ಲೇಹ್ : ಭಾರತದ ಗಡಿ ಪ್ರದೇಶದಲ್ಲಿ ಚೀನಾ ಮತ್ತೆ ತನ್ನ ಕ್ಯಾತೆ ಮುಂದುವರೆಸಿದೆ. ಲಡಾಕ್ ನ ಚುಮಾರ್ ಪ್ರಾಂತ್ಯದಲ್ಲಿ ಚೀನಾ ಸೈನಿಕರು ಟೆಂಟ್ ಹಾಕಿದ್ದಾರೆ.
ಈ ಮೂಲಕ ಚುಮಾರ್ ಪ್ರಾಂತ್ಯದಲ್ಲಿ ಚೀನಾ ಗಡಿ ತಂಟೆ ಮುಂದುವರೆದಿದೆ. ಭಾರತೀಯ ಸೇನೆಯ ಎಚ್ಚರಿಕೆ ನಡುವೆಯೂ 100 ಚೀನಾ ಸೈನಿಕರು ಚುಮಾರ್ ನಲ್ಲಿ ಟೆಂಟ್ ಹಾಕಿದ್ದಾರೆ.
ಚೀನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭಾರತ ಭೇಟಿ ವೇಳೆ ಎರಡನೇ ದಿನ ಚುಮಾರ್ ನಿಂದ ನಿರ್ಗಮಿಸಿದ್ದ ಚೀನಿ ಸೈನಿಕರು ಸೆ.19ರಂದು 35 ಚೀನಿ ಸೈನಿಕರು ಆಗಮಿಸಿದ್ದರು. ಆದರೀಗ ಈ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.
ಇದೇ ವೇಳೆ ಭಾರತೀಯ ವಾಯುವಲಯ ಉಲ್ಲಂಘಿಸಿ ಚೀನಾ ಹೆಲಿಕಾಪ್ಟರ್ ಗಳಲ್ಲಿ ಬಂದು, ಚೀನಿ ಸೈನಿಕರಿಗೆ ಆಹಾರ ಪೊಟ್ಟಣಗಳನ್ನು ಎಸೆಯಲಾಗಿದೆ. ತಾವು ವಾಪಸ್ ತೆರಳಬೇಕೆಂದರೆ ಭಾರತೀಯ ಸೈನಿಕರೂ ಹಿನ್ನಡೆಯಬೇಕು ಎಂಬುದು ಚೀನಿ ಸೈನಿಕರ ವಾದವಾಗಿದೆ.
ಭಾರತೀಯ ಸೇನೆ ನೈಜ ಗಡಿ ನಿಯಂತ್ರಣ ರೇಖೆ ವೀಕ್ಷಣೆಗೆ ಅನುಕೂಲವಾಗುಂತೆ ವೀಕ್ಷಣಾ ನೆಲೆ ಸ್ಥಾಪಿಸಿದೆ. ಅಲ್ಲದೇ ಚೀನಾ ಚಟುವಟಿಕೆಗಳ ಮೇಲೆ ಕಣ್ಣಿಡಲಾಗಿದೆ.