Untitled Document
Sign Up | Login    
Dynamic website and Portals
  
August 10, 2015

ಯೋಗಕ್ಕೆ ಪೇಟೆಂಟ್ ಪಡೆದುಕೊಳ್ಳಲು ಕೇಂದ್ರ ಸರ್ಕಾರ ನಿರ್ಧಾರ

ನವದೆಹಲಿ : ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಮತ್ತು ಪ್ರಜೆಗಳು ದೇಶದ ಪುರಾತನ ಯೋಗ ತಂತ್ರಗಳಿಗೆ ಸಂಬಂಧಿಸಿದಂತೆ ಪೇಟೆಂಟ್‌ ಹಾಗೂ ಟ್ರೇಡ್‌ಮಾರ್ಕ್‌ ಪಡೆಯುವ ಪ್ರಯತ್ನಿಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಯೋಗಕ್ಕೆ ಪೇಟೆಂಟ್ ಪಡೆದುಕೊಳ್ಳಲು ನಿರ್ಧರಿಸಿದೆ.

1500ಕ್ಕೂ ಹೆಚ್ಚು ಯೋಗಾಸನಗಳನ್ನು ಗುರುತಿಸಿ, ಆ ಪೈಕಿ 250 ಆಸನಗಳ ವಿಡಿಯೋ ಚಿತ್ರೀಕರಣ ಮಾಡಿಸಿ ಅವುಗಳನ್ನು ದೇಶದ ಸಾಂಪ್ರದಾಯಿಕ ಜ್ಞಾನ ಎಂದು ವರ್ಗೀಕರಿಸಿದೆ.

ಪ್ರಾಚೀನ ಗ್ರಂಥಗಳ ಸಾಹಿತ್ಯದಲ್ಲಿ ಸಿಗುವ ಸುಮಾರು 1500 ಯೋಗದ ತಂತ್ರಗಳನ್ನು ನಮ್ಮ ತಜ್ನರು ಗುರುತಿಸಿದ್ದಾರೆ. ಸುಮಾರು 250 ಆಸನಗಳ ವಿಡಿಯೋ ಚಿತ್ರೀಕರಣ ಈಗಾಗಲೇ ಮಾಡಲಾಗಿದೆ. ಮುಂದಿನ 5ರಿಂದ 6 ತಿಂಗಳ ಅವಧಿಯಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಬಳಿಕ ಭಾರತೀಯ ಯೋಗಾಸನಗಳಿಗೆ ಪೇಟೆಂಟ್‌ ಪಡೆಯುವ ವಿದೇಶಿ ಸಂಸ್ಥೆಗಳ ಪ್ರಯತ್ನಗಳನ್ನು ನಿಷ್ಫಲಗೊಳಿಸಬಹುದು ಎಂದು ಸಾಂಪ್ರದಾಯಿಕ ಜ್ಞಾನ ಡಿಜಿಟಲ್‌ ಲೈಬ್ರರಿ (ಟಿಕೆಡಿಎಲ್‌)ನ ಮುಖ್ಯಸ್ಥೆ ಅರ್ಚನಾ ಶರ್ಮಾ ತಿಳಿಸಿದ್ದಾರೆ.

ವಿವಿಧ ಯೋಗ ಪದ್ಧತಿಗಳಿಗೆ ಪಾಶ್ಚಾತ್ಯ ದೇಶಗಳು ಬೇರೆಯವರಿಗೆ ಪೇಟೆಂಟ್‌ ನೀಡಿವೆ ಮತ್ತು ಅವುಗಳಲ್ಲಿ ಅನೇಕ ಕೃತಿಸ್ವಾಮ್ಯ ಹೊಂದಿವೆ.

ಈ ಹಿಂದೆ ಕೆಲವು ಬಹುರಾಷ್ಟ್ರೀಯ ಕಂಪೆನಿಗಳು ಬೇವು, ಅರಿಶಿಣದ ಪೇಟೆಂಟ್‌ ಕೋರಿ ಅರ್ಜಿ ಸಲ್ಲಿಸಿದ್ದವು. ಅರಿಶಿಣದ ಪೇಟೆಂಟ್‌ ಅಮೆರಿಕ ಕಂಪೆನಿಯೊಂದರ ಪಾಲಾಗಿತ್ತು. ಅದನ್ನು ರದ್ದುಪಡಿಸಲು ಸರಕಾರ ಕಾನೂನು ವೆಚ್ಚ, ಪ್ರವಾಸ ಮುಂತಾದವುಗಳಿಗೆ ಕೋಟ್ಯಂತರ ರೂ. ಖರ್ಚು ಮಾಡಿತ್ತು.

ಇದರ ನಂತರ ಟಿಕೆಡಿಎಲ್‌ ಸ್ಥಾಪಿಸಲು ನಿರ್ಧರಿಸಲಾಯಿತು. ಇದರಲ್ಲಿ ಈಗ ಆಯುರ್ವೇದ, ಯುನಾನಿ, ಸಿದ್ಧ ಪದ್ಧತಿಯಲ್ಲಿ ಬಳಸಲಾಗುವ 2.93 ಲಕ್ಷ ಔಷಧಗಳ ಮಾಹಿತಿ ಇದೆ. ಇದು ಸ್ಪಾನಿಷ್, ಜರ್ಮನ್, ಇಂಗ್ಲೀಷ, ಜಪಾನೀಸ್ ಮತ್ತು ಫ್ರೆಂಚ್ ಭಾಷೆಗಳಲ್ಲಿ ಕೂಡ ಲಭ್ಯವಿದೆ.

ಈ ಮಾಹಿತಿಯನ್ನು ಭಾರತ ಸರಕಾರವು ಅಮೆರಿಕ, ಕೆನಡಾ, ಜರ್ಮನಿ, ಜಪಾನ್‌, ಆಸ್ಟ್ರೇಲಿಯಾದಲ್ಲಿನ ಪೇಟೆಂಟ್‌ ನೀಡುವ ಕಂಪೆನಿಗಳ ಜತೆ ಹಂಚಿಕೊಂಡಿದೆ. ಹೀಗಾಗಿ ಯಾವುದೇ ಕಂಪೆನಿ ಪೇಟೆಂಟ್‌ ಕೋರಿ ಅರ್ಜಿ ಸಲ್ಲಿಸಿದಾಗ ಪೇಟೆಂಟ್‌ ವಿತರಿಸುವ ಕಂಪೆನಿಗಳು ಟಿಕೆಡಿಎಲ್‌ನಲ್ಲಿರುವ ಮಾಹಿತಿಯನ್ನು ಗಣನೆಗೆ ತೆಗೆದುಕೊಳ್ಳುತ್ತವೆ.

ಟಿಕೆಡಿಎಲ್‌ ನ ಒಂದು ತಂಡ ನಿರಂತರ ಪೇಟೆಂಟ್ ಗೆ ಸಲ್ಲಿಸಿರುವ ಅರ್ಜಿಯನ್ನು ವೀಕ್ಷಿಸುತ್ತಿರುತ್ತದೆ. ಒಂದು ವೇಳೆ ಅದು ಟಿಕೆಡಿಎಲ್‌ ನಲ್ಲಿರುವ ಮಾಹಿತಿಗೆ ಸಂಬಂಧ ಪಟ್ಟಿದ್ದರೆ, ಟಿಕೆಡಿಎಲ್‌ ಅನುದಾನ ಪೂರ್ವ ವಿರೋಧ ಅರ್ಜಿ ಸಲ್ಲಿಸುತ್ತದೆ.

ಕಳೆದ ಒಂದು ತಿಂಗಳಲ್ಲಿ ಭಾರತ ಎರಡು ಭಾರತೀಯ ಸಾಂಪ್ರದಾಯಿಕ ಔಷಧಕ್ಕೆ ಪೇಟೆಂಟ್ ಪಡೆದುಕೊಳ್ಳುವ ಪ್ರಯತ್ನವನ್ನು ನಿಷ್ಪಲಗೊಳಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited