Untitled Document
Sign Up | Login    
Dynamic website and Portals
  
April 2, 2015

ಯೋಗವನ್ನು ಸೇವಾ ರಫ್ತು ವಿಭಾಗಕ್ಕೆ ಸೇರಿಸಲು ಮೋದಿ ಸರ್ಕಾರದ ನಿರ್ಧಾರ

ನವದೆಹಲಿ : ಭಾರತದ 'ಯೋಗ'ವನ್ನು ವಿಶ್ವಮಟ್ಟದಲ್ಲಿ ಮಾರ್ಕೆಟಿಂಗ್ ಮಾಡಲು ನಿರ್ಧರಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಯೋಗವನ್ನು ಸೇವಾ ರಫ್ತು ವಿಭಾಗಕ್ಕೆ ಸೇರಿಸಲು ತೀರ್ಮಾನಿಸಿದೆ.

ವಿದೇಶಿ ವ್ಯಾಪಾರ ನೀತಿಯಲ್ಲಿ ಯೋಗವನ್ನು ಸೇವಾ ರಫ್ತು ವಿಭಾಗಕ್ಕೆ ಸೇರಿಸಿ ಬ್ರ್ಯಾಂಡಿಂಗ್ ಪ್ರಚಾರ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಔಷಧ, ತೋಟಗಾರಿಕೆ ಎಂಜಿನಿಯರಿಂಗ್, ಯೋಗ, ಕರಕುಶಲ ವಸ್ತುಗಳ ಸಾಂಪ್ರದಾಯಿಕ ಸತ್ವಗಳನ್ನು ಹೊಂದಿರುವ ಕ್ಷೇತ್ರಗಳ ಉತ್ಪನ್ನಗಳನ್ನು ವಿಶ್ವಮಟ್ಟದಲ್ಲಿ ಉತ್ತೇಜಿಸಲು ಭಾರತ ಸರ್ಕಾರ ತೀರ್ಮಾನಿಸಿದೆ ಎಂದು ಅವರು ಹೇಳಿದ್ದಾರೆ.

ಯೋಗದೊಂದಿಗೆ ಭಾರತದ ಸಾಂಪ್ರದಾಯಿಕ ಔಷಧಗಳನ್ನೂ ಸೇವಾ ರಫ್ತು ವಿಭಾಗಕ್ಕೆ ಸೇರಿಸಿ ವಿಶ್ವಮಟ್ಟದಲ್ಲಿ ಮಾರುಕಟ್ಟೆ ಒದಗಿಸುವುದು ಮೋದಿ ಸರ್ಕಾರದ ಉದ್ದೇಶವಾಗಿದೆ. ಈ ಎಲ್ಲಾ ವಿಭಾಗಗಳಲ್ಲೂ ಭಾರತ ತನ್ನದೇ ಆದ ವಿಶಿಷ್ಠ ಸಾಮರ್ಥ್ಯ ಹೊಂದಿದೆ. ಈ ವಿಭಾಗಗಳಿಗೆ ಜಾಗತಿಕ ಮಟ್ಟದಲ್ಲಿ ಪ್ರಚಾರ ದೊರೆತರೆ, ಭಾರತ 'ವಿಶ್ವದ ಫಾರ್ಮಸಿ’ ಎಂಬ ಹೆಗ್ಗಳಿಗೆ ಪಾತ್ರವಾಗಲಿದೆ. ಎಂದು ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ.

ಜೂನ್.21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ ಮಾಡುವ ಭಾರತದ ಪ್ರಸ್ತಾವನೆಗೆ ವಿಶ್ವಸಂಸ್ಥೆಯಲ್ಲಿ ಅಂಗೀಕಾರ ದೊರೆತಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited