Untitled Document
Sign Up | Login    
Dynamic website and Portals
  
March 19, 2015

ಇನ್ನು ಮುಂದೆ ಮತಪತ್ರದಲ್ಲಿ ಅಭ್ಯರ್ಥಿಗಳ ಭಾವಚಿತ್ರ

ನವದೆಹಲಿ : ಮತಪತ್ರಗಳಲ್ಲಿ ಇನ್ನು ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯ ಜತೆ ಅವರ ಫೋಟೋ ಕೂಡ ಇರಲಿದೆ. ಮತದಾರರಿಗೆ ಕೇವಲ ಹೆಸರು ಹಾಗೂ ಚಿಹ್ನೆಯ ಆಧಾರದಲ್ಲಿ ಅಭ್ಯರ್ಥಿಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಅಲ್ಲದೆ, ಒಂದೇ ಹೆಸರಿನ ಹಲ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವ ಕಾರಣ ಗೊಂದಲ ಉಂಟಾಗುತ್ತದೆ. ಹೀಗಾಗಿ ಈ ಗೊಂದಲ ನಿವಾರಿಸಲು 2015ರ ಮೇ 1ರಿಂದ ಮತಪತ್ರಗಳಲ್ಲಿ ಅಭ್ಯರ್ಥಿಗಳ ಫೋಟೋ ಇರುವ ವ್ಯವಸ್ಥೆ ಜಾರಿಗೆ ಬರಲಿದೆ.

ವಿದ್ಯುನ್ಮಾನ ಮತಯಂತ್ರಗಳು, ಕಾಗದದ ಮತಪತ್ರಗಳು, ಅಂಚೆ ಮತಪತ್ರಗಳು ಅಭ್ಯರ್ಥಿಗಳ ಛಾಯಾಚಿತ್ರ ಹೊಂದಿರಲಿವೆ. ಈ ಸಂಬಂಧ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಒಂದೇ ಹೆಸರಿನ ಹಲ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೊಂದಲ ಸೃಷ್ಟಿಸಲೆಂದೇ ನಿಲ್ಲುವುದುಂಟು. ಆದರೆ ಇನ್ನು ಫೋಟೋಗಳು ಅಭ್ಯರ್ಥಿಗಳ ಹೆಸರು ಮತ್ತು ಚಿಹ್ನೆಯ ಮಧ್ಯದಲ್ಲಿ ಇರಲಿವೆ. ಹೀಗಾಗಿ ಇನ್ನು ಗೊಂದಲ ಸೃಷ್ಟಿಸುವ ತಂತ್ರಕ್ಕೆ ಅವಕಾಶವಿಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಹೊಸ ನಿಯಮ ಮೇ 1ರಿಂದ ಜರುಗುವ ಚುನಾವಣೆಗಳಲ್ಲಿ ಜಾರಿಗೆ ಬರುತ್ತಿರುವ ಕಾರಣ, ಆ ನಂತರ ನಡೆಯುವ ಚುನಾವಣೆಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ವೇಳೆ ತಮ್ಮ ಇತ್ತೀಚಿನ ಕಲರ್ ಅಥವಾ ಕಪ್ಪು-ಬಿಳುಪಿನ ಛಾಯಾಚಿತ್ರ (2 ಸೆಂ.ಮೀ. ಅಗಲ, 2.5 ಸೆಂ.ಮೀ. ಉದ್ದ ಅಳತೆಯ) ನೀಡಬೇಕಾಗುತ್ತದೆ. ಒಂದು ವೇಳೆ ನಾಮಪತ್ರ ಸಲ್ಲಿಕೆ ವೇಳೆ ಫೋಟೋ ನೀಡದೇ ಹೋದರೂ, ಅವುಗಳ ಪರಿಶೀಲನೆ ಆಗುವುದರೊಳಗೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಸಲ್ಲಿಸದೇ ಇದ್ದಲ್ಲಿ ಮತಪತ್ರಗಳಲ್ಲಿ ಅಭ್ಯರ್ಥಿಯ ಫೋಟೋ ಹಾಕಲಾಗುವುದಿಲ್ಲ. ಫೋಟೋ ಸಲ್ಲಿಸಿಲ್ಲ ಎಂಬ ಕಾರಣಕ್ಕೆ ಅಭ್ಯರ್ಥಿಯ ನಾಮಪತ್ರವನ್ನು ರದ್ದು ಮಾಡುವುದಿಲ್ಲ ಎಂದು ಆಯೋಗ ತಿಳಿಸಿದೆ.

ಈ ವೇಳೆ ಯಾವುದೇ ಸಮವಸ್ತ್ರ ಧರಿಸಬಾರದು. ಟೋಪಿ ಹಾಕಿಕೊಳ್ಳಬಾರದು ಮತ್ತು ಗಾಗಲ್‌ (ತಂಪು ಕನ್ನಡಕ) ಧರಿಸಿರಬಾರದು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited