Untitled Document
Sign Up | Login    
Dynamic website and Portals
  
January 30, 2016

ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಶನಿವಾರ ವರ್ಣಮೈತ್ರಿ ಕಲಾ ಉತ್ಸವ

ರಾಘವೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ ಶನಿವಾರ ವರ್ಣಮೈತ್ರಿ ಕಲಾ ಉತ್ಸವ

BW News Bureau : ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಗಳ ದಿವ್ಯಸಾನ್ನಿಧ್ಯದಲ್ಲಿ ಶನಿವಾರ, ಜ. 30 ರಂದು 'ವರ್ಣಮೈತ್ರಿ ಕಲಾ ಉತ್ಸವ' ಸಂಪನ್ನವಾಗಲಿದೆ.

ಕೊಬಾಲ್ಟ್(ರಿ) ಫೋರಮ್ ಆಪ್ ಆರ್ಟ್ಸ & ಮ್ಯೂಸಿಕ್ ಸಂಸ್ಥೆಯು ತನ್ನ 9 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತವಾಗಿ 'ವರ್ಣಮೈತ್ರಿ ಕಲಾ ಉತ್ಸವ'ವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿದ್ದು, ರಾಜರಾಜೇಶ್ವರಿ ನಗರದ ಮುನಿವೆಂಕಟಯ್ಯ ರಂಗಮಂದಿರದಲ್ಲಿ ಈ ಕಲಾ ಉತ್ಸವವು ನಡೆಯಲಿದೆ.

ನಾಡಿನ ಖ್ಯಾತ ಕವಿ-ಕಲಾವಿದರುಗಳು ಭಾಗವಹಿಸುತ್ತಿರುವ ಈ ಕಲಾ ಉತ್ಸವದಲ್ಲಿ ಪೂಜ್ಯ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರು ಸಾನ್ನಿಧ್ಯವಹಿಸಿ ಆಶೀರ್ವಚನವನ್ನು ಅನುಗ್ರಹಿಸಲಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

ಈ ಕಾರ್ಯಕ್ರಮದಲ್ಲಿ ಕಲಾಶಿಬಿರ, ಚಿತ್ರಕಲಾ ಸ್ಪರ್ಧೆ, ಸುಗಮ ಸಂಗೀತ, ಚಿತ್ರಕಲಾ ಪ್ರದರ್ಶನ, ಯಕ್ಷಗಾನ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ.

 

 

Share this page : 
 

More News From : Art & Culture

ಅರಮನೆ ನಗರಿಯಲ್ಲಿ ಕಳೆಕಟ್ಟಿದ ಜಂಬೂಸವಾರಿ ಮೆರವಣಿಗೆ: ಮನಸೂರೆಗೊಳ್ಳುತ್ತಿದೆ ಸಾಂಸ್ಕೃತಿಕ ಕಲಾತಂಡಗಳ ವೈಭವ
 • ಅರಮನೆ ನಗರಿಯಲ್ಲಿ ಕಳೆಕಟ್ಟಿದ ಜಂಬೂಸವಾರಿ ಮೆರವಣಿಗೆ: ಮನಸೂರೆಗೊಳ್ಳುತ್ತಿದೆ ಸಾಂಸ್ಕೃತಿಕ ಕಲಾತಂಡಗಳ ವೈಭವ
 • ವಿಶ್ವ ವಿಖ್ಯಾತ ಜಂಬೂಸವಾರಿ ಮೆರವಣಿಗೆಗೆ ವೈಭವದ ಚಾಲನೆ ದೊರೆತಿದ್ದು, ಅರಮನೆ ನಗರಿಯಲ್ಲಿ ರಾಜ ಗಾಂಭೀರ್ಯದಿಂದ ಸಾಗುತ್ತಿರುವ ಗಜೆಪಡೆಗಳು, ಸಾಂಸ್ಕೃತಿಕ ಕಲಾತಂಡಗಳು, ಚಿತ್ತಾಕರ್ಷಕ ಸ್ತಬ್ದಚಿತ್ರಗಳು ಕಣ್ಮನಸೆಳೆಯುತ್ತಿವೆ.
 • ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ
 • ಯಕ್ಷಗಾನ ಮಾಹಿತಿಗಾಗಿ ಮೊಬೈಲ್ ಆಪ್!!!
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited