ್ಷಣೆಯ ಉಪಗ್ರಹಗಳ ಚಿತ್ರ ಸಿಗಲಿದೆ ಎಂದು...

ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ ವಿಧಿವಶ

ಕನ್ನಡದ ಖ್ಯಾತ ಹಿರಿಯ ಚಿತ್ರ ನಿರ್ದೇಶಕ ಗೀತಪ್ರಿಯ(84) ಆವರು ಭಾನುವಾರ ಸಂಜೆ ಬೆಂಗಳೂರಿನ ಕೆ ಸಿ ಜನರಲ್‌ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಕಳೆದ ಹಲವಾರು ದಿನಗಳಿಂದ ಆನಾರೋಗ್ಯದಿಂದ ಬಳಲುತಿದ್ದ ಗೀತಪ್ರಿಯ ಆವರನ್ನು ಬೆಂಗಳೂರಿನ ಕೆ ಸಿ ಜನರಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಭಾನುವಾರ ಸಂಜೆ...

ಅಮೆರಿಕದ ಎಂಪೈರ್ ಸ್ಟೇಟ್ ಕಟ್ಟಡದಲ್ಲಿ ಪ್ರದರ್ಶನಗೊಂಡ ಕಾಳಿ ಮಾತೆಯ ಚಿತ್ರ

ಭಾರತದ ಸೆಕ್ಯುಲರ್ ವಾದಿಗಳು ಬೆಚ್ಚಿಬೀಳುವ ಸಂದರ್ಭವಿದು.. ಹೌದು, ಅಮೆರಿಕದ ನ್ಯೂಯಾರ್ಕ್ ನಗರದ ಪ್ರತಿಷ್ಠಿತ ಎಂಪೈರ್ ಸ್ಟೇಟ್ ಬಿಲ್ಡಿಂಗ್ ನಲ್ಲಿ ಹಿಂದೂ ದೇವಿ ಕಾಳಿ ಮಾತೆಯ ಚಿತ್ರದ ಅದ್ಭುತ ಪ್ರದರ್ಶನ ಮಾಡಲಾಗಿದೆ!. ಕಲಾವಿದ ಆಂಡ್ರೂ ಜೋನ್ಸ್ ವಿನ್ಯಾಸಗೊಳಿಸಿದ ಕಾಳಿಮಾತೆಯ ರೌದ್ರಾವತಾರದ ಭಾವಚಿತ್ರವನ್ನು ಪ್ರದರ್ಶಿಸಲಾಯಿತು. ಪರಿಸರ...

ರಾಜ್ಯದಲ್ಲಿ ಒಂದೇ ದಿನ ನಾಲ್ವರು ರೈತರ ಆತ್ಮಹತ್ಯೆ

ರೈತರ ಆತ್ಮಹತ್ಯೆ ಮುಂದುವರಿದಿದ್ದು, ಶುಕ್ರವಾರ ರಾಜದಲ್ಲಿ ಒಟ್ಟು 4 ರೈತರು ಅತ್ಮಹತ್ಯೆ ಮಾಡಿಕೊಡಿದ್ದಾರೆ. ಸಾಲಬಾಧೆ ತಾಳಲಾರದೆ, ಕೊಪ್ಪಳ ಜಿಲ್ಲೆಯ ಗಂಗಾವತಿ, ಚಿತ್ರದುರ್ಗ ಮತ್ತು ಮೈಸೂರು ಸೇರಿ ಒಟ್ಟು ನಾಲ್ವರು ರೈತರು ಅತ್ಮಹತ್ಯೆ ಮಾಡಿಕೊಡಿದ್ದಾರೆ. ಚಿತ್ರದುರ್ಗದಲ್ಲಿ ರೈತ 30 ವರ್ಷದ ರಂಗಪ್ಪ ಸಾಲ ತೀರಿಸಲಾಗದೆ...

ಬೆಗ್ಗರ್ಸ್ ಹ್ಯಾವ್ ನೋ ಚಾಯ್ಸ್: ನಿರ್ಮಾಪಕರ ಬಗ್ಗೆ ಅಂಬರೀಶ್ ವ್ಯಂಗ್ಯ

ಕನ್ನಡ ಚಿತ್ರರಂಗದ ನಿರ್ಮಾಪಕರುಗಳ ಧರಣಿ ಇನ್ನಷ್ಟು ಭುಗಿಲೆದ್ದಿದ್ದು, ಈ ಸಂಬಂಧ ಮಾತನಾಡಿದ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಅವರ ಬೆಗ್ಗರ್ಸ್ ಹ್ಯಾವ್ ನೋ ಚಾಯ್ಸ್ (ಬಿಕ್ಷುಕರಿಗೆ ಯಾವುದೇ ಆಯ್ಕೆ ಇಲ್ಲ) ಎಂಬ ವಿವಾದಾತ್ಮಕ ಹೇಳಿಕೆ ನಿರ್ಮಾಪರ ಆಕ್ರೋಶಕ್ಕೆ ಕಾರಣವಾಗಿದೆ. ಕಲಾವಿದರ ಸಂಘದಿಂದ ನಮ್ಮ...

ಕ್ರಿಮಿನಲ್‌ ಲಿಸ್ಟಲ್ಲಿ ಪ್ರಧಾನಿ ಮೋದಿ ಚಿತ್ರ: ಗೂಗಲ್‌ ಕ್ಷಮೆಯಾಚನೆ

’10 ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್ಸ್‌' ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಕಾಣಿಸಿಕೊಳ್ಳುತ್ತಿದ್ದ ಪ್ರಕರಣದಲ್ಲಿ ಅಂತರ್ಜಾಲ ದೈತ್ಯ ಗೂಗಲ್‌ ಪ್ರಧಾನಿ ಮೋದಿ ಕ್ಷಮೆಯಾಚಿಸಿದೆ. ’ಗೂಗಲ್‌ ಇಮೇಜಸ್‌' ನಲ್ಲಿ ’10 ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್ಸ್‌' ಎಂದು ಟೈಪಿಸಿದರೆ, ಮೋದಿ ಭಾವಚಿತ್ರ ಕಾಣುತ್ತಿದ್ದುದು ತೀವ್ರ...

ಈಜಿಪ್ಟ್ ಪದಚ್ಯುತ ಅಧ್ಯಕ್ಷ ಮೋರ್ಸಿಗೆ 20 ವರ್ಷ ಜೈಲುಶಿಕ್ಷೆ

ಪ್ರತಿಭಟನಾಕಾರರ ಬಂಧನ ಹಾಗೂ ಪ್ರತಿಭಟನಾಕಾರರಿಗೆ ಚಿತ್ರಹಿಂಸೆ ಕೊಟ್ಟ ಆರೋಪ ಎದುರಿಸುತ್ತಿದ್ದ ಈಜಿಪ್ಟ್ ನ ಪದಚ್ಯುತ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋರ್ಸಿಗೆ ಈಜಿಪ್ಟ್ ಕೋರ್ಟ್ 20 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ಹಲವು ವಿಚಾರಣೆಗಳ ಬಳಿಕ ಪದಚ್ಯುತಗೊಂಡ ಈಜಿಪ್ಟ್ ಅಧ್ಯಕ್ಷ ಮೋರ್ಸಿ ಹಲವು ಆರೋಪಗಳ ಪೈಕಿ...

ಬಿಬಿಎಂಪಿ ವಿಭಜನೆ: ಹೊರಬೀಳಲಿದೆ ಸ್ಪಷ್ಟ ಚಿತ್ರಣ

ಬಿಬಿಎಂಪಿ ವಿಭಜನೆ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ನಡೆದಿರುವ ಕಸರತ್ತು ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಸೋಮವಾರ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಬಿಬಿಎಂಪಿಯನ್ನು ವಿಭಜನೆ ಮಾಡಲು ಪಣ ತೊಟ್ಟಿರುವ ರಾಜ್ಯ ಸರ್ಕಾರ ಇದಕ್ಕಾಗಿ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ, 2015...

ಸಿರಿಯಾದಲ್ಲಿ ಮಹಿಳಾ ಜಿಹಾದಿ ದಳ ಅಸ್ತಿತ್ವಕ್ಕೆ

ಮಹಿಳೆಯರನ್ನೇ ಒಳಗೊಂಡ ಜಿಹಾದಿ ದಳವೊಂದು ಇದೀಗ ಸಿರಿಯಾದಲ್ಲಿ ಕಾಣಿಸಿಕೊಂಡಿದೆ. ಈ ಮಹಿಳಾ ಜಿಹಾದಿ ದಳದವರು ಕೈಯಲ್ಲಿ ಕಲಾಶ್ನಿಕೋವ್‌ ಬಂದೂಕನ್ನು ಝಳಪಿಸುತ್ತಾ "ಅಲ್ಲಾಹು ಅಕ್ಬರ್‌' ಎಂದು ದೊಡ್ಡ ಧ್ವನಿಯಲ್ಲಿ ಉದ್ಗರಿಸುವುದನ್ನು ಕಾಣಿಸುವ ವಿಡಿಯೋ ಚಿತ್ರಿಣಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. ಐದು ನಿಮಿಷಗಳ ಈ ವಿಡಿಯೋದಲ್ಲಿ...

2015ನೇ ಸಾಲಿನ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದ 91 ಸಾಧಕರು

ಪ್ರಸಕ್ತ ಸಾಲಿನ ಕೆಂಪೇಗೌಡ ಪ್ರಶಸ್ತಿ ಪ್ರಕಟವಾಗಿದ್ದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 91 ಮಂದಿ ಗಣ್ಯರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಏ.3ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಮೇಯರ್ ಶಾಂತಕುಮಾರಿ, ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹಾನ್ ಸಾಧನೆಗಳನ್ನು ಗುರುತಿಸಿ...

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ

ಕೇಂದ್ರ ಸರ್ಕಾರವು 2014ನೇ ಸಾಲಿನ 62ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಕನ್ನಡಕ್ಕೆ 3 ಪ್ರಶಸ್ತಿಗಳು ಸಂದಿವೆ. ’ನಾನು ಅವನಲ್ಲ, ಅವಳು' ಕನ್ನಡ ಚಿತ್ರದ ಮುಖ್ಯ ಪಾತ್ರಧಾರಿ ಸಂಚಾರಿ ವಿಜಯ್‌ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಂದಿದೆ. ಇತಿಹಾಸದಲ್ಲೇ ಕನ್ನಡ ಚಿತ್ರ...

ಬಾಲಿವುಡ್‌ ನಟ ಶಶಿ ಕಪೂರ್‌ ಗೆ ಫಾಲ್ಕೆ ಪ್ರಶಸ್ತಿ ಗೌರವ

ಖ್ಯಾತ ನಟ ಶಶಿ ಕಪೂರ್ ಅವರಿಗೆ 2014ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಲಭಿಸಿದೆ. ಸ್ವರ್ಣ ಕಮಲ, 10 ಲಕ್ಷ ರೂ. ನಗದು ಹಾಗೂ ಶಾಲನ್ನು ಫಾಲ್ಕೆ ಪ್ರಶಸ್ತಿ ಹೊಂದಿದೆ. ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವ ಎಂದೇ ಬಿಂಬಿತವಾಗಿರುವ ಫಾಲ್ಕೆ...

ಇನ್ನು ಮುಂದೆ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ

ಮತಪತ್ರಗಳಲ್ಲಿ ಇನ್ನು ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯ ಜತೆ ಅವರ ಫೋಟೋ ಕೂಡ ಇರಲಿದೆ. ಮತದಾರರಿಗೆ ಕೇವಲ ಹೆಸರು ಹಾಗೂ ಚಿಹ್ನೆಯ ಆಧಾರದಲ್ಲಿ ಅಭ್ಯರ್ಥಿಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಅಲ್ಲದೆ, ಒಂದೇ ಹೆಸರಿನ ಹಲ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವ ಕಾರಣ ಗೊಂದಲ ಉಂಟಾಗುತ್ತದೆ....

ಡಿ.ಕೆ ರವಿ ಸಾವು : ಪ್ರತಿಭಟನಾ ನಿರತರಿಂದ ಸಿಎಂ ಭಾವಚಿತ್ರಕ್ಕೆ ಚಪ್ಪಲಿ ಹಾರ

ಪ್ರಾಮಾಣಿಕ, ದಕ್ಷ ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ ಅವರ ಅನುಮಾನಾಸ್ಪದ ಸಾವಿಗೆ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೋಲಾರ ಹಾಗೂ ರವಿ ಅವರ ತವರು ಜಿಲ್ಲೆ ತುಮಕೂರಿನಲ್ಲಿ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದ್ದು, ಆಕ್ರೋಶಗೊಂಡ ಜನತೆ ಸಿ.ಎಂ ಸಿದ್ದರಾಮಯ್ಯ ಭಾವಚಿತ್ರಕ್ಕೆ ಚಪ್ಪಲಿ...

ಯು.ಕೆ ಡಾಟರ್ಸ್ : ಇಂಡಿಯಾಸ್ ಡಾಟರ್ ಗೆ ಸಾಕ್ಷ್ಯಚಿತ್ರದ ಮೂಲಕವೇ ಪ್ರತಿಕ್ರಿಯೆ

ಭಾರತದ ಮಗಳು(ಇಂಡಿಯಾಸ್ ಡಾಟರ್) ಸಾಕ್ಷ್ಯಚಿತ್ರಕ್ಕೆ ಭಾರತೀಯರಾದ ಹರ್ವಿಂದರ್ ಸಿಂಗ್ ಎಂಬುವವರು ಸಾಕ್ಷ್ಯಚಿತ್ರದ ಮೂಲಕವೇ ಪ್ರತಿಕ್ರಿಯೆ ನೀಡಿದ್ದು, ಯುನೈಟೆಡ್ ಕಿಂಗ್ಡಮ್ ಡಾಟರ್ಸ್( ಯು.ಕೆ ಹೆಣ್ಣುಮಕ್ಕಳು) ಮೂಲಕ ಅಲ್ಲಿನ ಹೆಣ್ಣುಮಕ್ಕಳ ಸ್ಥಿತಿಯನ್ನು ಬಯಲಿಗೆಳೆದಿದ್ದಾರೆ. ಯು.ಕೆಯಲ್ಲಿರುವ ಹೆಣ್ಣುಮಕ್ಕಳ ಸ್ಥಿತಿ ಭಾರತೀಯ ಹೆಣ್ಣುಮಕ್ಕಳ ಸ್ಥಿತಿಗಿಂತಲೂ...

ನಿರ್ದೇಶಕ ಸಿದ್ದಲಿಂಗಯ್ಯ ನಿಧನ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಮಾ.12ರಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಲಿಂಗಯ್ಯ, ಕಳೆದ ಕೆಲವು ದಿನಗಳಿಂದ ರಾಜಾಜಿನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಿದ್ದಲಿಂಗಯ್ಯ ಅವರಿಗೆ ಎಚ್1ಎನ್1 ಸೋಂಕು ಕೂಡ ಆವರಿಸಿತ್ತು. ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು, ದೂರದಬೆಟ್ಟ...

ಭಾರತದ ನ್ಯಾಯಾಲಯಗಳು ಸರ್ಕಾರದ ಕೈಗೊಂಬೆಯಲ್ಲ, ನಿಷೇಧ ಹೆಚ್ಚು ದಿನ ಇರಲ್ಲ:ಲೆಸ್ಲಿ ಉಡ್ವಿನ್

ಭಾರತದ ನ್ಯಾಯಾಲಯಗಳು ಸರ್ಕಾರದ ಕೈಗೊಂಬೆಗಳಲ್ಲದ ಕಾರಣ ಬಿಬಿಸಿ ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ಹೇರಿರುವ ನಿಷೇಧ ದೀರ್ಘಾವಧಿಯವರೆಗೂ ಮುಂದುವರೆಯುವುದಿಲ್ಲ ಎಂದು ಲೆಸ್ಲಿ ಉಡ್ವಿನ್ ಹೇಳಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಸಂದರ್ಶನದಲ್ಲಿ ಸಾಕ್ಷ್ಯಚಿತ್ರಕ್ಕೆ ವಿಧಿಸಿರುವ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿರುವ ಲೆಸ್ಲಿ ಉಡ್ವಿನ್...

ನಿಷೇಧದಿಂದಲೇ ಇಂಡಿಯಾಸ್ ಡಾಟರ್ ಅತಿ ಹೆಚ್ಚು ಪ್ರಚಾರ ಪಡೆಯಿತು: ಲೆಸ್ಲಿ ಉಡ್ವಿನ್

'ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರ ಅತಿ ಹೆಚ್ಚು ವೀಕ್ಷಣೆಯಾಗಿರುವುದಕ್ಕೆ ಭಾರತ ಸರ್ಕಾರ ನಿಷೇಧ ಹೇರಿರುವುದೇ ಕಾರಣ ಎಂದು ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಹೇಳಿದ್ದಾರೆ. ಎಕೆನಾಮಿಕ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಭಾರತ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಲೆಸ್ಲಿ ಉಡ್ವಿನ್, ಸಾಕ್ಷ್ಯಚಿತ್ರದ...

ಬಿಬಿಸಿ ಸಾಕ್ಷ್ಯಚಿತ್ರ ನಿಷೇಧದ ಬಗ್ಗೆ ಚರ್ಚೆಯನ್ನು ಸ್ವಾಗತಿಸಿದ ಜರ್ಮನ್ ರಾಯಭಾರಿ

'ಬಿಬಿಸಿ' ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರ ನಿಷೇಧದ ಬಗ್ಗೆ ಉಂಟಾಗಿರುವ ಚರ್ಚೆಯನ್ನು ಭಾರತದಲ್ಲಿರುವ ಜರ್ಮಿನಿಯ ರಾಯಭಾರಿ ಮೈಕೆಲ್ ಸ್ಟೀನರ್ ಸ್ವಾಗತಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೈಕೆಲ್ ಸ್ಟೀನರ್, ಡಿ.16ರ ಗ್ಯಾಂಗ್ ರೇಪ್ ಕುರಿತು ಬಿಬಿಸಿ...

ಸಂದರ್ಶನಕ್ಕಾಗಿ 40 ಸಾವಿರ ಪಡೆದ ರೇಪಿಸ್ಟ್

ವಿವಾದಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದಲ್ಲಿನ ಗ್ಯಾಂಗ್ ರೇಪ್ ಆರೋಪಿ ಮುಖೇಶ್ ಸಿಂಗ್ ಸಂದರ್ಶನಕ್ಕಾಗಿ ಚಿತ್ರ ನಿರ್ಮಾಪಕರು 40 ಸಾವಿರ ರೂಪಾಯಿ ಪಾವತಿಸಿರುವುದಾಗಿ ನವಭಾರತ್ ಟೈಮ್ಸ್ ವರದಿ ತಿಳಿಸಿದೆ. ಮುಖೇಶ್ ಸಿಂಗ್ ಸಂದರ್ಶನಕ್ಕಾಗಿ ಚಿತ್ರ ನಿರ್ಮಾಪಕಿ ಲಿಸ್ಲೇ ಉಡ್ವಿನ್ ಹಲವಾರು ಬಾರಿ ಪ್ರಯತ್ನಿಸಿದ್ದರು. ಆದರೆ...

ಅಪರಾಧಿಯನ್ನು ಸೃಷ್ಟಿಸಿದ್ದೇ ಸಮಾಜ: ಲೆಸ್ಲಿ ಉಡ್ವಿನ್

ದೆಹಲಿ ಗ್ಯಾಂಗ್ ರೇಪ್ ಅಪರಾಧಿಯನ್ನು ಹುಟ್ಟಿಸಿದ್ದೇ ನಮ್ಮ ಸಮಾಜ. ಇಲ್ಲಿ ಅಪರಾಧಿಯಾಗಿದ್ದು ಕೇವಲ ಅತ್ಯಾಚಾರಿಗಳಲ್ಲ, ಇಡೀ ಸಮಾಜ. ಅತ್ಯಾಚಾರಿಗಳು ಏನನ್ನು ಯೋಚಿಸಬೇಕು ಎನ್ನುವುದನ್ನು ಕಲಿಸಿಕೊಟ್ಟಿದ್ದು, ಅವರಿಗೆ ಉತ್ತೇಜನ ನೀಡಿದ್ದೂ ಸಮಾಜವೇ ಎಂದು ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ತಿಳಿಸಿದ್ದಾರೆ. ಇಂಡಿಯಾ...

ನಿಷೇಧದ ನಡುವೆಯೂ ಮಾ.9ರಂದು ಅಮೆರಿಕಾದಲ್ಲಿ ನಡೆಯಲಿದೆ ನಿರ್ಭಯ ಪ್ರಸಾರ!

ನಿಷೇಧಿತ ನಿರ್ಭಯಾ ಸಾಕ್ಷ್ಯಚಿತ್ರ ಅಮೆರಿಕಾದಲ್ಲಿ ಪ್ರಸಾರವಾಗಲು ಸಿದ್ಧವಾಗಿದೆ. ನ್ಯೂಯಾರ್ಕ್ ನ ಸಿಟಿ ಯೂನಿವರ್ಸಿಟಿಯಲ್ಲಿ ಮಾ.9ರಂದು ಸಾಕ್ಷ್ಯಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ. ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭದಲ್ಲಿ ಇತ್ತೀಚೆಗಷ್ಟೇ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಮೇರಿ ಸ್ಟ್ರೀಪ್ ಸಹ ಭಾಗವಹಿಸಲಿದ್ದಾರೆ. ಈ ಮೂಲಕ ಭಾರತದಲ್ಲಿ...

ಡಿಫೆನ್ಸ್‌ ವಕೀಲರಿಗೆ ಬಾರ್ ಕೌನ್ಸಿಲ್‌ ಶೋಕಾಸ್‌ ನೋಟಿಸ್ ಜಾರಿ

ದೆಹಲಿ ಗ್ಯಾಂಗ್‌ ರೇಪ್‌ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದ ಮತ್ತು ಬಿಬಿಸಿ ಸಾಕ್ಷ್ಯಚಿತ್ರದಲ್ಲಿ ಆಕ್ಷೇಪಾರ್ಹವಾಗಿ ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡಿದ್ದ ಇಬ್ಬರು ವಕೀಲರಿಗೆ ಬಾರ್ ಕೌನ್ಸಿಲ್‌ ಆಫ್ ಇಂಡಿಯಾ ಶೋಕಾಸ್‌ ನೊಟೀಸ್‌ ಜಾರಿ ಮಾಡಿದೆ. ಬಿಬಿಸಿ ಪ್ರಸಾರಮಾಡಿರುವ ಇಂಡಿಯಾಸ್‌ ಡಾಟರ್ ಸಾಕ್ಷ್ಯಚಿತ್ರದಲ್ಲಿ...

ನಿಷೇಧಿತ ಸಾಕ್ಷ್ಯಚಿತ್ರ ಪ್ರಸಾರ: ಬಿಬಿಸಿಗೆ ನೋಟಿಸ್‌

ಎರಡು ವರ್ಷಗಳ ಹಿಂದೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದ ದೆಹಲಿ ಗ್ಯಾಂಗ್ ಪ್ರಕರಣ (ನಿರ್ಭಯಾ ಕೇಸ್‌)ದ ದೋಷಿಯ ಸಂದರ್ಶನ ಒಳಗೊಂಡ ಸಾಕ್ಷ್ಯಚಿತ್ರವನ್ನು ಕೇಂದ್ರ ಸರ್ಕಾರದ ನಿರ್ಬಂಧ ಧಿಕ್ಕರಿಸಿ ಬಿಬಿಸಿ-4 ಟೀವಿ ವಾಹಿನಿಯು ಪ್ರಸಾರ ಮಾಡಿದೆ. ಅಲ್ಲದೆ ಆ ಸಾಕ್ಷ್ಯಚಿತ್ರವನ್ನು ಜನಪ್ರಿಯ ಆನ್‌ ಲೈನ್‌...

ಹಿನ್ನೆಲೆ ಪರಿಶೀಲನೆ ನಡೆಸದೇ ಬಿಬಿಸಿಯ ಲೆಸ್ಲಿ ಉಡ್ವಿನ್ ಗೆ ಅನುಮತಿ!

'ನಿರ್ಭಯಾ' ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದ ಲೆಸ್ಲಿ ಉಡ್ವಿನ್ ಗೆ ತಿಹಾರ್ ಜೈಲಿನಲ್ಲಿ ಅಪರಾಧಿಗಳ ಚಿತ್ರೀಕರಣಕ್ಕೆ ಅನುಮತಿ ನೀಡುವ ಮೂಲಕ ಗೃಹ ಇಲಾಖೆ ತನ್ನ ನಿಬಂಧನೆಗಳನ್ನು ಉಲ್ಲಂಘಿಸಿತ್ತು ಎಂಬ ಅಂಶ ಬಯಲಾಗಿದೆ. ಜೈಲಿಗೆ ಭೇಟಿ ನೀಡುವ ವಿದೇಶಿಗರ ಹಿನ್ನೆಲೆಯನ್ನು ತಪಾಸಣೆ ಮಾಡುವುದು ಕಡ್ಡಾಯವಾಗಿರುತ್ತದೆ....

ಗೃಹ ಇಲಾಖೆ ಅಧಿಕಾರಿಗಳನ್ನು ದಾರಿ ತಪ್ಪಿಸಿದ್ದ ಬಿಬಿಸಿಯ ಲೆಸ್ಲಿ ಉಡ್ವಿನ್!

'ನಿರ್ಭಯಾ' ಸಾಕ್ಷ್ಯಚಿತ್ರದ ಸಂಬಂಧ ಒಂದೊಂದೇ ಸತ್ಯಗಳು ಹೊರಬೀಳಲಾರಂಭಿಸಿವೆ. ಸಾಕ್ಷ್ಯಚಿತ್ರ ನಿರ್ಮಿಸಿದ್ದ ಬಿಬಿಸಿಯ ಲೆಸ್ಲಿ ಉಡ್ವಿನ್ ಅವರ ಹಿನ್ನಲೆಯನ್ನು ಪರಿಶೀಲಿಸದೇ ಗೃಹ ಸಚಿವಾಲಯ ತಿಹಾರ್ ಜೈಲಿಗೆ ತೆರಳಲು ವಿದೇಶಿ ಪತ್ರಕರ್ತೆಗೆ ಅನುಮತಿ ನೀಡಿತ್ತು ಎಂಬ ವಿಷಯ ಬಯಲಾದ ಬೆನ್ನಲ್ಲೇ, ಸಾಕ್ಷ್ಯ ಚಿತ್ರ ನಿರ್ಮಿಸುವ...

ವಿವಾದಕ್ಕೆ ಕಾರಣವಾಗಿದೆ ಟಿ ಕಪ್ ಮೇಲೆರುವ ಮೋದಿ ಅಮಿತ್ ಶಾ ಭಾವಚಿತ್ರ!

'ದೆಹಲಿ-ಅಮೃತಸರ' ಶತಾಬ್ದಿ ರೈಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಭಾವಚಿತ್ರವಿರುವ ಪ್ಲಾಸ್ಟಿಕ್ ಕಪ್ ಬಳಕೆಯಾಗುತ್ತಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಚುನಾವಣಾ ಕಣವಾಗಿರುವ ದೆಹಲಿಯಲ್ಲಿ ಈ ರೀತಿ ಬಿಜೆಪಿ ಪರವಾಗಿರುವ ಪ್ಲ್ಯಾಸ್ಟಿಕ್ ಟೀ ಕಪ್ ಗಳು ಬಳಕೆಯಾಗುತ್ತಿರುವುದರ ಬಗ್ಗೆ ರೈಲ್ವೇ...

ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ನಿಧನ

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ವ್ಯಂಗ್ಯ ಚಿತ್ರಕಾರ ಆರ್.ಕೆ ಲಕ್ಷ್ಮಣ್ ಅವರು ವಿಧಿವಶರಾಗಿದ್ದಾರೆ. ಆರ್.ಕೆ ಲಕ್ಷ್ಮಣ್ ಅವರನ್ನು ಪುಣೆಯ ದೀನನಾಥ್ ಮಂಗೇಷ್ಕರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣದಿಂದ ವೆಂಟಿಲೇಟರ್ ಅಳವಡಿಸಲಾಗಿತ್ತು. ಕರ್ನಾಟಕದ ಮೈಸೂರು ಮೂಲದವರಾದ 94 ವರ್ಷದ...

ಖ್ಯಾತ ಹಾಸ್ಯ ನಟ ಎಂ.ಎಸ್ ನಾರಾಯಣ ನಿಧನ

ಟಾಲಿವುಡ್‌ನ ಖ್ಯಾತ ಹಾಸ್ಯ ನಟ ಎಂ.ಎಸ್ ನಾರಾಯಣ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಎಂ.ಎಸ್ ನಾರಾಯಣ ಅವರು ಕಳೆದ ಒಂದು ವಾರದಿಂದ ಮಧಪುರ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಸಂಕ್ರಾಂತಿ ಹಬ್ಬ ಆಚರಿಸಲೆಂದು ಆಂಧ್ರದ...

ನಾನು ಬಿಜೆಪಿ ವ್ಯಕ್ತಿ, ಮೋದಿ ನನ್ನ ಆಕ್ಷನ್ ಹೀರೋ: ಸೆನ್ಸಾರ್ ಬೋರ್ಡ್ ಅಧ್ಯಕ್ಷ ನಿಹಲಾನಿ

'ಸೆನ್ಸಾರ್ ಬೋರ್ಡ್' ಗೆ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಪೆಹ್ಲಾಜ್ ನಿಹಲಾನಿ ಅವರು ಎಲ್ಲರ ಹುಬ್ಬೇರಿಸುವ ಹೇಳಿಕೆ ನೀಡಿದ್ದಾರೆ. ನ್ಯೂಸ್ ಚಾನೆಲ್ ನೊಂದಿಗೆ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿರುವ ನಿಹಲಾನಿ, ನರೇಂದ್ರ ಮೋದಿ ಅವರು ಈ ದೇಶದ ಧ್ವನಿ,...

ಸೆನ್ಸಾರ್‌ ಮಂಡಳಿಗೆ ನೂತನ ಅಧ್ಯಕ್ಷ ನೇಮಕ

ವಿವಾದಿತ ಮೆಸೆಂಜರ್ ಆಫ್ ಗಾಡ್ ಚಿತ್ರಕ್ಕೆ ಅನುಮತಿ ನೀಡುವ ವಿವಾದದಿಂದಾಗಿ ಲೀಲಾ ಸ್ಯಾಮ್ಸನ್‌ ರಾಜೀನಾಮೆಯಿಂದ ತೆರವಾಗಿದ್ದ ಕೇಂದ್ರ ಚಲನಚಿತ್ರ ಸೆನ್ಸಾರ್‌ ಮಂಡಳಿ ಅಧ್ಯಕ್ಷ ಹುದ್ದೆಗೆ ಹಿರಿಯ ಚಿತ್ರ ನಿರ್ಮಾಣಕಾರ ಪೆಹ್ಲಾಜ್‌ ನಿಹಲಾನಿ ಅವರನ್ನು ನೇಮಿಸಲಾಗಿದೆ. ಪೆಹ್ಲಾಜ್‌ ಜೊತೆಗೆ 9 ಸದಸ್ಯರನ್ನೂ ಮಂಡಳಿಗೆ ನೇಮಕ...

ಫ್ರಾನ್ಸ್ ಪತ್ರಿಕಾ ಕಚೇರಿ ಮೇಲೆ ಉಗ್ರರ ದಾಳಿ

'ಫ್ರಾನ್ಸ್' ನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದು 12 ಜನ ಸಾವನ್ನಪ್ಪಿದ್ದಾರೆ. ಪ್ಯಾರೀಸ್ ನಲ್ಲಿರುವ ಚಾರ್ಲಿ ಹೆಬ್ಡೋ ಕಚೇರಿಯ ಮೇಲೆ ದಾಳಿ ನಡೆದಿದೆ. ಐ.ಎಸ್.ಐ.ಎಸ್ ಉಗ್ರ ಅಲ್ ಬಗ್ದಾದಿಯ ವ್ಯಂಗ್ಯ ಚಿತ್ರ ಪ್ರಕಟಿಸಿದ್ದಕ್ಕಾಗಿ ಐ.ಎಸ್.ಐ.ಎಸ್ ಉಗ್ರರು...

ಪಿಕೆ ಚಿತ್ರದ ನಟ ನಿರ್ದೇಶಕನ ವಿರುದ್ಧ ಪ್ರಕರಣ ದಾಖಲು

ವಿವಾದಕ್ಕೆ ಗುರಿಯಾಗಿರುವ ಪಿಕೆ ಚಲನಚಿತ್ರ ನಿರ್ದೇಶಕ ಹಾಗೂ ನಟ ಅಮೀರ್ ಖಾನ್ ವಿರುದ್ಧ ಜೈಪುರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವ ಆರೋಪದಡಿ ಐಪಿಸಿ ಸೆಕ್ಷನ್ 295ಎ ಹಾಗೂ ಸಮುದಾಯಗಳ ನಡುವೆ ಧಾರ್ಮಿಕ ಸಂಘರ್ಷಕ್ಕೆ ಪ್ರಚೋದನೆ ನೀಡುವ...

ಪಿಕೆ ವಿರುದ್ಧ ಪ್ರತಿಭಟನೆ: ದೇಶದ ವಿವಿಧ ಚಿತ್ರ ಮಂದಿರಗಳ ಮೇಲೆ ದಾಳಿ

ಅಮೀರ್ ಖಾನ್ ನಟನೆಯ ಪಿಕೆ ಚಿತ್ರಕ್ಕೆ ರಾಜ್ಯವೂ ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿದ್ದು, ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಾರ್ಯಕರ್ತರು ಪಿ.ಕೆ ಸಿನಿಮಾ ಪೋಸ್ಟರ್ ಗಳನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಕೆ ಸಿನಿಮಾದಲ್ಲಿ ಹಿಂದೂ ದೇವರುಗಳನ್ನು, ಧರ್ಮಗುರುಗಳನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವುದರಿಂದ ದೇಶಾದ್ಯಂತ...

ವಿಧಾನಸಭೆ ಕಲಾಪದ ವೇಳೆ ಬಿಜೆಪಿ ಶಾಸಕರಿಂದ ಮೊಬೈಲ್ ವೀಕ್ಷಣೆ ವಿವಾದ

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲೂ ಮೂವರು ಸಚಿವರು ಅಧಿವೇಶನ ಸಂದರ್ಭದಲ್ಲೇ ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿ ದೇಶಾದ್ಯಂತ ಸುದ್ದಿಯಾಗಿ ಅಧಿಕಾರ ಕಳೆದುಕೊಂಡಿದ್ದರು. ಇದೀಗ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕಬ್ಬು ಬೆಲೆ ನಿಗದಿ ವಿಚಾರ ಸಂಬಂಧ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ...

ದಕ್ಷಿಣ ಸಮುದ್ರ ಭಾಗದಲ್ಲಿ ಚೀನಾ ವಾಯುನೆಲೆ ಸ್ಥಾಪನೆ

ದಕ್ಷಿಣ ಸಮುದ್ರ ಭಾಗದಲ್ಲಿ ಚೀನಾ ತನ್ನ ಬಲವನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂಬ ಅನುಮಾನಕ್ಕೆ ಈಗ ಮತ್ತಷ್ಟು ಪುರಾವೆಗಳು ಲಭಿಸಿವೆ. ವಿವಾದಿತ ದ್ವೀಪವಾದ ಸ್ಪ್ರಾಟಿಯಲ್ಲಿ ವಾಯುನೆಲೆಯನ್ನು ಸ್ಥಾಪಿಸುತ್ತಿರುವ ಸ್ಯಾಟಲೈಟ್ ಚಿತ್ರವನ್ನು ಅಮೆರಿಕ ಬಿಡುಗಡೆ ಮಾಡಿದೆ. ಇದು ಖನಿಜಭರಿತ ದ್ವೀಪವಾಗಿದ್ದು, ತೈವಾನ್, ಮಲೇಷ್ಯಾ, ಫಿಲಿಪೈನ್ಸ್, ವಿಯೆಟ್ನಾಂ ಮತ್ತು...

ವೆಬ್ ಸೈಟ್ ನಲ್ಲಿ ಮೋದಿ ಭಾವಚಿತ್ರ, ಪಕ್ಷ ವಿರೋಧಿಗಳ ಕುತಂತ್ರ: ಆಪ್ ಸ್ಪಷ್ಟನೆ

ಆಮ್ ಆದ್ಮಿ ಪಕ್ಷದ ವೆಬ್ ಸೈಟ್ ನಲ್ಲಿ ಮೋದಿ ಭಾವಚಿತ್ರ ಪಕಟಿಸುವ ಮೂಲಕ ಪ್ರಚಾರ ನಡೆಸಿ ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿದ್ದ ಆಮ್ ಆದ್ಮಿ ಪಕ್ಷ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದೆ. ನಮ್ಮ ಪಕ್ಷದ ವೆಬ್ ಸೈಟ್ ನಲ್ಲಿ ಪ್ರಕಟವಾಗಿದ್ದ...

ಪಾರಂಪರಿಕ ತಾಣಗಳಲ್ಲಿ ವಾಣಿಜ್ಯ ಚಿತ್ರಗಳ ಚಿತ್ರೀಕರಣ ನಿಷೇಧಕ್ಕೆ ಸರ್ಕಾರದ ಚಿಂತನೆ

ಪಾರಂಪರಿಕ ತಾಣಗಳಲ್ಲಿ ವಾಣಿಜ್ಯ ಚಿತ್ರಗಳ ಚಿತ್ರೀಕರಣಕ್ಕೆ ನಿಷೇಧ ಹೇರುವ ಬಗ್ಗೆ ರಾಜ್ಯ ಸರ್ಕಾರ, ಈ ತಿಂಗಳ ಕೊನೆಯಲ್ಲಿ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆ ಇದೆ. ವಾಣಿಜ್ಯ ಚಿತ್ರಗಳ ಚಿತ್ರೀಕರಣದಿಂದ ಪಾರಂಪರಿಕ ತಾಣಾಗಳಿಗೆ ಹಾನಿಯುಂಟಾಗುತ್ತಿರುವ ಕಾರಣದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ....

ಸುಳ್ಯದ ಸ್ನೇಹಶಾಲೆಯಲ್ಲಿ ‘ಮಾಮ್’ ಮಂಗಳನ ಕಕ್ಷೆಯಲ್ಲಿ ನಿಲ್ಲಿಸಿದ ಸಂಭ್ರಮ

ಭಾರತದ ವಿಜ್ಞಾನಿಗಳು ಮಾಡಿರುವ ಅಭೂತಪೂರ್ವ, ಸಾಧನೆಯ ಫಲವಾಗಿ 24 -09-2014 ರಂದು ಮಂಗಳ ಗ್ರಹಕ್ಕೆ ‘ಮಾಮ್ ನೌಕೆ’ ( Mars Orbitary Mission) ಮಂಗಳನ ಕಕ್ಷೆಯನ್ನು ಯಶಸ್ವಿಯಾಗಿ ಮಂಗಳನ ಕಕ್ಷೆಯಲ್ಲಿ ನಿಲ್ಲಿಸಿರುವುದು ಒಂದು ಐತಿಹಾಸಿಕ ಯಶಸ್ಸು. ಇದನ್ನು ಭಾರತೀಯರೆಲ್ಲರೂ ಸಂಭ್ರಮದಿಂದ ಆಚರಿಸುವುದು...

ಚಲನಚಿತ್ರೋತ್ಸವಕ್ಕೆ ಆಹ್ವಾನ, ವಿದ್ಯಾರ್ಥಿಗಳಿಗೆ ಲೇಖನ ಸ್ಪರ್ಧೆ

'ನಾಗಾಭರಣ - ಸಿನಿಮಾವರಣ' ಈ ಚಲನ ಚಿತ್ರೋತ್ಸವದ ಮೂಲಕ ಭಾರತೀಯ ವಿದ್ಯಾಭವನ ಅಂತಾರಾಷ್ಟ್ರೀಯ ಮನ್ನಣೆ ಹಾಗೂ ಜನಪ್ರಿಯತೆ ಪಡೆದ ಕನ್ನಡ ಚಲನಚಿತ್ರ, ಟಿ.ವಿ. ಧಾರಾವಾಹಿ ಹಾಗೂ ನಾಟಕಗಳ ನಿರ್ದೇಶಕರಾಗಿರುವ ಟಿ.ಎಸ್.ನಾಗಾಭರಣ ಅವರ 14 ಚಿತ್ರಗಳ ಪ್ರದರ್ಶನೋತ್ಸವ ಮತ್ತು ವಿಚಾರ ಮಂಥನವನ್ನು ಸೆಪ್ಟೆಂಬರ್...

ಗಡಿಯಲ್ಲಿ ಭಾರತದ ಸೈನಿಕರೊಂದಿಗೆ ಚೀನಾ ಸೈನಿಕರ ವಾಗ್ವಾದ

ಗಡಿಯಲ್ಲಿ ಸದಾ ಕ್ಯತೆತೆಗೆಯುವ ಚೀನಾ ಸೈನಿಕರು, ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಪ್ರದೇಶಕ್ಕೆ ಬಂದು ಭಾರತೀಯ ಸೈನಿಕರ ಜತೆ ವಾಗ್ವಾದ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಚೀನಾ ಸೇನೆಯ ಕ್ಯಾತೆ ನಡುವೆಯೂ ತಾಳ್ಮೆ ಕಳೆದುಕೊಳ್ಳದ ಭಾರತೀಯ...

ಮಧ್ಯಪ್ರದೇಶದಲ್ಲಿ ಕಾಲ್ತುಳಿತ 10ಕ್ಕೂ ಹೆಚ್ಚು ಭಕ್ತಾಧಿಗಳು ಸಾವು

'ಮಧ್ಯಪ್ರದೇಶ'ದಲ್ಲಿರುವ ಚಿತ್ರಕೂಟ ದೇವಾಲಯದಲ್ಲಿ ಕಾಲ್ತುಳಿತ ಉಂಟಾಗಿದ್ದು 10 ಜನರು ಮೃತಪಟ್ಟಿದ್ದು 12ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶ- ಉತ್ತರ ಪ್ರದೇಶದ ಮಧ್ಯಭಾಗದಲ್ಲಿ ಹರಡಿರುವ ವಿಂಧ್ಯ ಪರ್ವತ ಶ್ರೇಣಿಯ ಉತ್ತರ ಭಾಗದಲ್ಲಿ ಚಿತ್ರಕೂಟ ದೇವಾಲಯವಿದೆ. ಸತ್ನಾ ಜಿಲ್ಲಾಧಿಕಾರಿ ಕಾಲ್ತುಳಿತ...

2011-12ನೇ ಸಾಲಿನ ರಾಜ್ಯ ಚಲನ ಚಿತ್ರ ಪ್ರಶಸ್ತಿ ಪ್ರಕಟ

2011-12ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಆ.25ರಂದು ಪ್ರಕಟವಾಗಿದ್ದು ತಲ್ಲಣ ಪ್ರಥಮ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದೆ. ದರ್ಶನ್ ಅತ್ಯುತ್ತಮ ನಟ, ನಿರ್ಮಲಾ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಿರಿಯ ಚಲನಚಿತ್ರ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್ ನೇತೃತ್ವದ ಸಮಿತಿ, ಒಟ್ಟು...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited