ಪ್ಯಾರೀಸ್ : 'ಫ್ರಾನ್ಸ್' ನ ಚಾರ್ಲಿ ಹೆಬ್ಡೋ ಪತ್ರಿಕಾ ಕಚೇರಿ ಮೇಲೆ ಉಗ್ರರು ದಾಳಿ ನಡೆಸಿದ್ದು 12 ಜನ ಸಾವನ್ನಪ್ಪಿದ್ದಾರೆ. ಪ್ಯಾರೀಸ್ ನಲ್ಲಿರುವ ಚಾರ್ಲಿ ಹೆಬ್ಡೋ ಕಚೇರಿಯ ಮೇಲೆ ದಾಳಿ ನಡೆದಿದೆ.
ಐ.ಎಸ್.ಐ.ಎಸ್ ಉಗ್ರ ಅಲ್ ಬಗ್ದಾದಿಯ ವ್ಯಂಗ್ಯ ಚಿತ್ರ ಪ್ರಕಟಿಸಿದ್ದಕ್ಕಾಗಿ ಐ.ಎಸ್.ಐ.ಎಸ್ ಉಗ್ರರು ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಕಪ್ಪು ಬಟ್ಟೆ ತೊಟ್ಟಿದ್ದ ಮುಸುಕುಧಾರಿಯೋರ್ವ ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ.
ಉಗ್ರರ ಗುಂಡಿನ ದಾಳಿಗೆ 10 ಜನ ಪತ್ರಕರ್ತರು, ಇಬ್ಬರು ಪೊಲೀಸರು ಸೇರಿ 12 ಜನ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಫ್ರಾನ್ಸ್ ಅಧ್ಯಕ್ಷ ಹೊಲಾಂಡೆ ಭೇಟಿ ನೀಡಿದ್ದು ದಾಳಿಯನ್ನು ಖಂಡಿಸಿದ್ದಾರೆ. ಅಲ್ಲದೇ ಉಗ್ರರ ದಾಳಿ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ತಿಳಿಸಿದ್ದಾರೆ.
ಮುಸ್ಲಿಂ ನಾಯಕರ ವಿಡಂಬನಾತ್ಮಕ ಚಿತ್ರ ಪ್ರಕಟಿಸಿದ್ದಕ್ಕೆ 2012ರಲ್ಲಿ ಕೂಡ ಕಛೇರಿ ಮೇಲೆ ಬಾಂಬ್ ಎಸೆಯಲಾಗಿತ್ತು.