Untitled Document
Sign Up | Login    
Dynamic website and Portals
  
September 18, 2014

ಭಾರತದ ಗಡಿಯಲ್ಲಿ ಚೀನಾ ಪಡೆಯಿಂದ ಮತ್ತೆ ಕ್ಯಾತೆ

ಲಡಾಕ್ : ಒಂದೆಡೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮೂರು ದಿನಗಳ ಭಾರತದ ಪ್ರವಾಸದಲ್ಲಿದ್ದರೆ, ಇನ್ನೊಂದೆಡೆ ಭಾರತದ ಗಡಿಯಲ್ಲಿ ಚೀನಾ ಪಡೆ ಮತ್ತೆ ಕ್ಯಾತೆ ತೆಗೆದಿದೆ.

ಲಡಾಕ್ ಗಡಿಯಲ್ಲಿ ಬೆಳ್ಳಂ ಬೆಳಿಗ್ಗೆಯೇ ಚೀನಾ ಪಡೆ ಭಾರತದ ಗಡಿಯೊಳಗೆ ಒಳ ನುಸುಳಿದೆ. ಈ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ಗಡಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಲಡಾಕ್ ನ ಅಂತರಾಷ್ಟ್ರೀಯ ಗಡಿಯಲ್ಲಿ ಭಾರತದ ಗಡಿರೇಖೆಯಲ್ಲಿ ಸುಮಾರು 4-5 ಕಿ.ಮೀ ನಷ್ಟು ದೂರುದವರೆಗೆ ಚೀನಾ ಸೇನೆಯ ಸಾವಿರಕ್ಕೂ ಹೆಚ್ಚು ಯೋಧರು ಒಳ ನುಸುಳಿದ್ದಾರೆ. ಈ ಸಂಬಂಧ ಉಭಯ ರಾಷ್ಟ್ರಗಳ ಧ್ವಜ ಸಭೆ ನಡೆಯುವ ಸಾಧ್ಯತೆಯಿದೆ.

ಈ ಹಿಂದೆ ಡೆಮ್ ಚೋಕ್ ನಲ್ಲಿ ಚೀನಾ ಪಡೆ ಒಳನುಸುಳಿತ್ತು. ಈ ಸಂಬಂಧ ಕಳೆದ ಮಂಗಳವಾರ ಧ್ವಜ ಸಭೆ ನಡೆಸುವ ಮೂಲಕ ಎಚ್ಚರಿಕೆ ನೀಡಲಾಗಿತ್ತು. ಆದಾಗ್ಯೂ ಮತ್ತೆ ಚೀನಾ ಪಡೆ ತನ್ನ ಹಳೇ ಚಾಳಿಯನ್ನೇ ಮುಂದುವರೆಸಿದೆ. ಈ ನಿಟ್ಟಿನಲ್ಲಿ ಸೆ.19ರಂದು ಉಭಯ ದೇಶಗಳ ನಡುವೆ ಮತ್ತೆ ಧ್ವಜ ಸಭೆ ನಡೆಯಲಿದೆ. ಈಗಾಗಲೇ ಚೀನಾ ನೂರಕ್ಕೂ ಹೆಚ್ಚುಬಾರಿ ಭಾರತದ ಗಡಿಯಲ್ಲಿ ಒಳ ನುಸುಳಿದೆ ಎಂದು ತಿಳಿದುಬಂದಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited