Untitled Document
Sign Up | Login    
Dynamic website and Portals
  
January 21, 2015

ನಾನು ಬಿಜೆಪಿ ವ್ಯಕ್ತಿ, ಮೋದಿ ನನ್ನ ಆಕ್ಷನ್ ಹೀರೋ: ಸೆನ್ಸಾರ್ ಬೋರ್ಡ್ ಅಧ್ಯಕ್ಷ ನಿಹಲಾನಿ

ಸೆನ್ಸಾರ್ ಬೋರ್ಡ್  ನೂತನ ಅಧ್ಯಕ್ಷ ಪೆಹ್ಲಾಜ್ ನಿಹಲಾನಿ ಸೆನ್ಸಾರ್ ಬೋರ್ಡ್ ನೂತನ ಅಧ್ಯಕ್ಷ ಪೆಹ್ಲಾಜ್ ನಿಹಲಾನಿ

ನವದೆಹಲಿ : 'ಸೆನ್ಸಾರ್ ಬೋರ್ಡ್' ಗೆ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ಪೆಹ್ಲಾಜ್ ನಿಹಲಾನಿ ಅವರು ಎಲ್ಲರ ಹುಬ್ಬೇರಿಸುವ ಹೇಳಿಕೆ ನೀಡಿದ್ದಾರೆ.

ನ್ಯೂಸ್ ಚಾನೆಲ್ ನೊಂದಿಗೆ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿರುವ ನಿಹಲಾನಿ, ನರೇಂದ್ರ ಮೋದಿ ಅವರು ಈ ದೇಶದ ಧ್ವನಿ, ನಾನು ಬಿಜೆಪಿಯ ವ್ಯಕ್ತಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ, ಬಿಜೆಪಿ ಸಿದ್ಧಾಂತಗಳಲ್ಲಿ ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಕ್ಷನ್ ಹಿರೋ ಇದ್ದಂತೆ, ಅವರೊಬ್ಬ ದಾರ್ಶನಿಕ ವ್ಯಕ್ತಿ ಎಂದು ಪೆಹ್ಲಾಜ್ ನಿಹಲಾನಿ ಹೇಳಿದ್ದಾರೆ. ತಮ್ಮೊಂದಿಗೆ ನೇಮಕ ಮಾಡಲಾಗಿರುವ ಸೆನ್ಸಾರ್ ಬೋರ್ಡ್ ನ ಇತರ 9 ಸದಸ್ಯರೂ ಬಿಜೆಪಿಯವರೇ ಆಗಿದ್ದಾರೆ ಅಥವಾ ಬಲಪಂಥೀಯ ಸಿದ್ಧಾಂತಗಳಲ್ಲಿ ನಂಬಿಕೆಯುಳ್ಳವರಾಗಿದ್ದಾರೆ ಎಂದು ನಿಹಲಾನಿ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪೆಹ್ಲಾಜ್ ನಿಹಲಾನಿ ಅವರು ಬಿಜೆಪಿಗಾಗಿ ಹರ್ ಹರ್ ಮೋದಿ ಘರ್, ಘರ್ ಮೋದಿ ಎಂಬ ವೀಡಿಯೊ ಪ್ರಚಾರದ ಯೋಜನೆಯನ್ನು ಮಾಡಿದ್ದರು.

ವಿವಾದಿತ ಮೆಸೆಂಜರ್ ಆಫ್ ಗಾಡ್ ಚಿತ್ರಕ್ಕೆ ಅನುಮತಿ ನೀಡುವ ವಿವಾದದಿಂದಾಗಿ ಲೀಲಾ ಸ್ಯಾಮ್ಸನ್‌ ರಾಜೀನಾಮೆಯಿಂದ ತೆರವಾಗಿದ್ದ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ ಅಧ್ಯಕ್ಷ ಹುದ್ದೆಗೆ ಪೆಹ್ಲಾಜ್‌ ನಿಹಲಾನಿ ಅವರನ್ನು ನೇಮಿಸಲಾಗಿತ್ತು. ಲೀಲಾ ಸ್ಯಾಮ್ಸನ್‌ ಜೊತೆಗೆ ಉಳಿದ ಸದಸ್ಯರೂ ರಾಜೀನಾಮೆ ನೀಡಿದ್ದರಿಂದ ಎಲ್ಲ ಹುದ್ದೆಗಳು ಖಾಲಿಯಾಗಿದ್ದವು.

ಪೆಹ್ಲಾಜ್‌ ನಿಹಲಾನಿ ಅವರು ಬಿಜೆಪಿ ವ್ಯಕ್ತಿ ಎಂದು ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿರುವಾಗಲೇ, ನಾನು ಬಿಜೆಪಿಯ ವ್ಯಕ್ತಿ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited