Untitled Document
Sign Up | Login    
Dynamic website and Portals
  
August 25, 2014

ಗಡಿಯಲ್ಲಿ ಭಾರತದ ಸೈನಿಕರೊಂದಿಗೆ ಚೀನಾ ಸೈನಿಕರ ವಾಗ್ವಾದ

ನವದೆಹಲಿ : ಗಡಿಯಲ್ಲಿ ಸದಾ ಕ್ಯತೆತೆಗೆಯುವ ಚೀನಾ ಸೈನಿಕರು, ವಾಸ್ತವ ನಿಯಂತ್ರಣ ರೇಖೆಯನ್ನು ದಾಟಿ ಭಾರತದ ಪ್ರದೇಶಕ್ಕೆ ಬಂದು ಭಾರತೀಯ ಸೈನಿಕರ ಜತೆ ವಾಗ್ವಾದ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಚಾರ ತಡವಾಗಿ ಬೆಳಕಿಗೆ ಬಂದಿದ್ದು, ಚೀನಾ ಸೇನೆಯ ಕ್ಯಾತೆ ನಡುವೆಯೂ ತಾಳ್ಮೆ ಕಳೆದುಕೊಳ್ಳದ ಭಾರತೀಯ ಸೈನಿಕರು, ಚೀನಾ ಸೈನಿಕರನ್ನು ಹಿಮ್ಮೆಟ್ಟಿಸಿರುವ ಕುರಿತು ವಿಡಿಯೋ ಚಿತ್ರಣವೊಂದು ಹೊರಬಿದ್ದಿದೆ.

ವಿಡಿಯೋ ಚಿತ್ರಣದಲ್ಲಿರುವ ಪ್ರಕಾರ ಚೀನಾ ಸೈನಿಕರು ಗಡಿ ಗುರುತಿಸುವ ಪ್ರದೇಶದಲ್ಲಿಟ್ಟುರುವ ಕಲ್ಲುಗಳನ್ನು ತೆಗೆದು ಹಾಕುತ್ತಿರುವುದು ಕಂಡುಬಂದಿದೆ. ಈ ವೇಳೆ ಸ್ಥಳಕ್ಕೆ ಧಾವಿಸಿದ ಭಾರತೀಯ ಯೋಧರು, ಇದು ಭಾರತಕ್ಕೆ ಸೇರಿದ ಪ್ರದೇಶವಾಗಿದ್ದು, ಹಿಂದಕ್ಕೆ ಸರಿಯುವಂತೆ ಸೂಚಿಸಿದ್ದಾರೆ. ಇದಕ್ಕೆ ಚೀನಾ ಸೈನಿಕರು ಒಪ್ಪದಿದ್ದಾಗ, ಭಾರತೀಯ ಸೈನಿಕರು ಹಿಂದಿಯಲ್ಲಿ ಜೋರಾಗಿ ಬೈದು, ಚೀನಿ ಸೈನಿಕರನ್ನು ಲಘುವಾಗಿ ಹಿಂದಕ್ಕೆ ತಳ್ಳುವುದು ಕಂಡುಬಂದಿದೆ.

19 ನಿಮಿಷಗಳ ವಿಡಿಯೋದಲ್ಲಿ ಉಭಯ ದೇಶಗಳ ಸೈನಿಕರು ಪರಸ್ಪರ ಮಾತಿನ ಚಕಮಕಿ ನಡೆಸುವ ಚಿತ್ರಣವಿದೆ.

ಈ ಘಟನೆ ನಡೆದ ಪ್ರದೇಶ ಹಿಮಾಚಲಪ್ರದೇಶವೋ, ಅಸ್ಸಾಂ ಅಥವಾ ಲಡಾಖ್ ಗಡಿಪ್ರದೇಶವೋ ಎಂಬುದು ಖಚಿತಪಟ್ಟಿಲ್ಲ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited